ಟಾಕ್ಸಿಕ್‌ನಲ್ಲಿ ಮಿಂಚಿದ ಕನ್ನಡತಿ ರುಕ್ಮಿಣಿ ವಸಂತ ಕುರಿತು ಯಶ್ ಮೆಚ್ಚುಗೆ...

ಟಾಕ್ಸಿಕ್‌ನಲ್ಲಿ ಮಿಂಚಿದ ಕನ್ನಡತಿ ರುಕ್ಮಿಣಿ ವಸಂತ ಕುರಿತು ಯಶ್ ಮೆಚ್ಚುಗೆ...

ಟಾಕ್ಸಿಕ್‌ನಲ್ಲಿ ಮಿಂಚಿದ ಕನ್ನಡತಿ ರುಕ್ಮಿಣಿ ವಸಂತ ಕುರಿತು ಯಶ್ ಮೆಚ್ಚುಗೆ...

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ, ಟಾಕ್ಸಿಕ್‌ ಸಿನಿಮಾದ ಟ್ರೇಲರ್‌ ಆಗಸ್ಟ್ 8ರಂದು ಆದ್ದೂರಿಯಾಗಿ ಬಿಡುಗಡೆಯಾಗಿದೆ. ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ ಕನ್ನಡದ ನಟಿ ರುಕ್ಮಿಣಿ ವಸಂತ ಕುರಿತು ನಟ ಯಶ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಟ್ರೇಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಯಶ್, ‘ರುಕ್ಮಿಣಿ ಅವರು ಟಾಕ್ಸಿಕ್ ಸಿನಿಮಾದ ಭಾಗವಾಗಿರುವುದಕ್ಕೆ ನಮಗೆ ಹೆಮ್ಮೆ ಇದೆ. ಅವರು ನಮ್ಮ ಕನ್ನಡದ ಹುಡುಗಿ. ಲಂಡನ್‌ನಲ್ಲಿ ಡ್ರಾಮಾ ಕುರಿತ ತರಬೇತಿಯನ್ನೂ ಪಡೆದುಕೊಂಡಿದ್ದಾರೆ’ ಎಂದರು.

‘ಸಿನಿಮಾದ ಭಾಗವಾಗಿರುವ ಎಲ್ಲರಿಗೂ ಧನ್ಯವಾದಗಳು, ವೇದಿಕೆ ಮುಂಭಾಗ ಇರುವವರು ಮಾತ್ರವಲ್ಲದೆ, ಅದರ ಹಿಂದೆಯೂ ಅನೇಕ ಕಲಾವಿದರು ಇದ್ದಾರೆ. ಅವರೆಲ್ಲರೂ ಸಿನಿಮಾಗಾಗಿ ಕೆಲಸ ಮಾಡಿದ್ದಾರೆ’ ಎಂದು ಟ್ರೇಲರ್ ಬಿಡುಗಡೆ ವೇಳೆ ಹೇಳಿದ್ದಾರೆ.

'ರಾಕಿಂಗ್ ಸ್ಟಾರ್' ಯಶ್ ಇಲ್ಲಿ ದ್ವಿಪಾತ್ರದಲ್ಲಿ ನಟಿಸಿದ್ದಾರೆ. ಅವರಿಗೆ, 'ಲೇಡಿ ಸೂಪರ್‌ಸ್ಟಾರ್' ನಯನತಾರಾ, ನಟಿಯರಾದ ಕಿಯಾರಾ ಅಡ್ವಾಣಿ, ಹುಮಾ ಖುರೇಷಿ, ತಾರಾ ಸುತಾರಿಯಾ, ರುಕ್ಮಿಣಿ ವಸಂತ್ ಸಾಥ್ ನೀಡಿದ್ದಾರೆ.

ಟ್ರೇಲರ್ 4.38 ನಿಮಿಷವಿದೆ. ಪ್ರತಿಯೊಂದು ಪ್ರೇಮ್ ಸಿನಿಮಾದ ಗುಣಮಟ್ಟ ಮತ್ತು ಅದ್ದೂರಿತನವನ್ನು ಸಾರುತ್ತಿವೆ. ರಾಜೀವ್ ರವಿ ಛಾಯಾಚಿತ್ರಗ್ರಹಣ, ರವಿ ಬಸ್ರೂರು ಹಿನ್ನೆಲೆ ಸಂಗೀತ ಸಿನಿರಸಿಕರನ್ನು ಸೆಳೆದಿವೆ.

ಸೇಡಿನ ಕಥಾಹಂದರವಿರುವ ಟ್ರೇಲರ್ ಉದ್ದಕ್ಕೂ ಬರುವ ಟ್ವಿಸ್ಟ್‌ಗಳು ಯಶ್ ಅಭಿಮಾನಿಗಳು ತುದಿಗಾಲಲ್ಲಿ ನಿಲ್ಲುವಂತೆ ಮಾಡಿವೆ. ಕೆವಿಎನ್ ನಿರ್ಮಾಣ ಸಂಸ್ಥೆ ಹಾಗೂ ಯಶ್ ಅವರ ಮಾನ್‌ಸ್ಟರ್ಮೈಂಡ್ ಕ್ರಿಯೇಷನ್ಸ್, ಈ ಸಿನಿಮಾಗೆ ಬಂಡವಾಳ ಹೂಡಿದೆ. 

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ