Kabini Dam: ಕಬಿನಿ ಜಲಾಶಯದಿಂದ ಈಗಲೂ ಹರಿಯುತ್ತಿದೆ 10 ಸಾವಿರ ಕ್ಯೂಸೆಕ್‌ ನೀರು

Kabini Dam: ಕಬಿನಿ ಜಲಾಶಯದಿಂದ ಈಗಲೂ ಹರಿಯುತ್ತಿದೆ 10 ಸಾವಿರ ಕ್ಯೂಸೆಕ್‌ ನೀರು

Kabini Dam: ಕಬಿನಿ ಜಲಾಶಯದಿಂದ ಈಗಲೂ ಹರಿಯುತ್ತಿದೆ 10 ಸಾವಿರ ಕ್ಯೂಸೆಕ್‌ ನೀರು

ಬೆಂಗಳೂರು: ಕಾವೇರಿ ನದಿ ನೀರು ಹಂಚಿಕೆ ವಿವಾದ ತೀವ್ರಗೊಳ್ಳುತ್ತಿರುವ ನಡುವೆಯೇ ಕಾವೇರಿ ಕೊಳ್ಳದ ಪ್ರಮುಖ ಜಲಾಶಯವಾದ ಕಬಿನಿಯಿಂದ ಈಗಲೂ 10 ಸಾವಿರ ಕ್ಯೂಸೆಕ್‌ ನೀರು ಹರಿಸಲಾಗುತ್ತಿದೆ.

ಕೇರಳ ಭಾಗದಲ್ಲಿ ಉತ್ತಮ ಮಳೆಯಾಗುತ್ತಿರುವುದರಿಂದ ಕಪಿಲಾ ನದಿ ಮೂಲಕ ಸುಮಾರು 9 ಸಾವಿರ ಕ್ಯೂಸೆಕ್‌ ನೀರು ಜಲಾಶಯಕ್ಕೆ ಹರಿದು ಬರುತ್ತಿದೆ.

ಜಲಾಶಯದಲ್ಲೂ ಶೇ 95ರಷ್ಟು ನೀರು ಸಂಗ್ರಹವಾಗಿದೆ.ಜಲಾಶಯದ ನೀರಿನ ಮಟ್ಟವು ಸದ್ಯ 2282.59 ಅಡಿ ಇದೆ. 18.61 ಟಿಎಂಸಿ ನೀರು ಲಭ್ಯವಿದೆ. ಜಲಾಶಯದ ಸುರಕ್ಷತೆ ದೃಷ್ಟಿಯಿಂದ ಸುಮಾರು 10 ಸಾವಿರ ಕ್ಯೂಸೆಕ್‌ ನೀರನ್ನು ನದಿ ಮೂಲಕ ಹರಿಬಿಡಲಾಗುತ್ತಿದೆ.

ಕಳೆದ ವಾರ ಆರಂಭಗೊಂಡ ಮಳೆ ಈಗಲೂ ಕೇರಳದ ವಯನಾಡು ಭಾಗದಲ್ಲಿ ಮುಂದುವರಿದಿದೆ. ಇನ್ನೂ ಕೆಲವು ದಿನ ಮಳೆಯಾಗುವ ಮುನ್ಸೂಚನೆ ಇರುವುದರಿಂದ ಕಬಿನಿ ಜಲಾಶಯಕ್ಕೆ ಒಳ ಹರಿವು ನಿರಂತರವಾಗಿ ಇರಲಿದೆ. ಹೆಚ್ಚಿನ ನೀರು ಬರುತ್ತಿರುವುದರಿಂದ ಅಷ್ಟೇ ಪ್ರಮಾಣದಲ್ಲಿ ಹೊರ ಹರಿಸುತ್ತಿದ್ದೇವೆ ಎಂದು ಕಬಿನಿ ಜಲಾಶಯದ ಇಂಜಿನಿಯರ್ ಒಬ್ಬರು ತಿಳಿಸಿದರು.

ಜಲಾಶಯದ ಗರಿಷ್ಠ ನೀರಿನ ಮಟ್ಟ 2284 ಅಡಿ. ಜಲಾಶಯದಲ್ಲಿ 19.52 ಟಿಎಂಸಿ ನೀರು ಸಂಗ್ರಹಿಸಲು ಅವಕಾಶವಿದೆ. ಕಳೆದ ವರ್ಷ ಇದೇ ದಿನ ಜಲಾಶಯದಲ್ಲಿ 2281.76 ಅಡಿ ನೀರಿತ್ತು. 18.09 ಟಿಎಂಸಿ ನೀರು ಸಂಗ್ರಹವಿತ್ತು. ಈ ವರ್ಷ ಕಳೆದ ವರ್ಷಕ್ಕಿಂತ ಹೆಚ್ಚಿನ ನೀರು ಕಬಿನಿ ಜಲಾಶಯದಲ್ಲಿ ಸಂಗ್ರಹವಿದೆ.

ಕಾವೇರಿ ಕೊಳ್ಳದ ಇನ್ನೊಂದು ಪ್ರಮುಖ ಜಲಾಶಯವಾದ ಕೃಷ್ಣರಾಜ ಸಾಗರಕ್ಕೆ 6473 ಕ್ಯೂಸೆಕ್‌ ನೀರು ಹರಿದು ಬರುತ್ತಿದೆ. ಕೊಡಗಿನ ಹಾರಂಗಿ ಜಲಾಶಯದಿಂದ 6041 ಕ್ಯೂಸೆಕ್‌ ಹೊರ ಬಿಡುತ್ತಿರುವುದರಿಂದ ಕೆಆರ್ ಎಸ್ ಜಲಾಶಯದ ಒಳಹರಿವಿನ ಪ್ರಮಾಣವೂ ಉತ್ತಮವಾಗಿದೆ.

ಜಲಾಶಯದ ನೀರಿನ ಮಟ್ಟವು 109.53 ಅಡಿಯಿದೆ. ಕಳೆದ ವರ್ಷ ಇದೇ ದಿನ 124.35 ಅಡಿ ನೀರು ಸಂಗ್ರಹವಾಗಿತ್ತು. ಜಲಾಶಯದಿಂದ ಈಗ 2298 ಕ್ಯೂಸೆಕ್‌ ನೀರು ಹೊರ ಬಿಡಲಾಗುತ್ತಿದೆ. ಈ ವರ್ಷ ಜಲಾಶಯ ತುಂಬಲು ಇನ್ನೂ 15 ಅಡಿ ನೀರು ಬೇಕಿದೆ. ಅಂದರೆ ಸುಮಾರು18 ಟಿಎಂಸಿ ನೀರು ಬೇಕು.

ಕೊಡಗಿನ ಹಾರಂಗಿ ಜಲಾಶಯಕ್ಕೆ ಈಗಲೂ 6153 ಕ್ಯೂಸೆಕ್‌ ನೀರು ಹರಿದು ಬರುತ್ತಿದ್ದು, ಜಲಾಶಯ ಬಹುತೇಕ ಎರಡು ವಾರದಿಂದಲೂ ಭರ್ತಿ ಇದೆ. ಜಲಾಶಯದಲ್ಲಿ 2858.30 ಅಡಿ ನೀರು ಸಂಗ್ರಹವಿದೆ. ಇಲ್ಲಿ 2859 ಅಡಿ ನೀರು ಸಂಗ್ರಹಿಸಬಹುದು. 8.26 ಟಿಎಂಸಿ ನೀರು ಲಭ್ಯವಿದೆ.

ಹಾಸನ ಜಿಲ್ಲೆಯ ಹೇಮಾವತಿ ಜಲಾಶಯಕ್ಕೆ ಒಳಹರಿವು ಕಡಿಮೆಯಾಗಿದೆ. ಸದ್ಯ 3216 ಕ್ಯೂಸೆಕ್ ನೀರು ಹರಿದು ಬರುತ್ತಿದ್ದು, ಜಲಾಶಯ ಶೇ 84ರಷ್ಟು ಭರ್ತಿಯಾಗಿದೆ. ಸದ್ಯ 2915.70 ಅಡಿ ನೀರು ಜಲಾಶಯದಲ್ಲಿದ್ದು, 31.28 ಟಿಎಂಸಿ ನೀರು ಸಂಗ್ರಹವಾಗಿದೆ. ಕಳೆದ ವರ್ಷ ಇದೇ ದಿನ 37 ಟಿಎಂಸಿ ನೀರಿತ್ತು.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ