ವಿಶ್ವಸಂಸ್ಥೆಗೆ ಭಾರತದಿಂದ 5 ನವಿಲುಗಳ ಉಡುಗೊರೆ: ಹಳೆಯ ಸಂಪ್ರದಾಯಕ್ಕೆ ಮರುಜೀವ

ವಿಶ್ವಸಂಸ್ಥೆಗೆ ಭಾರತದಿಂದ 5 ನವಿಲುಗಳ ಉಡುಗೊರೆ: ಹಳೆಯ ಸಂಪ್ರದಾಯಕ್ಕೆ ಮರುಜೀವ

ವಿಶ್ವಸಂಸ್ಥೆಗೆ ಭಾರತದಿಂದ 5 ನವಿಲುಗಳ ಉಡುಗೊರೆ: ಹಳೆಯ ಸಂಪ್ರದಾಯಕ್ಕೆ ಮರುಜೀವ

ವಿಶ್ವಸಂಸ್ಥೆ: ಜಿನೀವಾದಲ್ಲಿರುವ ವಿಶ್ವಸಂಸ್ಥೆಯ ಕಚೇರಿಗೆ (ಯುಎನ್‌ಒಜಿ) ಭಾರತವು ಐದು ನವಿಲುಗಳನ್ನು ಉಡುಗೊರೆ ನೀಡುವ ಮೂಲಕ ದಶಕಗಳ ಸಂಪ್ರದಾಯಕ್ಕೆ ಮರುಜೀವ ನೀಡಿದೆ.

ವಿಶ್ವಸಂಸ್ಥೆಯ ಭಾರತದ ಕಾಯಂ ಪ್ರತಿನಿಧಿ ಅರಿಂದಮ್‌ ಬಾಗ್ಚಿ ಅವರು ನವಿಲುಗಳನ್ನು ಯುಎನ್‌ಒಜಿ ನಿರ್ದೇಶಕ ಜನರಲ್ ಟಟಿಯಾನಾ ವಾಲೋವಾಯಾ ಅವರಿಗೆ ಹಸ್ತಾಂತರಿಸಿದ್ದಾರೆ. ಈ ಸಂದರ್ಭದಲ್ಲಿ ಅವರು ಭಾರತದ ಸಮೃದ್ಧ ನೈಸರ್ಗಿಕ ಪರಂಪರೆ ಮತ್ತು ಬಹುಪಕ್ಷೀಯತೆಯ ಬದ್ಧತೆಯನ್ನು ಮೆಲುಕು ಹಾಕಿದ್ದಾರೆ.

ಈ ಪೈಕಿ ನಾಲ್ಕು ಹೆಣ್ಣು ನವಿಲುಗಳಾಗಿದ್ದು, ನೀಲಿ ಗರಿಗಳನ್ನು ಹೊಂದಿವೆ. ಒಂದು ಗಂಡು ನವಿಲು ಬಿಳಿ ಗರಿಗಳನ್ನು ಹೊಂದಿದೆ. ಇವು ವಿಶ್ವಸಂಸ್ಥೆಯ ಲಾಂಛನವನ್ನು ಪ್ರತಿಬಿಂಬಿಸುತ್ತವೆ.

ಭಾರತವು ಯುಎನ್‌ಒಜಿಗೆ ನವಿಲುಗಳನ್ನು ನೀಡುತ್ತಿರುವುದು ಇದೇ ಮೊದಲಲ್ಲ. 1981ರಲ್ಲಿ ಆಗಿನ ಪ್ರಧಾನಿ ಇಂದಿರಾ ಗಾಂಧಿ ಅವರು ದೆಹಲಿ ಪ್ರಾಣಿಸಂಗ್ರಹಾಲಯದಿಂದ ಜೋಡಿ ನವಿಲುಗಳನ್ನು ಕಳುಹಿಸಿಕೊಟ್ಟಿದ್ದರು.

‘ಸೌಂದರ್ಯ ಮತ್ತು ಸಹನಶೀಲತೆಯ ಸಂಕೇತವಾಗಿರುವ ನವಿಲು, ಜೀವವೈವಿಧ್ಯದ ಸಂರಕ್ಷಣೆ ಮತ್ತು ಪರಿಸರ ನಿರ್ವಹಣೆಗೆ ದೇಶದ ಸುದೀರ್ಘ ಬದ್ಧತೆಯನ್ನು ಪ್ರತಿನಿಧಿಸುತ್ತದೆ’ ಎಂದು ಭಾರತೀಯ ನಿಯೋಗ ತಿಳಿಸಿದೆ.

‘ನವಿಲುಗಳನ್ನು ಮೂರು ತಿಂಗಳ ಕಾಲ ವಿಶ್ವಸಂಸ್ಥೆ ಆವರಣದೊಳಗಿನ ‘ಅರಿಯಾನಾ ಪಾರ್ಕ್’ನಲ್ಲಿ ಆವಾಸಸ್ಥಾನದಲ್ಲಿ ಇರಿಸಲಾಗುತ್ತದೆ. ಬಳಿಕ ಮುಕ್ತವಾಗಿ ಓಡಾಡಲು ಬಿಡುತ್ತೇವೆ’ ಎಂದು ಜಿನೀವಾ ಬಯೋಪಾರ್ಕ್ ನಿರ್ದೇಶಕ ಟೋಬಿಯಾಸ್ ಬ್ಲಾಹಾ ಹೇಳಿದ್ದಾರೆ.

46 ಹೆಕ್ಟೇರ್ ವಿಸ್ತೀರ್ಣದ ಅರಿಯಾನಾ ಪಾರ್ಕ್, ಜೆನೀವಾದ ಅತಿದೊಡ್ಡ ಮತ್ತು ಪ್ರತಿಷ್ಠಿತ ಉದ್ಯಾನವನಗಳಲ್ಲಿ ಒಂದಾಗಿದೆ.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ