
ಹೊರ್ಮುಜ್ | ಯುಎಇ ಹಡಗಿನ ಮೇಲೆ ಇರಾನ್ ದಾಳಿ: ವಿದೇಶಾಂಗ ಸಚಿವಾಲಯ ಆರೋಪ
ದುಬೈ (ಎಪಿ): ಅಬುಧಾಬಿಯ ಸರ್ಕಾರಿ ಒಡೆತನದ ಎಡಿಎನ್‌ಒಸಿ ತೈಲ ಮತ್ತು ಅನಿಲ ಕಂಪನಿಯ ಹಡಗಿನ ಮೇಲೆ ಹೊರ್ಮುಜ್ ಜಲಸಂಧಿಯಲ್ಲಿ ಕ್ಷಿಪಣಿ ದಾಳಿ ನಡೆದಿದ್ದು, ಇರಾನ್ ಈ ದಾಳಿ ನಡೆಸಿದೆ ಎಂದು ವಿದೇಶಾಂಗ ಸಚಿವಾಲಯ ಆರೋಪಿಸಿದೆ.
ಘಟನೆಗೆ ಸಂಬಂಧಿಸಿದಂತೆ ಎಡಿಎನ್‌ಒಸಿ ಪ್ರಕಟಣೆ ಹೊರಡಿಸಿ, ಶನಿವಾರ ಬೆಳಿಗ್ಗೆಯೇ ದಾಳಿ ನಡೆದಿದೆ. ಆದರೆ, ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದೂ ತಿಳಿಸಿದೆ.
ಇರಾನ್ ಮೇಲೆ ಅಮೆರಿಕ ಮತ್ತು ಇಸ್ರೇಲ್ ದಾಳಿ ಆರಂಭಿಸಿದಾಗಿನಿಂದ ಹೊರ್ಮುಜ್ ಮಾರ್ಗದಲ್ಲಿ ಸಂಚರಿಸುವಾಗ ಎಡಿಎನ್‌ಒಸಿ ಒಡೆತನದ ಸುಮಾರು 12ಕ್ಕೂ ಅಧಿಕ ಹಡಗುಗಳ ಮೇಲೆ ಕ್ಷಿಪಣಿ ಹಾಗೂ ಡ್ರೋನ್‌ಗಳ ಮೂಲಕ ದಾಳಿ ನಡೆಸಲಾಗಿದೆ. ಈ ಘಟನೆಗಳಲ್ಲಿ ಒಬ್ಬ ಸಿಬ್ಬಂದಿ ಮೃತಪಟ್ಟು, 20ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದರು ಎಂದೂ ಸಂಸ್ಥೆ ತಿಳಿಸಿದೆ.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260809-51-612818997