ಅಸ್ಸಾಂ ಸಂತ್ರಸ್ತರಿಗೆ ಸೌರ ದೀಪ,‌ ಅಗತ್ಯ ಸಾಮಗ್ರಿ ನೀಡಿದ ನಟಿ ಭೂಮಿ ಪಡ್ನೇಕರ್

ಅಸ್ಸಾಂ ಸಂತ್ರಸ್ತರಿಗೆ ಸೌರ ದೀಪ,‌ ಅಗತ್ಯ ಸಾಮಗ್ರಿ ನೀಡಿದ ನಟಿ ಭೂಮಿ ಪಡ್ನೇಕರ್

ಅಸ್ಸಾಂ ಸಂತ್ರಸ್ತರಿಗೆ ಸೌರ ದೀಪ,‌ ಅಗತ್ಯ ಸಾಮಗ್ರಿ ನೀಡಿದ ನಟಿ ಭೂಮಿ ಪಡ್ನೇಕರ್

ವಿಪರೀತ ಮಳೆಯಿಂದಾಗಿ ಪ್ರವಾಹಕ್ಕೆ ತುತ್ತಾಗಿರುವ ಅಸ್ಸಾಂ ಜನರಿಗೆ ಬಾಲಿವುಡ್‌ ಸಿನಿತಾರೆಯರು ಸೇರಿದಂತೆ ಹಲವರು ಸಹಾಯಸ್ತವನ್ನು ಚಾಚಿದ್ದಾರೆ. ಅಲ್ಲಿನ ಜನರಿಗೆ ಆಹಾರದ ಕಿಟ್‌ ಸೇರಿದಂತೆ ವಿವಿಧ ಅಗತ್ಯ ಸಾಮಾಗ್ರಿಗಳನ್ನು ವಿತರಿಸುತ್ತಿದ್ದಾರೆ.

ಅದರಂತೆ, ಬಾಲಿವುಡ್‌ ನಟಿ ಭೂಮಿ ಪಡ್ನೇಕರ್ ಅವರು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯೊಂದಿಗೆ ಪ್ರವಾಹಕ್ಕೆ ತುತ್ತಾದ ಪ್ರದೇಶಕ್ಕೆ ಭೇಟಿ ನೀಡಿ, ಅಲ್ಲಿನ ಜನರಿಗೆ ಸಹಾಯ ಮಾಡಿರುವ ವಿಡಿಯೊವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.‌

ಕತ್ತಲೆಯಿಂದ ಕೂಡಿದ ದಾರಿಯಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯೊಂದಿಗೆ ಪ್ರಯಾಣಿಸುತ್ತಿರುವ ವಿಡಿಯೊವನ್ನು ಭೂಮಿ ಹಂಚಿಕೊಂಡಿದ್ದಾರೆ. ‘ಗೂಗಲ್ ಮ್ಯಾಪ್ ರಸ್ತೆಯನ್ನು ತೋರಿಸುತ್ತದೆ. ಆದರೆ, ಇಲ್ಲಿ ರಸ್ತೆಯೇ ಕಾಣುತ್ತಿಲ್ಲ. ಎಲ್ಲೆಡೆ ನೀರು ತುಂಬಿದೆ. ಇಲ್ಲಿನ ಜನರು ತುಂಬಾ ಕಷ್ಟದ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ’ ಎಂದು ವಿಡಿಯೊದಲ್ಲಿ ಹೇಳಿದ್ದಾರೆ.

ಇದೇ ವೇಳೆ ಹಾನಿಗೊಳಗಾದವರಿಗೆ ಸೌರದೀಪ ಹಾಗೂ ಆಹಾರದ ಕಿಟ್‌ಗಳನ್ನು ವಿತರಿಸಿದ್ದಾರೆ. ‘ಸುತ್ತಮುತ್ತಲಿನ ಪ್ರದೇಶ ಸಂಪೂರ್ಣವಾಗಿ ನೀರಿನಿಂದ ಆವರಿಸಿ‌ದೆ. ರಾತ್ರಿ ವೇಳೆ ಹಾವುಗಳು ಸೇರಿದಂತೆ ಇತರೆ ಹಾನಿಯುಂಟು ಮಾಡುವ ಕೀಟಗಳಿಂದ ರಕ್ಷಣೆ ಪಡೆಯುವುದು ಕಷ್ಟಕರ. ಸೌರ ದೀಪಗಳನ್ನು ಬಳಸಿಕೊಂಡು, ಅದರ ಬೆಳಕಿನಲ್ಲಿ ಇರುವುದರಿಂದ ರಕ್ಷಣೆ ಪಡೆದುಕೊಳ್ಳಬಹುದು’ ಎಂದು ಹೇಳಿದ್ದಾರೆ. 

ಈ  ಹಿಂದೆ ನಟಿ ಭೂಮಿ ಅವರು, ಪ್ರವಾಹಕ್ಕೆ ತುತ್ತಾದ ಜನರಿಗೆ ಸಹಾಯ ಮಾಡಲು ಮೊಣಕಾಲು ಮುಳುಗುವಷ್ಟಿದ್ದ ನೀರಿನಲ್ಲಿ ನಡೆದುಕೊಂಡು ಹೋಗುತ್ತಿರುವ ವಿಡಿಯೊವನ್ನು ಹಂಚಿಕೊಂಡಿದ್ದರು. ಮತ್ತೊಂದು ವಿಡಿಯೊದಲ್ಲಿ, ಭೂಮಿ ಅವರು ದೋಣಿಯಲ್ಲಿ ಕುಳಿತು ಸುತ್ತಲೂ ನೀರು ಆವರಿಸಿರುವ ಮನೆಗೆ ಹೋಗುತ್ತಿರುವುದನ್ನು ಕಾಣಬಹುದು.

ಗ್ಲೋಬಲ್ ಸಿಖ್ ಎಂಬ ಎನ್‌ಜಿಒ ಜೊತೆಗೆ ಕೈ ಜೋಡಿಸಿರುವ ಬಾಲಿವುಡ್ ನಟ ರಣದೀಪ್ ಹೂಡಾ ಅವರು, ಪ್ರವಾಹಕ್ಕೆ ತುತ್ತಾದ ಜನರಿಗೆ ಬಿಸಿ ಊಟದ ವ್ಯವಸ್ಥೆ ಮಾಡಿದ್ದಾರೆ. ಹಾಸ್ಯನಟ ಸಮಯ್ ರೈನಾ ಅವರು, ಮುಖ್ಯಮಂತ್ರಿ ಪರಿಹಾರ ನಿಧಿಗೆ ₹10 ಲಕ್ಷ ದೇಣಿಗೆ ನೀಡಿದ್ದಾರೆ. 

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ