ಕೆಂಚನಗುಡ್ಡದ ಹಳೆ ರಸ್ತೆ ಸಂಪೂರ್ಣ ದುರವಸ್ಥೆ: ಜಾಲಿ ಗಿಡಗಳಿಂದ ಸವಾರರಿಗೆ ತೊಂದರೆ

ಕೆಂಚನಗುಡ್ಡದ ಹಳೆ ರಸ್ತೆ ಸಂಪೂರ್ಣ ದುರವಸ್ಥೆ: ಜಾಲಿ ಗಿಡಗಳಿಂದ ಸವಾರರಿಗೆ ತೊಂದರೆ

ಕೆಂಚನಗುಡ್ಡದ ಹಳೆ ರಸ್ತೆ ಸಂಪೂರ್ಣ ದುರವಸ್ಥೆ: ಜಾಲಿ ಗಿಡಗಳಿಂದ ಸವಾರರಿಗೆ ತೊಂದರೆ

ಡಿ.ಮಾರೆಪ್ಪ ನಾಯಕ ತಾಲ್ಲೂಕಿನ ಕೆಂಚನಗುಡ್ಡ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಹಳೆ ರಸ್ತೆಯು ಸಂಪೂರ್ಣವಾಗಿ ಹದಗೆಟ್ಟಿದ್ದು, ವಾಹನ ಸವಾರರು ಹಾಗೂ ಸಾರ್ವಜನಿಕರು ದಿನನಿತ್ಯ ತೀವ್ರ ಸಂಕಷ್ಟ ಎದುರಿಸುವಂತಾಗಿದೆ.

ಹದಗೆಟ್ಟ ರಸ್ತೆ: ರಸ್ತೆಯುದ್ದಕ್ಕೂ ಕಿತ್ತಿಹೋದ ಡಾಂಬರ್ ಹಾಗೂ ಬೃಹತ್ ಗುಂಡಿಗಳು ಬಿದ್ದಿದ್ದು, ಚಾಲನೆ ಮಾಡುವುದು ಕಷ್ಟಕರವಾಗಿದೆ.

ಜಾಲಿ ಮುಳ್ಳಿನ ಕಂಟೆಗಳು: ಸಿರುಗುಪ್ಪ ನಗರದಿಂದ ಕೆಂಚನಗುಡ್ಡ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಹಳೆ ರಸ್ತೆಯಲ್ಲಿ ಪ್ರತಿನಿತ್ಯ ನೂರಾರು ವಾಹನಗಳು ಸಂಚರಿಸುತ್ತವೆ. ಆದರೆ ರಸ್ತೆಯ ಇಕ್ಕೆಲಗಳಲ್ಲಿ ಗಿಡ ಗಂಟೆಗಳು ಬೆಳೆದು ರಸ್ತೆಯ 2 ಬದಿ ಚಾಚಿಕೊಂಡಿರುವುದರಿಂದ ರಸ್ತೆಯ ತಿರುವುಗಳಲ್ಲಿ ಎದುರುಗಡೆ ಬರುವ ವಾಹನಗಳು ಕಾಣಿಸದೆ ಹಲವು ಅಪಘಾತಗಳಾಗುತ್ತಿವೆ.

ಜತೆಗೆ, ವಾಹನ ಸವಾರರು ಪ್ರತಿನಿತ್ಯ ತೊಂದರೆ ಅನುಭವಿಸುತ್ತಿದ್ದಾರೆ. ಅಪಘಾತಗಳ ತಾಣವಾಗಿ ಮಾರ್ಪಟ್ಟಿದೆ. ಇದಕ್ಕೇಲ್ಲ ಕಾರಣ ರಸ್ತೆ ಬದಿಯಲ್ಲಿ ಬೆಳೆದು ನಿಂತಿರುವ ಗಿಡಗಂಟಿಗಳು. ಎದುರಿನಿಂದ ಬರುವ ವಾಹನ ಕಾಣಿಸದೆ ಪ್ರಾಣವನ್ನು ಅಂಗೈನಲ್ಲಿಟ್ಟುಕೊಂಡು ಸಂಚರಿಸಿದರೂ ಅಪಾಯ ತಪ್ಪಿದ್ದಲ್ಲ ಎಂಬ ಪರಿಸ್ಥಿತಿ ಉದ್ಭವಿಸಿದೆ.

ಸವಾರರಿಗೆ ಗಾಯದ ಭೀತಿ: ಗ್ರಾಮ ದಿಂದ ತಾಲ್ಲೂಕು ಕೇಂದ್ರಕ್ಕೆ ನಿತ್ಯ ಗ್ರಾಮಸ್ಥರು ದ್ವಿಚಕ್ರ ವಾಹನಗಳಲ್ಲಿ ಸಂಚರಿಸುವಾಗ ಜಾಲಿ ಗಿಡದ ಮುಳ್ಳಿನ ಕೊಂಬೆಗಳು ಸವಾರರ ಮುಖಕ್ಕೆ ಬಡಿಯುತ್ತಿದ್ದು, ಸಣ್ಣಪುಟ್ಟ ಅಪಘಾತ ಗಳು ಮರುಕಳಿಸಿರುವ ಅನೇಕ ಉದಾ ಹರಣೆಗಳು ಜೀವಂತವಾಗಿವೆ. ಇದರಿಂದ ಸಾವರರು ಆಕ್ರೋಶ ಗೊಂಡು ಗ್ರಾಮ ಪಂಚಾಯತಿ ಅಧಿಕಾರಿಗಳ ಗಮನಕ್ಕೆ ತಂದರು ಪ್ರಯೋಜ ನವಾಗಿಲ್ಲ. ಭಯದ ಭೀತಿಯಲ್ಲಿ ಸಂಚಾರಿಸುವಂತಾಗಿದೆ.

ಸಂಬಂಧಪಟ್ಟ ಲೋಕೋಪಯೋಗಿ ಹಾಗೂ ಪಂಚಾಯತ್ ರಾಜ್ ಇಲಾಖೆಯ ಅಧಿಕಾರಿಗಳು ತಕ್ಷಣ ಸ್ಥಳಕ್ಕೆ ಭೇಟಿ ನೀಡಿ, ರಸ್ತೆ ದುರಸ್ತಿ ಕಾರ್ಯ ಕೈಗೊಳ್ಳಬೇಕೆಂದು ಗ್ರಾಮಸ್ಥರು ಹಾಗೂ ವಾಹನ ಸವಾರರು ತೀವ್ರವಾಗಿ ಆಗ್ರಹಿಸಿದ್ದಾರೆ.

‘ತಕ್ಷಣವೇ ರಸ್ತೆ ದುರಸ್ತಿ ಮಾಡಿ’

ರಸ್ತೆಯ ಇಕ್ಕೆಲಗಳಲ್ಲಿ ಜಾಲಿ ಗಿಡಗಳು, ಕಾಡು ಜಾತಿಯ ಗಿಡ ಗಂಟಿಗಳು ಬೆಳೆದು ರಸ್ತೆಗೆ ಚಾಚಿಕೊಂಡಿವೆ.

ಬೈಕ್‌ಗಳಲ್ಲಿ ಸಂಚರಿಸುವಾಗ ಮುಳ್ಳುಗಳು ಕೈಕಾಲು, ಮುಖಕ್ಕೆ ಅನೇಕ ಬಾರಿ ತಾಗಿ ಗಾಯ ಮಾಡಿಕೊಂಡಿರುವೆ, ರಸ್ತೆಯ 2 ಬದಿ ವಿವಿಧ ಗಿಡ ಗಂಟಿಗಳು ಮುಗಿಲೆತ್ತರ ಬೆಳೆದು ನಿಂತಿದ್ದು,ಈ ರಸ್ತೆಯಲ್ಲಿ ಸಂಚರಿಸುವುದು ದಿನನಿತ್ಯ ಸಾಹಸದಂತಾಗಿದೆ.

‘ಕತ್ತಲಾದರೆ ಮುಳ್ಳಿನ ಕಂಟೆಗಳಿಂದಾಗಿ ಎದುರಿನಿಂದ ಬರುವ ವಾಹನಗಳು ಕಾಣಿಸುವುದಿಲ್ಲ. ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ತಕ್ಷಣವೇ ಎಚ್ಚೆತ್ತುಕೊಂಡು ರಸ್ತೆ ಬದಿಯ ಜಾಲಿ ಗಿಡಗಳನ್ನು ತೆರವುಗೊಳಿಸಿ, ನೂತನ ರಸ್ತೆ ನಿರ್ಮಿಸಿಕೊಡಬೇಕು’ ಎಂದು ವಾಹನ ಸವಾರರ ಆಗ್ರಹವಾಗಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260809-25-1759874790

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ