ಮೊಜ್ತಬಾ ಖಮೇನಿ ವಿಡಿಯೊ ಬಿಡುಗಡೆ: ಇರಾನ್‌ನ ಪರಮೋಚ್ಚ ನಾಯಕ ಎಲ್ಲಿದ್ದಾರೆ?

ಮೊಜ್ತಬಾ ಖಮೇನಿ ವಿಡಿಯೊ ಬಿಡುಗಡೆ: ಇರಾನ್‌ನ ಪರಮೋಚ್ಚ ನಾಯಕ ಎಲ್ಲಿದ್ದಾರೆ?

ಮೊಜ್ತಬಾ ಖಮೇನಿ ವಿಡಿಯೊ ಬಿಡುಗಡೆ: ಇರಾನ್‌ನ ಪರಮೋಚ್ಚ ನಾಯಕ ಎಲ್ಲಿದ್ದಾರೆ?

ಟೆಹರಾನ್: ಇರಾನ್‌ನ ಪರಮೋಚ್ಚ ನಾಯಕ ಮೊಜ್ತಬಾ ಖಮೇನಿ ಅವರ ಆರೋಗ್ಯದ ಕುರಿತು ಕೆಲವು ತಿಂಗಳುಗಳಿಂದ ವ್ಯಾಪಕ ಊಹಾಪೋಹಗಳು ಹಬ್ಬಿರುವ ಹಿನ್ನೆಲೆಯಲ್ಲಿ, ಇರಾನ್‌ ನಿಯಂತ್ರಣದ ಸುದ್ದಿ ಸಂಸ್ಥೆ ‘ಮೆಹರ್‘ ಮೊಜ್ತಬಾ ಖಮೇನಿ ಅವರ ದಿನಾಂಕವಿಲ್ಲದ ವಿಡಿಯೊವೊಂದನ್ನು ಹಂಚಿಕೊಂಡಿದೆ.

ಕಳೆದ ಫೆಬ್ರುವರಿ ತಿಂಗಳಲ್ಲಿ ನಡೆದ ಅಮೆರಿಕ-ಇಸ್ರೇಲ್ ವೈಮಾನಿಕ ದಾಳಿಯಲ್ಲಿ ಮೊಜ್ತಬಾ ಅವರ ತಂದೆ ಅಯತೊಲ್ಲಾ ಅಲಿ ಖಮೇನಿ ಮೃತಪಟ್ಟಿದ್ದರು. ಆ ದಾಳಿಯ ಬಳಿಕ ಮೊಜ್ತಬಾ ಸಾರ್ವಜನಿಕವಾಗಿ ಕಾಣಿಸಿಕೊಂಡಿರಲಿಲ್ಲ.

ಫೆಬ್ರುವರಿ 28ರಂದು ನಡೆದ ದಾಳಿಯಲ್ಲಿ ಮೊಜ್ತಬಾ ಅವರ ಮುಖ ಹಾಗೂ ಕಾಲುಗಳಿಗೆ ತೀವ್ರ ಗಾಯಗಳಾಗಿವೆ ಎಂದು ವರದಿಯಾಗಿತ್ತು. ಇದೀಗ ಅವರ ವಿಡಿಯೊ ಬಿಡುಗಡೆಯಾಗಿದ್ದು ಮುಚ್ಚಿದ ಕೋಣೆಯೊಂದರಲ್ಲಿ ಕಾರ್ಪೆಟ್ ಮೇಲೆ ಕುಳಿತಿರುವುದು ಕಂಡುಬಂದಿದೆ. ಕಪ್ಪು ಪೇಟ ಹಾಗೂ ಬಿಳಿ ಉಡುಪಿನ ಮೇಲೆ ತಿಳಿ ಬೂದು ಬಣ್ಣದ ನಿಲುವಂಗಿಯನ್ನು ಧರಿಸಿದ್ದ ಅವರು, ತಮ್ಮ ಸುತ್ತಲೂ ಕುಳಿತಿದ್ದ ಜನರೊಂದಿಗೆ ಸಂವಾದ ನಡೆಸುತ್ತಿರುವುದು ಕಂಡುಬಂದಿದೆ.

12 ಸೆಕೆಂಡುಗಳ ಈ ವಿಡಿಯೊದಲ್ಲಿ ಮೊಜ್ತಬಾ ಆರೋಗ್ಯವಾಗಿರುವಂತೆ ಕಂಡುಬಂದಿದೆ. ಈ ವಿಡಿಯೊವನ್ನು ಮೆಹರ್‌ ವೆಬ್‌ಸೈಟ್‌ ಶನಿವಾರ ಪ್ರಕಟಿಸಿದೆ.

ಮೊಜ್ತಬಾ ಖಮೇನಿ ಎಲ್ಲಿದ್ದಾರೆ?

ಮಾರ್ಚ್ 8ರಂದು ಇರಾನ್‌ನ ಮೂರನೇ ಪರಮೋಚ್ಚ ನಾಯಕನಾಗಿ ನೇಮಕಗೊಂಡಾಗಿನಿಂದ ಮೊಜ್ತಬಾ ಖಮೇನಿ ಅವರು ಸರ್ಕಾರಿ ಸುದ್ದಿ ಸಂಸ್ಥೆಗಳ ಮೂಲಕ ಹಲವು ಲಿಖಿತ ಹೇಳಿಕೆಗಳನ್ನು ಬಿಡುಗಡೆ ಮಾಡಿದ್ದಾರೆಯೇ ಹೊರತು, ವಿಡಿಯೊದಲ್ಲಿ ಅಥವಾ ಆಡಿಯೊ ಮೂಲಕ ಅವರು ಕಾಣಿಸಿಕೊಂಡಿಲ್ಲ. ಅಲ್ಲದೇ, ಕಳೆದ ತಿಂಗಳು ನಡೆದ ತಮ್ಮ ತಂದೆಯ ಅಂತ್ಯಸಂಸ್ಕಾರದ ಸಮಾರಂಭಗಳಲ್ಲೂ ಮೊಜ್ತಬಾ ಕಾಣಿಸಿಕೊಂಡಿರಲಿಲ್ಲ.

ಸದ್ಯ ಅವರು ಎಲ್ಲಿದ್ದಾರೆ ಎಂಬುದು ಇಲ್ಲಿಯವರೆಗೂ ತಿಳಿದುಬಂದಿಲ್ಲ ಎಂದು ಮಾಧ್ಯಮ ಸಂಸ್ಥೆಗಳು ವರದಿ ಮಾಡಿವೆ.

ಮೊಜ್ತಬಾ ಅವರೊಂದಿಗೆ ಸಂಪರ್ಕ ಸಾಧಿಸುವುದು ಸದ್ಯಕ್ಕೆ ತುಂಬಾ ಕಷ್ಟಕರವಾಗಿದೆ. ಆದಾಗ್ಯೂ, ತಾನು ಅವರೊಂದಿಗೆ ಹಲವು ಸಭೆಗಳನ್ನು ನಡೆಸಲು ಸಾಧ್ಯವಾಗಿದೆ ಎಂದು ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಕಿಯಾನ್ ಈ ವಾರ ತಿಳಿಸಿದ್ದರು.

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕಳೆದ ತಿಂಗಳು ಮಾತನಾಡಿ, ಮೊಜ್ತಬಾ ಅವರನ್ನು ಶೇ 90 ರಷ್ಟು ಮುಗಿಸಲಾಗಿದೆ ಎಂದು ಹೇಳಿದ್ದರು. ಇಸ್ರೇಲ್‌ನ ನ್ಯೂಸ್ ಚಾನೆಲ್ ‘14‘ ಇತ್ತೀಚೆಗೆ ಮೊಜ್ತಬಾ ಅವರ ಪರಿಸ್ಥಿತಿ ತುಂಬಾ ಹದಗೆಟ್ಟಿದೆ ಎಂದು ವರದಿ ಮಾಡಿತ್ತು.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ