ವೇದಿಕೆ ಮೇಲೆ ರವೀನಾ ಟಂಡನ್‌ಗೆ ಕಚ್ಚಲು ಯತ್ನಿಸಿದ ನಾಯಿ

ವೇದಿಕೆ ಮೇಲೆ ರವೀನಾ ಟಂಡನ್‌ಗೆ ಕಚ್ಚಲು ಯತ್ನಿಸಿದ ನಾಯಿ

ವೇದಿಕೆ ಮೇಲೆ ರವೀನಾ ಟಂಡನ್‌ಗೆ ಕಚ್ಚಲು ಯತ್ನಿಸಿದ ನಾಯಿ

ಬಾಲಿವುಡ್‌ನ ‘ಓಹ್ ಮೈ ಡಾಗ್’ ಸಿನಿಮಾದ ವಿಶೇಷ ಪ್ರದರ್ಶನ ಮುಂಬೈನಲ್ಲಿ ನಡೆದಿತ್ತು. ಈ ವೇಳೆ ಕಾರ್ಯಕ್ರಮಕ್ಕೆ ಕರೆತಂದಿದ್ದ ನಾಯಿಯೊಂದು ವೇದಿಕೆ ಮೇಲೆ ನಟಿ ರವೀನಾ ಟಂಡನ್‌ಗೆ ಕಚ್ಚಲು ಮುಂದಾಗಿದೆ. 

ಈ ದೃಶ್ಯದ ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ಹರಿದಾಡುತ್ತಿವೆ. 

ಹಳದಿ ಬಣ್ಣದ ಗೌನ್‌ ತೊಟ್ಟಿದ್ದ ರವೀನಾ, ರೆಡ್‌ ಕಾರ್ಪೆಟ್‌ ಮೇಲೆ ಹೆಜ್ಜೆಹಾಕಿದ್ದರು. ಇದೇ ವೇಳೆ ಅಲ್ಲಿದ್ದ ನಾಯಿಯೊಂದನ್ನು ಮಾತನಾಡಿಸಲು ವೇದಿಕೆ ಮೇಲೆ ಕುಳಿತು, ಮೇಲೇಳುವ ವೇಳೆ ಉದ್ರಿಕ್ತಗೊಂಡ ನಾಯಿ, ಬೊಗಳಿ, ರವೀನಾ ಅವರ ಬಟ್ಟೆ ಎಳೆದು ಕಚ್ಚಲು ಯತ್ನಿಸಿದೆ. ಈ ವೇಳೆ ಭಯಗೊಳ್ಳದ ನಟಿ, ಸಾವಧಾನದಿಂದ ವರ್ತಿಸಿದ್ದಾರೆ, ಇತ್ತ ಬೆಲ್ಟ್ ಹಿಡಿದುಕೊಂಡಿದ್ದ ವ್ಯಕ್ತಿ ನಾಯಿಯನ್ನು ಎಳೆದುಕೊಂಡಿದ್ದಾರೆ.

ಏನಾದರೂ ಗಾಯವಾಗಿದೆಯೇ ಎಂದು ಪಾಪರಾಜಿಗಳು ರವೀನಾ ಟಂಡನ್ ಅವರನ್ನು ಕೇಳಿದಾಗ, ‘ಸುರಕ್ಷಿತವಾಗಿದ್ದೇವೆ. ಮತ್ತೊಂದು ನಾಯಿಯನ್ನು ಕಂಡ ನಂತರ ಆ ನಾಯಿ ಬೊಗಳಲು ಪ್ರಾರಂಭಿಸಿತು. ಆಗ ಆಕಸ್ಮಿಕವಾಗಿ ನನ್ನ ತೋಳಿನ ಬಟ್ಟೆಯ ದಾರವೊಂದು ನಾಯಿಯ ಹಲ್ಲುಗಳಲ್ಲಿ ಸಿಕ್ಕಿಹಾಕಿಕೊಂಡಿತ್ತು’ ಎಂದು ವಿವರಿಸಿದ್ದಾರೆ.

ಈ ಸಿನಿಮಾವನ್ನು ಅಮಿತ್ ರೈ ನಿರ್ದೇಶಿಸಿದ್ದಾರೆ.  ಚಿತ್ರದಲ್ಲಿ ಪಂಕಜ್ ತ್ರಿಪಾಠಿ, ಪವನ್ ಮಲ್ಹೋತ್ರಾ, ಮಾಹಿ ರೈ, ರಾಜೇಶ್ ಕುಮಾರ್, ಗೀತಾ ಅಗರವಾಲ್, ವಿಜಯ್ ಮಿಶ್ರಾ, ಶ್ರೀಧರ್ ದುಬೆ ಸೇರಿದಂತೆ ಹಲವರು ಕಾಣಿಸಿಕೊಂಡಿದ್ದಾರೆ. ಈ ಸಿನಿಮಾ ನಿನ್ನೆ (ಆ.7) ತೆರೆಕಂಡಿದೆ.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ