ಸೂರ್ಯಗ್ರಹಣದ ನಂತರ ಈ ರಾಶಿಯವರ ಸುವರ್ಣ ದಿನಗಳು ಆರಂಭ:ಮುಟ್ಟಿದ್ದೆಲ್ಲಾ ಚಿನ್ನವಾಗುವ ಕಾಲ, ಒಲಿದು ಬರುವಳು ಲಕ್ಷ್ಮೀ

ಸೂರ್ಯಗ್ರಹಣದ ನಂತರ ಈ ರಾಶಿಯವರ ಸುವರ್ಣ ದಿನಗಳು ಆರಂಭ:ಮುಟ್ಟಿದ್ದೆಲ್ಲಾ ಚಿನ್ನವಾಗುವ ಕಾಲ, ಒಲಿದು ಬರುವಳು ಲಕ್ಷ್ಮೀ

ಸೂರ್ಯಗ್ರಹಣದ ನಂತರ ಈ ರಾಶಿಯವರ ಸುವರ್ಣ ದಿನಗಳು ಆರಂಭ:ಮುಟ್ಟಿದ್ದೆಲ್ಲಾ ಚಿನ್ನವಾಗುವ ಕಾಲ, ಒಲಿದು ಬರುವಳು ಲಕ್ಷ್ಮೀ

ಜ್ಯೋತಿಷ್ಯಶಾಸ್ತ್ರದಲ್ಲಿ ಸೂರ್ಯಗ್ರಹಣಕ್ಕೆ ಹೆಚ್ಚಿನ ಮಹತ್ವವಿದೆ. ಗ್ರಹಣದ ಸಮಯದಲ್ಲಿ ಸಂಭವಿಸುವ ಶುಭ ಯೋಗಗಳು ಮತ್ತು ಅನುಕೂಲಕರ ಗ್ರಹಗಳ ಚಲನೆಯಿಂದಾಗಿ ಕೆಲವು ರಾಶಿಯವರ ಜಾತಕ ಸಂಪೂರ್ಣವಾಗಿ ಬದಲಾಗುತ್ತದೆಯಂತೆ. ಇನ್ನೆರಡು ದಿನಗಳಲ್ಲಿ ಸಂಭವಿಸುವ ಸೂರ್ಯಗ್ರಹಣದ ನಂತರ, ಕೆಲವು ರಾಶಿಯವರ ಅದೃಷ್ಟ ಬೆಳಗುವುದು. ಉದ್ಯೋಗ ವ್ಯವಹಾರಗಳಲ್ಲಿ ವಿಶೇಷ ಯಶಸ್ಸನ್ನು ಸಾಧಿಸುವರು. 4 ರಾಶಿಯವರಿಗೆ ಆರ್ಥಿಕ ಲಾಭವಾಗುವುದು, ಉದ್ಯೋಗ ಮತ್ತು ವ್ಯವಹಾರದಲ್ಲಿ ಹೊಸ ಅವಕಾಶಗಳು ಸಿಗುವ ಸಾಧ್ಯತೆಯಿದೆ. ಗ್ರಹಣ ಮುಗಿಯುತ್ತಿದ್ದ ಹಾಗೆಯೇ ಈ ರಾಶಿಯವರ ಅದೃಷ್ಟ ಬೆಳಗುವುದು.

ವರ್ಷದ ಎರಡನೇ ಸೂರ್ಯಗ್ರಹಣ ಯಾವಾಗ ?

ವರ್ಷದ ಎರಡನೇ ಸೂರ್ಯಗ್ರಹಣ ಆಗಸ್ಟ್ 12, 2026 ರಂದು ಸಂಭವಿಸಲಿದೆ. ಭಾರತೀಯ ಕಾಲಮಾನದ ಪ್ರಕಾರ, ಈ ಗ್ರಹಣ ಆಗಸ್ಟ್ 12 ರಂದು ರಾತ್ರಿ 09:04 ಕ್ಕೆ ಪ್ರಾರಂಭವಾಗಿ ಆಗಸ್ಟ್ 13 ಬೆಳಿಗ್ಗೆ 04:25 ರವರೆಗೆ ಮುಂದುವರಿಯುತ್ತದೆ. ಇದು ಕರ್ಕಾಟಕ ರಾಶಿ ಮತ್ತು ಆಶ್ಲೇಷ ನಕ್ಷತ್ರದಲ್ಲಿ ಸಂಭವಿಸುತ್ತದೆ. ಈ ಗ್ರಹಣ ಭಾರತದಲ್ಲಿ ಗೋಚರಿಸುವುದಿಲ್ಲ. ಹಾಗಾಗಿ ಈ ಗ್ರಹಣಕ್ಕೆ ಸೂತಕ ಸಮಯದ ನಿಯಮಗಳು ಅನ್ವಯ ಆಗುವುದಿಲ್ಲ. ಆದರೂ ರಾಶಿಫಲಗಳ ಮೇಲೆ ಇದು ಪರಿಣಾಮ ಬೀರುತ್ತದೆ.

ಈ ಸೂರ್ಯಗ್ರಹಣವು ಖಗೋಳಶಾಸ್ತ್ರಜ್ಞರು ಮತ್ತು ಜ್ಯೋತಿಷಿಗಳಿಗೆ ಬಹಳ ವಿಶೇಷವಾಗಿದೆ. ಚಂದ್ರನು ಸೂರ್ಯ ಮತ್ತು ಭೂಮಿಯ ನಡುವೆ ಬಂದಾಗ ಸಂಭವಿಸುವ ಈ ಆಕಾಶ ವಿದ್ಯಮಾನವು ಆಕಾಶದಲ್ಲಿ ಹಳದಿ ಉಂಗುರವನ್ನು ಸೃಷ್ಟಿಸುತ್ತದೆ. ಈ ಹಳದಿ ಉಂಗುರ ಬೆಂಕಿಯುಂಗುರದಂತೆ ಕಾಣಿಸುತ್ತದೆ. ಆಧ್ಯಾತ್ಮಿಕವಾಗಿ ನೋಡುವುದಾದರೆ ಇದು ನಕಾರಾತ್ಮಕ ಶಕ್ತಿಗಳನ್ನು ತೆಗೆದುಹಾಕಿ ಹೊಸ ಮಾರ್ಗ ಮತ್ತು ಸರ್ವತೋಮುಖ ಸಮೃದ್ಧಿಗೆ ಬಾಗಿಲು ತೆರೆಯುತ್ತದೆ ಎನ್ನುತ್ತಾರೆ ಜ್ಯೋತಿಷಿಗಳು.

ಸೂರ್ಯಗ್ರಹಣ ಈ ರಾಶಿಯವರಿಗೆ ತರುವುದು ಅದೃಷ್ಟ

ಮೇಷ ರಾಶಿ (Aries): ಸೂರ್ಯಗ್ರಹಣದ ನಂತರ, ಮೇಷ ರಾಶಿಯವರ ಆರ್ಥಿಕ ಸ್ಥಿತಿ ಸುಧಾರಿಸುತ್ತದೆ. ಇಷ್ಟು ದಿನ ಕೈಸೇರದೆ ಹೊರಗೆ ಉಳಿದಿದ್ದ ಹಣ ಈ ಗ್ರಹಣದ ನಂತರ ವಾಪಸ್‌ ಬರುವುದು. ವ್ಯಾಪಾರ, ವ್ಯವಹಾರಗಳಲ್ಲಿ ಹೆಚ್ಚು ಲಾಭವಾಗುವುದು. ಇದಲ್ಲದೆ, ಕೆಲಸದಲ್ಲಿ ಮೇಲಧಿಕಾರಿಗಳಿಂದ ಸಂಪೂರ್ಣ ಬೆಂಬಲ ಸಿಗುವುದು. ಹೊಸ ಜವಾಬ್ದಾರಿ ಹೆಗಲೇರುವುದು. ಆದರೆ ಸಣ್ಣ ಸಣ್ಣ ವಿಷಯಗಳಿಗೆ ಕೋಪ ಮಾಡಿಕೊಳ್ಳದಿರುವುದು ಒಳ್ಳೆಯದು. ಮನಸ್ಸನ್ನು ಶಾಂತವಾಗಿ ಇರಿಸಿಕೊಳ್ಳಿ.

ಸಿಂಹ ರಾಶಿ (Leo) : ಸಿಂಹ ರಾಶಿಯ ಅಧಿಪತಿಯೇ ಸೂರ್ಯ. ಗ್ರಹಣದ ನಂತರ, ನಿಮ್ಮ ಆತ್ಮವಿಶ್ವಾಸ ಮತ್ತು ನಾಯಕತ್ವದ ಗುಣಗಳು ಎರಡು ಪಟ್ಟಾಗುವುದು. ನೀವು ಕೈ ಹಾಕುವ ಪ್ರತಿಯೊಂದು ಕೆಲಸದಲ್ಲಿಯೂ ಯಶಸ್ವಿಯಾಗುವಿರಿ. ಉದ್ಯಮಿಗಳು ಮಾಡುವ ಹೊಸ ಹೂಡಿಕೆಗಳಿಂದ ಉತ್ತಮ ಲಾಭ ಪಡೆಯಬಹುದು. ಕುಟುಂಬದಲ್ಲಿ ಹಲವು ವರ್ಷಗಳಿಂದ ಇದ್ದ ಭಿನ್ನಾಭಿಪ್ರಾಯಗಳು ಬಗೆಹರಿಯುವುದು. ಮನೆಯಲ್ಲಿ ಶಾಂತಿಯ ವಾತಾವರಣ ನೆಲೆಯಾಗುವುದು.

ತುಲಾ ರಾಶಿ (Libra) : ಗ್ರಹಣದ ಪ್ರಭಾವದಿಂದಾಗಿ, ಆದಾಯದ ಮೂಲಗಳು ಇದ್ದಕ್ಕಿದ್ದಂತೆ ಹೆಚ್ಚಾಗುವುದು. ಆರ್ಥಿಕ ಸ್ಥಿತಿ ಸುಧಾರಿಸಲು ಹಲವು ಅವಕಾಶಗಳಿವೆ. ಹೊಸ ಉದ್ಯೋಗಕ್ಕಾಗಿ ಪ್ರಯತ್ನಿಸುತ್ತಿರುವವರಿಗೆ ವಿದೇಶದಲ್ಲಿ ಅವಕಾಶ ಸಿಗುವುದು. ಜಮೀನು, ಆಸ್ತಿ ಅಥವಾ ಹೊಸ ವಾಹನವನ್ನು ಖರೀದಿಸಲು ಇದು ಅತ್ಯಂತ ಅನುಕೂಲಕರ ಸಮಯ.

ಧನು ರಾಶಿ (Sagitarius): ಗ್ರಹಣ ಕೊನೆಗೊಳ್ಳುವ ದಿನದಿಂದ, ಅದೃಷ್ಟ ನಿಮ್ಮ ಕೈ ಹಿಡಿಯುವುದು. ಮಾಡುವ ಪ್ರತಿಯೊಂದು ಕೆಲಸದಲ್ಲೂ ಅನುಕೂಲಕರ ಫಲಿತಾಂಶ ಸಿಗುವುದು. ಐಟಿ, ವ್ಯವಹಾರ ಮತ್ತು ಸಂಶೋಧನಾ ಕ್ಷೇತ್ರಗಳಲ್ಲಿರುವವರಿಗೆ ದೊಡ್ಡ ಮಟ್ಟದ ಬಡ್ತಿ ಅಥವಾ ಮನ್ನಣೆ ಸಿಗುವುದು. ಮಾನಸಿಕ ಒತ್ತಡ ಕಡಿಮೆಯಾಗುವುದು. ಆಧ್ಯಾತ್ಮಿಕತೆಯತ್ತ ಒಲವು ಹೆಚ್ಚುವುದು.

solar eclipse zodiac sign

solar eclipse zodiac sign

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ