'ನರೇಂದ್ರ' ಹೆಸರೇ ಆಗ್ಬರಲ್ಲ: ಪಾಕ್ ಬಾಕ್ಸರ್ ಮಾತು ಕೇಳಿ ನಗೆಗಡಲಲ್ಲಿ ತೇಲಿದ ಮೋದಿ

'ನರೇಂದ್ರ' ಹೆಸರೇ ಆಗ್ಬರಲ್ಲ: ಪಾಕ್ ಬಾಕ್ಸರ್ ಮಾತು ಕೇಳಿ ನಗೆಗಡಲಲ್ಲಿ ತೇಲಿದ ಮೋದಿ

'ನರೇಂದ್ರ' ಹೆಸರೇ ಆಗ್ಬರಲ್ಲ: ಪಾಕ್ ಬಾಕ್ಸರ್ ಮಾತು ಕೇಳಿ ನಗೆಗಡಲಲ್ಲಿ ತೇಲಿದ ಮೋದಿ

ನವದೆಹಲಿ: ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಬೆಳ್ಳಿ ಪದಕ ಗೆದ್ದ ಭಾರತದ ಬಾಕ್ಸರ್ ನರೇಂದರ್ ಬರ್ವಾಲ್, ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾದ ಸಂದರ್ಭದಲ್ಲಿ ಈ ಹಿಂದೆ ತಮಗಾದ ತಮಾಷೆಯ ಅನುಭವವೊಂದನ್ನು ಬಿಚ್ಚಿಟ್ಟಿದ್ದಾರೆ. ಅದನ್ನು ಕೇಳಿದ ಪ್ರಧಾನಿ ಮೋದಿ ನಗೆಗಡಲಿನಲ್ಲಿ ತೇಲಿದ್ದಾರೆ.

2015ರ 'ವರ್ಲ್ಡ್ ಮಿಲಿಟರಿ ಗೇಮ್ಸ್' ಪಂದ್ಯಾವಳಿಯಲ್ಲಿ ನರೇಂದರ್ ಬರ್ವಾಲ್ ಅವರು ಪಾಕಿಸ್ತಾನದ ಬಾಕ್ಸರ್ ವಿರುದ್ಧ ಸೆಣಸಾಡಿ ಗೆಲುವು ಸಾಧಿಸಿದ್ದರು.

ಪಂದ್ಯದ ವೇಳೆ ಇಬ್ಬರೂ ಬಾಕ್ಸರ್‌ಗಳ ಮುಖಕ್ಕೆ ಗಾಯಗಳಾಗಿದ್ದರಿಂದ ಚಿಕಿತ್ಸೆಗೆಂದು ಒಟ್ಟಿಗೆ ಆಸ್ಪತ್ರೆಗೆ ತೆರಳಿದ್ದರು. ಈ ವೇಳೆ ಪಾಕ್ ಬಾಕ್ಸರ್, 'ನಿಮ್ಮ ಹೆಸರು ನರೇಂದರ್, ನಿಮ್ಮ ಕೋಚ್ ಹೆಸರು ನರೇಂದ್ರ ರಾಣಾ, ನಿಮ್ಮ ಪ್ರಧಾನ ಮಂತ್ರಿಯ ಹೆಸರೂ ನರೇಂದ್ರ ಮೋದಿ...' ನನಗೆ ಈ 'ನರೇಂದ್ರ' ಅನ್ನೋ ಹೆಸರನ್ನ ಕೇಳಿದರೇನೇ ಕೋಪ ಬರುವಂತಾಗಿದೆ ಎಂದು ತಮಾಷೆಯಾಗಿ ಹೇಳಿದ್ದನ್ನು ಬರ್ವಾಲ್ ಮೋದಿ ಅವರೊಂದಿಗೆ ಹೇಳಿಕೊಂಡಿದ್ದಾರೆ.

ಅಭಿನಂದನಾ ಸಮಾರಂಭದಲ್ಲಿ ಈ ಸ್ವಾರಸ್ಯಕರ ಘಟನೆಯನ್ನು ವಿವರಿಸುತ್ತಿದ್ದಂತೆ ಪ್ರಧಾನಿ ಮೋದಿ ಸೇರಿದಂತೆ ಅಲ್ಲಿದ್ದವರೆಲ್ಲರೂ ಜೋರಾಗಿ ನಕ್ಕಿದ್ದಾರೆ.

ಆಧಾರ: ಎನ್‌ಡಿಟಿ, ಎಎನ್‌ಐ

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ