
ಅದೃಷ್ಟವಲ್ಲ,ನಿರ್ಧಾರಗಳು ಕೈಯಲ್ಲಿವೆ..ಈ ವಾರದ ಪ್ರಮುಖ 10 ಸುದ್ದಿಗಳು ಇಲ್ಲಿವೆ..
ರಾಜ್ಯ, ರಾಷ್ಟ್ರೀಯ, ವಿದೇಶ ಸೇರಿದಂತೆ ಈ ವಾರದ ಪ್ರಮುಖ 10 ಸುದ್ದಿಗಳು ಇಲ್ಲಿವೆ...
ರೋಹಿಣಿ ವಿರುದ್ಧ ತನಿಖೆ: ರಾಜ್ಯ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ನೋಟಿಸ್
ನವದೆಹಲಿ: ಪರಿಸರ ಸ್ನೇಹಿ ಬಟ್ಟೆಯ ಕೈಚೀಲಗಳನ್ನು ಖರೀದಿಸುವ ಪ್ರಕ್ರಿಯೆಯಲ್ಲಿ ಕೋಟ್ಯಂತರ ರೂಪಾಯಿಗಳ ಅಕ್ರಮ ಎಸಗಿದ ಆರೋಪದಲ್ಲಿ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ತನಿಖೆ ನಡೆಸಲು ಪೂರ್ವಾನುಮತಿ ನೀಡಲು ಕರ್ನಾಟಕ ಸರ್ಕಾರಕ್ಕೆ ನಿರ್ದೇಶಿಸಿದ್ದ ಹೈಕೋರ್ಟ್ ಆದೇಶಕ್ಕೆ ಸುಪ್ರೀಂ ಕೋರ್ಟ್ ಸೋಮವಾರ ತಡೆಯಾಜ್ಞೆ ನೀಡಿದೆ.
ಹೊಸೂರು–ಬೊಮ್ಮಸಂದ್ರ ಮೆಟ್ರೊ: ಕರ್ನಾಟಕದೊಂದಿಗೆ ಚರ್ಚೆ ಎಂದ ತಮಿಳುನಾಡು ಸರ್ಕಾರ
ಚೆನ್ನೈ: ಕೃಷ್ಣಗಿರಿಯ ಹೊಸೂರು ಮತ್ತು ಕರ್ನಾಟಕದ ಬೊಮ್ಮಸಂದ್ರದ ನಡುವೆ ಮೆಟ್ರೊ ರೈಲು ಸಂಪರ್ಕ ಕಲ್ಪಿಸುವ ಯೋಜನೆಯ ಅನುಷ್ಠಾನಕ್ಕೆ ತಮಿಳುನಾಡು ಸರ್ಕಾರ ಯತ್ನಿಸಲಿದೆ. ಈ ಸಂಬಂಧ ಕೇಂದ್ರ ಹಾಗೂ ಕರ್ನಾಟಕ ಸರ್ಕಾರದೊಂದಿಗೆ ಚರ್ಚಿಸಲಿದೆ ಎಂದು ತಮಿಳುನಾಡು ಹಣಕಾಸು ಸಚಿವ ಎನ್. ಮೇರಿ ವಿಲ್ಸನ್ ಬುಧವಾರ ತಿಳಿಸಿದರು.
ಅದೃಷ್ಟವಲ್ಲ, ನಿರ್ಧಾರಗಳು ಕೈಯಲ್ಲಿವೆ: ಹೊಸ ಮನೆ ನಿರ್ಮಾಣ ಸಂಭ್ರಮದಲ್ಲಿ ನಟಿ ತಾರಾ
ಕನ್ನಡ ಚಿತ್ರರಂಗದ ಹಿರಿಯ ನಟಿ ತಾರಾ ಅನುರಾಧಾ ಅವರು ಹೊಸ ಮನೆ ನಿರ್ಮಾಣದ ಸಂಭ್ರಮದಲ್ಲಿದ್ದಾರೆ. ಈ ಖುಷಿಯ ವಿಚಾರವನ್ನು ನಟಿ ಅಭಿಮಾನಿಗಳೊಟ್ಟಿಗೆ ಹಂಚಿಕೊಂಡಿದ್ದಾರೆ. ನಟಿ ತಾರಾ ಅವರು ಸಾಮಾಜಿಕ ಮಾಧ್ಯಮ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡ ಹೊಸ ಪೋಸ್ಟ್ ಅಭಿಮಾನಿಗಳ ಗಮನ ಸೆಳೆದಿದೆ.
‘ನಮ್ಮೂರ ಮಂದಾರ ಹೂವೆ’ಗೆ 30 ವರ್ಷಗಳ ಸಂಭ್ರಮ: ನೆನಪು ಮೆಲುಕು ಹಾಕಿದ ನಟಿ ಸುಮನ್
ಕನ್ನಡ ಚಿತ್ರರಂಗದ ಸಾರ್ವಕಾಲಿಕ ಸೂಪರ್‌ಹಿಟ್ ಸಿನಿಮಾಗಳಲ್ಲಿ ಒಂದಾದ ‘ನಮ್ಮೂರ ಮಂದಾರ ಹೂವೆ’ ಸಿನಿಮಾ ಬಿಡುಗಡೆಯಾಗಿ ಇಂದಿಗೆ ಬರೋಬ್ಬರಿ 30 ವರ್ಷಗಳು ಪೂರೈಸಿವೆ. ಈ ಸಿನಿಮಾದಲ್ಲಿ ನಟ ರಮೇಶ್ ಅರವಿಂದ್, ಶಿವರಾಜ್‌ಕುಮಾರ್ ಹಾಗೂ ಪ್ರೇಮಾ ಅಭಿನಯಿಸಿದ್ದರು.
ದಿಲೀಪನ ಕನಸಿನ ಯೋಜನೆಗೆ ವಿದಾಯ ಹೇಳುವ ಸಮಯ ಬಂದಿದೆ: ಪತ್ನಿ ಭಾವುಕ ಪೋಸ್ಟ್
ಕಿರುತೆರೆಯ ಅತ್ಯಂತ ಜನಪ್ರಿಯ ಹಾಗೂ ಯಶಸ್ವಿ ಧಾರಾವಾಹಿಗಳಲ್ಲಿ ಒಂದಾಗಿದ್ದ ‘ಬ್ರಹ್ಮಗಂಟು’ ತನ್ನ ಪ್ರಸಾರವನ್ನು ಪೂರ್ಣಗೊಳಿಸಿದ್ದು, ಈ ಸುಂದರ ಪಯಣದ ಮುಕ್ತಾಯದ ಬಗ್ಗೆ ದಿವಂಗತ ನಿರ್ಮಾಪಕ ದಿಲೀಪ್ ರಾಜ್ ಅವರ ಪತ್ನಿ ಶ್ರೀವಿದ್ಯಾ ಅವರು ಭಾವುಕ ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದಾರೆ.
ರಾಜಭೋಗ ತೊರೆದು ಸೇನೆಗೆ ಸೇರಿದ ಡೆನ್ಮಾರ್ಕ್ ರಾಜಕುಮಾರಿ: ಇತಿಹಾಸ ಸೃಷ್ಟಿ
ಕೋಪನ್‌ಹೇಗನ್: ಅದು 2026 ಆಗಸ್ಟ್ 3ರ ಸೋಮವಾರದ ಬೆಳಗಿನ ಜಾವ, ಡೆನ್ಮಾರ್ಕ್‌ನ ಸ್ಲ್ಯಾಗೆಲ್ಸ್‌ನಲ್ಲಿರುವ 'ಅಂಟ್ವೋರ್ಸ್ಕೊವ್ ಬ್ಯಾರಾಕ್ಸ್' ಸೇನಾ ಕ್ಯಾಂಪ್‌ನ ಮುಖ್ಯ ದ್ವಾರದ ಬಳಿ ಕಪ್ಪು ಬಣ್ಣದ ಎಸ್‌ಯುವಿ ಕಾರೊಂದು ಬಂದು ನಿಂತಿತು. ಕಾರಿನಿಂದ ಕೆಳಗಿಳಿದದ್ದು ಯಾರೋ ಸೇನಾಧಿಕಾರಿಯಲ್ಲ, ಬದಲಿಗೆ 19ರ ಹರೆಯದ ಸುಂದರ ಯುವತಿ.
IAS Transfer: ಮತ್ತೆ 6 ಐಎಎಸ್ ಅಧಿಕಾರಿಗಳ ವರ್ಗ, ಮಂಜುಶ್ರೀಗೆ ಹೊಸ ಹುದ್ದೆ
ಬೆಂಗಳೂರು: ಕರ್ನಾಟಕ ಸರ್ಕಾರವು ಮತ್ತಷ್ಟು ಐಎಎಸ್ ಅಧಿಕಾರಿಗಳನ್ನು ಗುರುವಾರ ವರ್ಗಾವಣೆ ಮಾಡಿ ಹೊಸ ಹುದ್ದೆ ನೀಡಿದೆ.
ಗಯಾನಾದಲ್ಲಿ ಕನ್ನಡಿಗನ ಕೃಷಿ ಸಾಧನೆ: ನಿಪ್ಪಾಣಿಯ ಅಭಿಲಾಷ್ ಯಶೋಗಾಥೆ
ಗಯಾನಾದಲ್ಲಿ ಕನ್ನಡಿಗನ ಕೃಷಿ ಸಾಧನೆ: ನಿಪ್ಪಾಣಿಯ ಅಭಿಲಾಷ್ ಯಶೋಗಾಥೆ
IAS Transfer: ನಾಲ್ವರು ಐಎಎಸ್ ಅಧಿಕಾರಿಗಳ ವರ್ಗ, ಜಾಫರ್ ಬೆಂಗಳೂರು ಮೆಟ್ರೊ ಎಂಡಿ
ಬೆಂಗಳೂರು: ಕರ್ನಾಟಕ ಸರ್ಕಾರವು ನಾಲ್ವರು ಐಎಎಸ್ ಅಧಿಕಾರಿಗಳನ್ನು ವರ್ಗ ಮಾಡಿ ಆದೇಶ ಹೊರಡಿಸಿದೆ.
ರಾಜೀನಾಮೆ ನೀಡಿ 7 ವರ್ಷವಾಯಿತು, ಈಗಲಾದರೂ ಅಂಗೀಕರಿಸಿ: ಮೋದಿಗೆ IAS ಅಧಿಕಾರಿ ಮನವಿ
ಕೇಂದ್ರ ಶಿಕ್ಷಣ ಸಚಿವರಾಗಿದ್ದ ಧರ್ಮೇಂದ್ರ ಪ್ರಧಾನ್ ಅವರು ಇತ್ತೀಚೆಗೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನಿಡಿದ್ದಾರೆ. ಇದರ ಬೆನ್ನಲ್ಲೇ, ಐಎಎಸ್ ಅಧಿಕಾರಿ ಕಣ್ಣನ್ ಗೋಪಿನಾಥನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಉದ್ದೇಶಿಸಿ ಹಂಚಿಕೊಂಡಿರುವ ಪೋಸ್ಟ್ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.