ನಟಿ ಮೇಲೆ ಅತ್ಯಾಚಾರ ಆರೋಪ: ಬಾಲಿವುಡ್ ನಿರ್ದೇಶಕ ಶಕೀಲ್ ನೂರಾನಿ ಬಂಧನ

ನಟಿ ಮೇಲೆ ಅತ್ಯಾಚಾರ ಆರೋಪ: ಬಾಲಿವುಡ್ ನಿರ್ದೇಶಕ ಶಕೀಲ್ ನೂರಾನಿ ಬಂಧನ

ನಟಿ ಮೇಲೆ ಅತ್ಯಾಚಾರ ಆರೋಪ: ಬಾಲಿವುಡ್ ನಿರ್ದೇಶಕ ಶಕೀಲ್ ನೂರಾನಿ ಬಂಧನ

ಮುಂಬೈ: ಉದಯೋನ್ಮುಖ ನಟಿಯೊಬ್ಬರ ಮೇಲೆ ಅತ್ಯಾಚಾರ ಎಸಗಿದ ಹಾಗೂ ಜೀವ ಬೆದರಿಕೆ ಹಾಕಿದ ಆರೋಪದ ಮೇಲೆ ಚಲನಚಿತ್ರ ನಿರ್ದೇಶಕ ಶಕೀಲ್ ನೂರಾನಿ ಅವರನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ.

ಸಿನಿಮಾವೊಂದರ ಸ್ಕ್ರಿಪ್ಟ್ ಕುರಿತು ಚರ್ಚಿಸುವ ನೆಪದಲ್ಲಿ ಮಾಲ್ವಾನಿ ಪ್ರದೇಶದಲ್ಲಿರುವ ತನ್ನ ನಿವಾಸಕ್ಕೆ ಕರೆದಿದ್ದ ಆರೋಪಿ ನನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ನಟಿ ಹೇಳಿಕೊಂಡಿದ್ದಾರೆ.

ಕಳೆದ ನಾಲ್ಕು ವರ್ಷಗಳಿಂದ ನೂರಾನಿ ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ಗರ್ಭನಿರೋಧಕ ಮಾತ್ರೆ ನೀಡಿದ್ದಲ್ಲದೇ, ವಿಷಪ್ರಾಶನ ಮಾಡಿ ಗರ್ಭಪಾತಕ್ಕೆ ಕಾರಣನಾಗಿದ್ದಾರೆ ಎಂದೂ ಸಂತ್ರಸ್ತೆ ಆರೋಪಿಸಿದ್ದಾರೆ.

ಮಾದಕ ದ್ರವ್ಯ ನೀಡಿ, ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ. ಘಟನೆಯ ಬಗ್ಗೆ ಪೊಲೀಸರಿಗೆ ದೂರು ನೀಡಿದರೆ ಅಥವಾ ಕುಟುಂಬಸ್ಥರಿಗೆ ತಿಳಿಸಿದರೆ, ಖಾಸಗಿ ವಿಡಿಯೊವನ್ನು ಸೋರಿಕೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ ಎಂದೂ ದೂರಿನಲ್ಲಿ ಉಲ್ಲೇಖಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕಳೆದ 40 ದಿನಗಳಿಂದ ತಲೆಮರೆಸಿಕೊಂಡಿದ್ದ ನೂರಾನಿಯನ್ನು ಆಗಸ್ಟ್ 9 ರಂದು ಮಹಾಬಲೇಶ್ವರದಲ್ಲಿರುವ ಅವರ ಫಾರ್ಮ್‌ಹೌಸ್‌ನಲ್ಲಿ ಬಂಧಿಸಲಾಗಿದೆ ಎಂದು ಮುಂಬೈ ಪೊಲೀಸರು ತಿಳಿಸಿದ್ದಾರೆ.

ನೂರಾನಿ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 64(2)(ಎಂ) (ಲೈಂಗಿಕ ದೌರ್ಜನ್ಯ), 123 (ವಿಷಪ್ರಾಶನ ), 88 (ಗರ್ಭಪಾತಕ್ಕೆ ಕಾರಣವಾಗುವುದು) ಮತ್ತು 351(2) (ಬೆದರಿಕೆ ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಮುಂಬೈ ನ್ಯಾಯಾಲಯವು, ನೂರಾನಿ ಅವರನ್ನು ಆಗಸ್ಟ್ 12 ರವರೆಗೆ ಪೊಲೀಸ್ ಕಸ್ಟಡಿಗೆ ಒಪ್ಪಿಸಿದ್ದು, ತನಿಖೆ ಮುಂದುವರಿದಿದೆ.

ನೂರಾನಿ ಅವರು, 'ಜೋರು ಕಾ ಗುಲಾಮ್' (2000) ಮತ್ತು ‘ಬಡೇ ದಿಲ್ವಾಲಾ‘ (1999) ನಂತಹ ಜನಪ್ರಿಯ ಚಲನಚಿತ್ರಗಳನ್ನು ನಿರ್ಮಿಸಿ, ನಿರ್ದೇಶಿಸಿದ್ದಾರೆ.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ