ಕೌನ್ ಬನೇಗಾ ಕರೋಡ್‌ಪತಿಯಲ್ಲಿ ಭಾಗಿಯಾಗಿ ಮದುವೆ ಬಗ್ಗೆ ಟ್ರೋಲ್ ಆದ ಅಮೀರ್ ಖಾನ್
ಹಿರಿಯ ನಟ ಅಮಿತಾಭ್ ಬಚ್ಚನ್, ನಿರೂಪಣೆಯಲ್ಲಿ ಮೂಡಿಬರುತ್ತಿರುವ ಹಿಂದಿಯ ಜನಪ್ರಿಯ ರಿಯಾಲಿಟಿ ಶೋ ‘ಕೌನ್ ಬನೇಗಾ ಕರೋಡ್ ಪತಿ ಸೀಸನ್–18’ ಇಂದಿನಿಂದ (ಆಗಸ್ಟ್ 10) ಆರಂಭವಾಗಲಿದೆ.
ಇಂದು ರಾತ್ರಿ 9 ಗಂಟೆಗೆ ಆರಂಭವಾಗಲಿರುವ ಈ ಶೋನಲ್ಲಿ ಬಟ್ವಾರಾ 1947 ಸಿನಿಮಾದ ಪ್ರಚಾರಕ್ಕಾಗಿ ಬಾಲಿವುಡ್ ನಟರಾದ ಅಮೀರ್ ಖಾನ್, ಸನ್ನಿ ಡಿಯೋಲ್ ಮತ್ತು ಪ್ರೀತಿ ಜಿಂಟಾ ಭಾಗಿಯಾಗಲಿದ್ದಾರೆ.
ಕೆಲದಿನಗಳ ಹಿಂದೆಯಷ್ಟೇ, ಕೌನ್ ಬನೇಗಾ ಕರೋಡ್ ಪತಿಯ ಪ್ರೊಮೊ ಒಂದರಲ್ಲಿ ಅಮೀರ್ ಖಾನ್ ಕಾಣಿಸಿಕೊಂಡಿದ್ದರು. ಈ ವಿಡಿಯೊದಲ್ಲಿನ ಅವರ ಸಂಭಾಷಣೆಯನ್ನು ವೈಯಕ್ತಿಕ ಜೀವನಕ್ಕೆ ಜೋಡಿಸಿ, ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಮಾಡಲಾಗುತ್ತಿದೆ.
ಅಮೀರ್ ಖಾನ್ ಪ್ರೊಮೊಗೆ ವ್ಯಾಪಕ ಪ್ರತಿಕ್ರಿಯೆ..
ಪ್ರೊಮೊದಲ್ಲಿ ಅಮೀರ್ ಖಾನ್ ಹಾಗೂ ಅಮಿತಾಭ್ ಅವರು ಸೀಸನ್ 18ರ ಹೊಸ ಥೀಮ್ ಬಗ್ಗೆ ಚರ್ಚಿಸಿದ್ದಾರೆ. ‘ಎಲ್ಲಿ ಯೋಚಿಸುತ್ತಿದ್ದೀರಿ? ಏನು ಯೋಚಿಸುತ್ತಿದ್ದೀರಿ?’ ಎಂದು ಅಮೀರ್ ಕೇಳುತ್ತಾರೆ. ಆಗ ಅಮಿತಾಭ್ ಟ್ರೇಡ್ ಮಾರ್ಕ್ ಶೈಲಿಯಲ್ಲಿ, ಪ್ರತಿಕ್ರಿಯಿಸುತ್ತಾ, ಈ ಸೀಸನ್‌ನಲ್ಲಿ ಸ್ಪರ್ಧಿಗಳು ಉತ್ತರಿಸುವ ಮೊದಲು ಎಚ್ಚರಿಕೆಯಿಂದ ಯೋಚಿಸಬೇಕಾಗಿದೆ. ಪ್ರಶ್ನೆಗಳು ಅಷ್ಟು ಸುಲಭವಾಗಿರುವುದಿಲ್ಲ ಎಂದಿದ್ದಾರೆ.
ಸದ್ಯ ಸಾಮಾಜಿಕ ಜಾಲತಾಣದಲ್ಲಿ ‘ಯೋಚಿಸಬೇಕು’ ಎಂಬ ಸಾಲನ್ನು ಅಮೀರ್ ಖಾನ್ ಅವರ ವೈಯಕ್ತಿಕ ಜೀವನಕ್ಕೆ ಜೋಡಿಸಿದ್ದಾರೆ. ಪ್ರೊಮೊ ವೀಕ್ಷಿಸಿದವರು, ‘ಅಮೀರ್ ಖಾನ್ ನಾಲ್ಕನೇ ವಿವಾಹವಾಗುತ್ತಾರೆ?’ ಎಂದು ಕಮೆಂಟ್ ಮಾಡಿದ್ದಾರೆ. ಬಳಕೆದಾರರೊಬ್ಬರು ‘ತಮ್ಮ ಮದುವೆಯ ವಿಚಾರ ಮಾತನಾಡಲು ಇಲ್ಲಿದ್ದಾರೆಯೇ?’ ಎಂದು ಕಮೆಂಟ್ ಮಾಡಿದರೆ, ಮತ್ತೊಬ್ಬ ಬಳಕೆದಾರರು, ‘ಅಮೀರ್ ಅವರು ಮತ್ತೆ ಮದುವೆಯಾಗಲು ಎಚ್ಚರಿಕೆಯಿಂದ ಯೋಚಿಸಬೇಕಾಗುತ್ತದೆ’ ಎಂದು ಬರೆದಿದ್ದಾರೆ.
1986ರಲ್ಲಿ ರೀನಾ ದತ್ತಾ ಅವರನ್ನು ಅಮೀರ್ ಖಾನ್ ವಿವಾಹವಾದರು. 2002ರವರೆಗೆ ಜೊತೆಯಲ್ಲಿದ್ದರು. ಇವರಿಗೆ ಜುನೈದ್ ಖಾನ್ ಮತ್ತು ಇರಾ ಖಾನ್ ಎಂಬ ಇಬ್ಬರು ಮಕ್ಕಳಿದ್ದಾರೆ.
2005ರಲ್ಲಿ ನಿರ್ಮಾಪಕಿ ಕಿರಣ್ ರಾವ್ ಅವರನ್ನು ವಿವಾಹವಾದರು. 2021ರಲ್ಲಿ ಬೇರ್ಪಟ್ಟರು. ಇವರಿಗೆ ಆಜಾದ್ ರಾವ್ ಖಾನ್ ಎಂಬ ಮಗನಿದ್ದಾರೆ.
ಅಮೀರ್ ಖಾನ್ ಅವರು ತಮ್ಮ 60ನೇ ಹುಟ್ಟುಹಬ್ಬದ ವೇಳೆ ಗೌರಿ ಅವರೊಂದಿಗಿನ ಸಂಬಂಧವನ್ನು ಬಹಿರಂಗಪಡಿಸಿದ್ದರು. 2026ರ ಜುಲೈ 5ರಂದು ಮುಂಬೈನ ಬಾಂದ್ರಾ ನಿವಾಸದಲ್ಲಿ ಆತ್ಮೀಯರ ಸಮ್ಮುಖದಲ್ಲಿ ವಿವಾಹವಾದರು.

ದೇಶ ವಿಭಜನೆಯ ಸಂದರ್ಭದಲ್ಲಿ ನಡೆದ ಹಿಂಸಾಚಾರ, ಭಯ ಹಾಗೂ ಬಲವಂತದ ವಲಸೆಯ ನಡುವೆ ಒಂದು ಕುಟುಂಬ ಅನುಭವಿಸುವ ಸಂಕಷ್ಟಗಳೇ ಬಟ್ವಾರಾ 1947 ಸಿನಿಮಾದ ಕಥಾವಸ್ತು. ಈ ಸಿನಿಮಾ ಆಗಸ್ಟ್ 14ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.