
ಗೋಕಾಕ: ತ್ರಿವಳಿ ಶಿಶುಗಳ ಜನನ
ಗೋಕಾಕ (ಬೆಳಗಾವಿ ಜಿಲ್ಲೆ): ಇಲ್ಲಿನ ಸರ್ಕಾರಿ ಆಸ್ಪತ್ರೆಯ ಹೆರಿಗೆ ವಿಭಾಗದಲ್ಲಿ ಮೂಡಲಗಿ ತಾಲ್ಲೂಕಿನ ಸಂಗನಕೇರಿ ಗ್ರಾಮದ ರೇಣುಕಾ ರವಿ ಗಣಾಚಾರಿ (20) ಅವರು ಮಂಗಳವಾರ ಎರಡು ಗಂಡು ಮತ್ತು ಒಂದು ಹೆಣ್ಣು ಮಗುವಿಗೆ ಜನ್ಮ ನೀಡಿದರು.
‘ಗಂಡು ಶಿಶುಗಳು ತಲಾ 1.600 ಕೆ.ಜಿ. ಮತ್ತು 1.400 ಕೆ.ಜಿ. ಹಾಗೂ ಹೆಣ್ಣು ಶಿಶು 1.500 ಕೆ.ಜಿ. ತೂಕವಿದ್ದು, ಆರೋಗ್ಯವಾಗಿವೆ’ ಎಂದು ಆಸ್ಪತ್ರೆಯ ಡಾ.ಶ್ವೇತಾ ನಾಯಿಕ ತಿಳಿಸಿದರು.