ಬೆಂಗಳೂರಲ್ಲಿ ಹಳೆಯ ಬಟ್ಟೆಗಳಿಗೂ ಕಾಸು - ನೋಕಸ ಅಂತಲೇ ದುಡ್ಡು ಮಾಡಿದ ಇಬ್ಬರು ಯುವಕರ ಸಕ್ಸಸ್‌ ಸ್ಟೋರಿ

ಬೆಂಗಳೂರಲ್ಲಿ ಹಳೆಯ ಬಟ್ಟೆಗಳಿಗೂ ಕಾಸು - ನೋಕಸ ಅಂತಲೇ ದುಡ್ಡು ಮಾಡಿದ ಇಬ್ಬರು ಯುವಕರ ಸಕ್ಸಸ್‌ ಸ್ಟೋರಿ

ಬೆಂಗಳೂರಲ್ಲಿ ಹಳೆಯ ಬಟ್ಟೆಗಳಿಗೂ ಕಾಸು - ನೋಕಸ ಅಂತಲೇ ದುಡ್ಡು ಮಾಡಿದ ಇಬ್ಬರು ಯುವಕರ ಸಕ್ಸಸ್‌ ಸ್ಟೋರಿ

Bengaluru: ಬೆಂಗಳೂರಿನಲ್ಲಿ ಇರುವ ಸಮಸ್ಯೆಗಳಲ್ಲಿ ಕಸದ ಸಮಸ್ಯೆಯೂ ಒಂದು. ಅದರಲ್ಲೂ ಬೆಂಗಳೂರಿನಲ್ಲಿ ಇತ್ತೀಚಿನ ವರ್ಷಗಳಲ್ಲಿ ಕಸದ ಸಮಸ್ಯೆಯು ವಿಪರೀತ ಎನ್ನುವಷ್ಟು ಹೆಚ್ಚಾಗಿದೆ. ಬೆಂಗಳೂರಿನಲ್ಲಿನ ಕಸದ ಸಮಸ್ಯೆಗೆ ಇಬ್ಬರು ಯುವಕರು ತಮ್ಮದೇ ಶೈಲಿಯಲ್ಲಿ ಪರಿಹಾರ ಕಂಡುಕೊಂಡಿದ್ದಾರೆ.

ಕೆಲಸಕ್ಕಾಗಿ ಬೆಂಗಳೂರು ನಗರಕ್ಕೆ ಆಗಮಿಸಿದ್ದ ಯುವ ಉದ್ಯಮಿ ಪ್ರಸಾದ್ ಲಿಂಗವರ್ ಅವರು ಬೆಂಗಳೂರಿನಲ್ಲಿ ಟೆಕ್ಸ್‌ಟೈಲ್ಸ್‌ (ಬಟ್ಟೆ ಕಸ) ಕಸದ ಸಮಸ್ಯೆ ನೋಡಿ ಇದಕ್ಕೊಂದು ಪರಿಹಾರ ಕಂಡುಕೊಳ್ಳಬೇಕು ಎಂದು ನಿರ್ಧರಿಸಿದರು. ಲಿಂಗವರ್ ಅವರು ತಮ್ಮ ರೂಮ್‌ಮೇಟ್ ಹಾಗೂ ಕಾಲೇಜು ಸ್ನೇಹಿತ ನಚಿಕೇತ ಆಚಾರ್ಯ ಅವರೊಂದಿಗೆ ಸೇರಿ ಇದಕ್ಕೊಂದು ಪರಿಹಾರ ಕಂಡುಕೊಳ್ಳಲು ಮುಂದಾದರು. ಈ ರೀತಿ ಪ್ರಾರಂಭವಾಗಿದ್ದೇ NoKasa ನೋ ಕಸ ಎನ್ನುವ ಬ್ರ್ಯಾಂಡ್.

ಕೋವಿಡ್ ಸಮಯದಲ್ಲಿ ಪ್ರಾರಂಭವಾದ NoKasa ಎನ್ನುವ ಆಲೋಚನೆಯು ಇದೀಗ ಹೆಮ್ಮರವಾಗಿ ಬೆಳೆದಿದೆ. ಲಿಂಗವರ್ ಮತ್ತು ಆಚಾರ್ಯ ಅವರು ಸೇರಿ ಬೆಂಗಳೂರಿನಲ್ಲಿ ಬಳಸಿ ಬಿಸಾಡಿದ ಅಥವಾ ಎಲ್ಲೆಂದರಲ್ಲಿ ಎಸೆಯಲಾಗುತ್ತಿದ್ದ ಬಟ್ಟೆಯನ್ನು ಮರುಬಳಕೆ ಮಾಡುವ ವಿನೂನ ಪ್ರಯೋಗವನ್ನು ಪ್ರಾರಂಭಿಸಿದರು. ಸಾಫ್ಟ್‌ವೇರ್ ಕೋಡರ್ ಮತ್ತು ಮಾರ್ಕೆಟಿಂಗ್ ವೃತ್ತಿಪರರಾದ ಲಿಂಗವರ್ ಅವರು ಮತ್ತು ಆಚಾರ್ಯ ಅವರು ಭೂಮಿಯಲ್ಲಿ ಡಂಪಿಂಗ್ ಮಾಡಲಾಗುತ್ತಿದ್ದ ಅಂದಾಜು 60,000 ಕೆಜಿಗಿಂತ ಹೆಚ್ಚು ಬಟ್ಟೆ ಕಸವನ್ನು ಉಪಯುಕ್ತವಾಗಿ ಬದಲಾಯಿಸಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಬೆಂಗಳೂರಿನಲ್ಲಿ ಪ್ರಾರಂಭವಾದ ಅತ್ಯುತ್ತಮ ಸ್ಟಾರ್ಟ್ ಅಪ್‌ ಇದಾಗಿದೆ.

NoKasa - ನೋ ಕಸ ಸ್ಟಾರ್ಟ್ ಅಪ್ ಪ್ರಾರಂಭವಾಗಿದ್ದು ಹೇಗೆ

ಪುಣೆಯ ವಿಶ್ವಕರ್ಮ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಎಂಜಿನಿಯರಿಂಗ್ ಪದವೀಧರರಾದ ಲಿಂಗವಾರ್ ಅವರು ಕೆಲಸಕ್ಕಾಗಿ ಬೆಂಗಳೂರಿಗೆ ಬಂದಿದ್ದರು. ಅವರು ತಮ್ಮದೇ ಕ್ವೋಡ್ಇಟ್ ಎನ್ನುವ ಕಂಪನಿಯನ್ನು ಪ್ರಾರಂಭಿಸಿದರು. ಇದು ಉದ್ಯೋಗ ನೇಮಕಾತಿ ಮಾಡುವವರಿಗೆ ತಾಂತ್ರಿಕ ಪರಿಣಿತಿಯನ್ನು ಪರೀಕ್ಷಿಸಲು ಸಹಾಯ ಮಾಡುತ್ತದೆ. ಕೆಲವೇ ದಿನಗಳಲ್ಲಿ ಈ ಕಂಪನಿಯನ್ನು ಅವರು ಮಾರಾಟ ಮಾಡಿದರು. 2018ರಲ್ಲಿ ಲಿಂಗವಾರ್ ಅವರು ಬೆಂಗಳೂರು ನಗರದಲ್ಲಿ ನದಿಗಳು ಮತ್ತು ಪಾದಚಾರಿ ಮಾರ್ಗಗಳನ್ನು ಸ್ವಚ್ಛಗೊಳಿಸುವ ಸಮುದಾಯದ ಭಾಗವಾಗಿದ್ದರು.

ಇನ್ನು ಕಳೆದ ವರ್ಷ ಬೆಂಗಳೂರಿನಾದ್ಯಂತ ನಡೆದ ಕಸ ಸಂಗ್ರಹ ಅಭಿಯಾನದಲ್ಲಿ 10 ಜನರಲ್ಲಿ ಕನಿಷ್ಠ 4 ಜನ ಹಳೆಯ ಬಟ್ಟೆಯನ್ನು ಕೊಟ್ಟಿದ್ದರು. ಬೆಂಗಳೂರಿಗರು ಕಾಗದ, ಪ್ಲಾಸ್ಟಿಕ್ ಅಥವಾ ಲೋಹದ ಸ್ಕ್ರ್ಯಾಪ್‌ಗಾಗಿ ಸಂಗ್ರಾಹಕರನ್ನು ಸುಲಭವಾಗಿ ಹುಡುಕಬಹುದಾದರೂ, ಒಂದು ಪ್ರಶ್ನೆ ಕಾಡುತ್ತಲ್ಲೇ ಇತ್ತು "ನಮ್ಮ ಹಳೆಯ ಬಟ್ಟೆಗಳನ್ನು ಯಾರು ತೆಗೆದುಕೊಳ್ಳುತ್ತಾರೆ?" ಎನ್ನುವುದು. ಸಮಸ್ಯೆಯೆಂದರೆ ಹಳೆಯ ಬಟ್ಟೆಯನ್ನು ಸಂಗ್ರಹಿಸಲು ಯಾರೂ ಇರಲಿಲ್ಲ. ಇದು ನೋಕಾಸಾ ಎನ್ನುವ ಬ್ರ್ಯಾಂಡ್ ಪ್ರಾರಂಭವಾಗುವುದಕ್ಕೆ ಕಾರಣವಾಯಿತು.

ಲಿಂಗವಾರ್ ಮತ್ತು ಆಚಾರ್ಯ ಅವರು ಬಟ್ಟೆ ಕಸವನ್ನು ಸಂಗ್ರಹಿಸಲು ಪ್ರಾರಂಭಿಸಿದರು. ಈ ರೀತಿ ಕೊಟ್ಟ ಬಟ್ಟೆಗಳಲ್ಲಿ ಧರಿಸಬಹುದಾದ ಬಟ್ಟೆಗಳಿಗೆ ಪ್ರತಿ ಕೆಜಿಗೆ 10 ರೂ.ಗಳನ್ನು ಕೊಡಲಾಯಿತು. ಇದಕ್ಕೆ ಎನ್‌ಜಿಒ ಹಸಿರು ದಳ ಸಹ ಕೈಜೋಡಿಸಿತು. ನೊಕಾಸಾ ಬೆಂಗಳೂರಿನ ವಸತಿ ಪ್ರದೇಶಗಳಲ್ಲಿ ಸ್ಮಾರ್ಟ್ ಬಿನ್‌ಗಳನ್ನು ಸ್ಥಾಪಿಸುವ ಮೂಲಕ ಬಟ್ಟೆ ಕಸವನ್ನು ಸಂಗ್ರಹಿಸಲು ಪ್ರಾರಂಭಿಸಿತು. ಪ್ರತಿ ಬಿನ್ 100 ಕೆಜಿ ಸಾಮರ್ಥ್ಯವನ್ನು ಹೊಂದಿತ್ತು. ಅದು ಶೇಕಡಾ 75-80 ರಷ್ಟು ಸಾಮರ್ಥ್ಯವನ್ನು ತಲುಪಿದ ನಂತರ, ಬಿನ್ ಅನ್ನು ತೆರವುಗೊಳಿಸಲು ಯೋಜನೆ ರೂಪಿಸಲಾಯಿತು. ಇದು ಯಶಸ್ವಿಯೂ ಆಯಿತು.

8-10 ಉದ್ಯೋಗಿಗಳಿಂದ ಪ್ರಾರಂಭವಾದ ನೊಕಾಸಾ ಮನೆಗಳಿಂದ ಬಟ್ಟೆ ಕಸವನ್ನು ಸಂಗ್ರಹಿಸುತ್ತಿದೆ. ಅವುಗಳನ್ನು ಒಂದು ನಿರ್ದಿಷ್ಟ ಪ್ರದೇಶಕ್ಕೆ ಸಾಗಿಸಲಾಗುತ್ತಿದ್ದು, ಅಲ್ಲಿ ಅವುಗಳನ್ನು ಬೇರ್ಪಡಿಸಲಾಗುತ್ತದೆ. ಬಟ್ಟೆಗಳನ್ನು ಮೂರು ವರ್ಗಗಳಾಗಿ ವಿಂಗಡಿಸಲಾಗಿದೆ. ವರ್ಗ ಎ ಅಡಿಯಲ್ಲಿ ಇನ್ನೂ ಧರಿಸಬಹುದಾದ ಉಡುಪುಗಳಿವೆ. ನಂಬಲು ಕಷ್ಟವಾಗಬಹುದು, ಆದರೆ 50,000 ಕ್ಕೂ ಹೆಚ್ಚು ಅಂತಹ ಎ- ವರ್ಗದ ಬಟ್ಟೆಗಳನ್ನು ಕೆಆರ್ ಮಾರುಕಟ್ಟೆಯಲ್ಲಿ ಮಾರಾಟ ಮಾಡಲಾಗುತ್ತದೆ.

ಇದು ನಮಗೆ ಆದಾಯದ ಪ್ರಮುಖ ಮೂಲವಾಗಿದೆ ಎಂದಿದ್ದಾರೆ. ವರ್ಗ ಬಿಯಲ್ಲಿ ನವೀಕರಿಸಬಹುದಾದ ಸಣ್ಣದಾಗಿ ಡ್ಯಾಮೇಜ್ ಆಗಿರುವ ಬಟ್ಟೆಗಳನ್ನು ಒಳಗೊಂಡಿದೆ. ನೊಕಾಸಾ ಸಾಮಾನ್ಯವಾಗಿ ಈ ಬಟ್ಟೆಗಳನ್ನು ಅಗತ್ಯವಿರುವವರಿಗೆ ಸಹ ದಾನ ಮಾಡುತ್ತದೆ. ವರ್ಗ ಸಿ ಅಡಿಯಲ್ಲಿ, ಮರುಬಳಕೆ ಮಾಡಲಾಗದ ಹಾನಿಗೊಳಗಾದ ಉಡುಪುಗಳನ್ನು ಸಾಹಸ್ ಎಂಬ ಎನ್‌ಜಿಒ ಮೂಲಕ ಸಂಸ್ಕರಿಸಲಾಗುತ್ತದೆ.

ನೋಕಸದ ಹೆಚ್ಚಿನ ಮಾಹಿತಿಗೆ: https://nokasa.co/

namma bengaluru waste success story

namma bengaluru waste success story

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ