ನ್ಯಾಟೊ ರಾಷ್ಟ್ರಗಳ ಮೇಲೆ ರಷ್ಯಾ ದಾಳಿ ಮಾಡುವುದಿಲ್ಲ: ಡೊನಾಲ್ಡ್ ಟ್ರಂಪ್

ನ್ಯಾಟೊ ರಾಷ್ಟ್ರಗಳ ಮೇಲೆ ರಷ್ಯಾ ದಾಳಿ ಮಾಡುವುದಿಲ್ಲ: ಡೊನಾಲ್ಡ್ ಟ್ರಂಪ್

ನ್ಯಾಟೊ ರಾಷ್ಟ್ರಗಳ ಮೇಲೆ ರಷ್ಯಾ ದಾಳಿ ಮಾಡುವುದಿಲ್ಲ: ಡೊನಾಲ್ಡ್ ಟ್ರಂಪ್

ವಾಷಿಂಗ್ಟನ್: ನ್ಯಾಟೊ ಸದಸ್ಯ ರಾಷ್ಟ್ರಗಳ ಮೇಲೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ದಾಳಿ ಮಾಡುವುದಿಲ್ಲ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

ಈ ವಾರದ ಆರಂಭದಲ್ಲಿ ಸಿಐಎ ನಿರ್ದೇಶಕ ಜಾನ್‌ ರಾಟ್‌ಕ್ಲಿಫ್‌ ಅವರು ದಾಳಿಗಳ ಬಗ್ಗೆ ರಷ್ಯಾದ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ ಎಂಬ ಮಾಧ್ಯಮ ವರದಿಗಳನ್ನು ಟ್ರಂಪ್ ತಳ್ಳಿಹಾಕಿದ್ದಾರೆ.

‘ರಾಟ್‌ಕ್ಲಿಫ್‌ ಅವರು ಪ್ರತಿ ಆರು ತಿಂಗಳಿಗೊಮ್ಮೆ ಅಥವಾ ವರ್ಷಕ್ಕೊಮ್ಮೆ ರಷ್ಯಾದ ಸಹವರ್ತಿಯನ್ನು ಭೇಟಿಯಾಗುತ್ತಾರೆ. ಅವರಿಬ್ಬರ ನಡುವೆ ಉತ್ತಮ ಬಾಂಧವ್ಯವಿದೆ. ದಾಳಿಗಳಿಗೆ ಸಂಬಂಧಿಸಿದಂತೆ ರಾಟ್‌ಕ್ಲಿಫ್‌ ಅವರು ರಷ್ಯಾದ ಅಧಿಕಾರಿಗಳಿಗೆ ಯಾವುದೇ ನಿರ್ದಿಷ್ಟ ಸಂದೇಶ ರವಾನಿಸಿಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ.

ನ್ಯಾಟೊ ಒಕ್ಕೂಟದ ಐಕ್ಯತೆ ಹಾಗೂ ಉಕ್ರೇನ್‌ಗೆ ಸದಸ್ಯ ರಾಷ್ಟ್ರಗಳು ನೀಡುತ್ತಿರುವ ಬೆಂಬಲವನ್ನು ಕುಗ್ಗಿಸುವ ರಷ್ಯಾದ ವಿಧ್ವಂಸಕ ಕೃತ್ಯಗಳು ಮತ್ತು ‘ಗ್ರೇ ಜೋನ್’ ದಾಳಿಗಳ ಮೇಲೆ ಐರೋಪ್ಯ ಹಾಗೂ ಅಮೆರಿಕದ ಗೂಢಚಾರ ಸಂಸ್ಥೆಗಳು ನಿರಂತರ ಕಣ್ಣಿಟ್ಟಿವೆ ಎಂದು ವರದಿಯಾಗಿದೆ.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ