ಶೇ 80ರಷ್ಟು ಸಚಿವರು ‘ಪೇಮೆಂಟ್‌’ ಕೋಟಾದಡಿ ಆಯ್ಕೆಯಾಗಿದ್ದಾರೆ: ರವಿಕುಮಾರ್‌

ಶೇ 80ರಷ್ಟು ಸಚಿವರು ‘ಪೇಮೆಂಟ್‌’ ಕೋಟಾದಡಿ ಆಯ್ಕೆಯಾಗಿದ್ದಾರೆ: ರವಿಕುಮಾರ್‌

ಶೇ 80ರಷ್ಟು ಸಚಿವರು ‘ಪೇಮೆಂಟ್‌’ ಕೋಟಾದಡಿ ಆಯ್ಕೆಯಾಗಿದ್ದಾರೆ: ರವಿಕುಮಾರ್‌

ಬೆಳಗಾವಿ: ‘ಡಿ.ಕೆ.ಶಿವಕುಮಾರ್‌ ನೇತೃತ್ವದ ಸಂಪುಟದಲ್ಲಿ ಶೇ 80ರಷ್ಟು ಸಚಿವರನ್ನು ‘ಪೇಮೆಂಟ್’ ಕೋಟಾದಡಿ ಆಯ್ಕೆ ಮಾಡಲಾಗಿದೆ’ ಎಂದು ವಿಧಾನ ಪರಿಷತ್ ಸದಸ್ಯ ಎನ್.ರವಿಕುಮಾರ್ ವ್ಯಂಗ್ಯವಾಡಿದರು.

ಇಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ರಾಹುಲ್‌ ಗಾಂಧಿ ಅವರಿಗೆ ಕರ್ನಾಟಕ ಎಟಿಎಂ ಆಗಿದೆ. ರಾಜ್ಯದಲ್ಲಿ ನಾಲ್ಕೈದು ಕಡೆ ಎಟಿಎಂಗಳಿವೆ. ಎಲ್ಲ ಕಡೆಯಿಂದ ಹಣ ಸಂದಾಯವಾಗಬೇಕು. ಮುಂದೊಂದು ದಿನ ಎಲ್ಲ ವಿಚಾರಗಳ ಬಗ್ಗೆ ಸತ್ಯಾಂಶ ಹೊರಬರಲಿದೆ’ ಎಂದು ತಿಳಿಸಿದರು.

‘ಸಂಪುಟದಲ್ಲಿ ಬ್ರಾಹ್ಮಣರು ಸೇರಿ ಬೇರೆ ಬೇರೆ ಸಮುದಾಯದವರಿಗೆ ಸ್ಥಾನ ಕೊಟ್ಟಿಲ್ಲ. ಪಟ್ಟಿಯಲ್ಲಿ ಹೆಸರಿದ್ದರೂ ಆರ್‌.ವಿ.ದೇಶಾಂಡೆ, ಎಚ್.ಕೆ.ಪಾಟೀಲ ತೆಗೆದುಹಾಕಿದ್ದಾರೆ. ಗಾಯತ್ರಿ ಶಾಂತಕುಮಾರ ಹೆಸರು ಕೈಬಿಟ್ಟಿದ್ದಾರೆ. ಮಂಕಾಳ ವೈದ್ಯ ಕೈಬಿಟ್ಟು, ಎಸ್.ಎಸ್.ಮಲ್ಲಿಕಾರ್ಜುನ ಅವರನ್ನು ಸಚಿವರನ್ನಾಗಿ ಮಾಡಿದ್ದೇಕೆ’ ಎಂದು ಪ್ರಶ್ನಿಸಿದರು.

‘ಮಂಕಾಳ ವೈದ್ಯ ಹಣ ನೀಡದ್ದಕ್ಕೆ ಸಚಿವರನ್ನಾಗಿ ಮಾಡಿಲ್ಲ’ ಎಂದು ದೂರಿದರು.

‘ರಾಜ್ಯದಲ್ಲಿ ಬರ ಪರಿಸ್ಥಿತಿ ಇದೆ. ರೈತರು ಕಂಗಾಲಾಗಿದ್ದಾರೆ. ಕಾಂಗ್ರೆಸ್‌ನಲ್ಲಿ ಎರಡು ಬಣಗಳಾಗಿವೆ. ಸಿದ್ದರಾಮಯ್ಯ ಎಲ್ಲಿಯೂ ಮಾತನಾಡಲಾಗದೆ ಮೌನವಾಗಿದ್ದಾರೆ. ಸಿದ್ದರಾಮಯ್ಯ ಅವರನ್ನು ಅಪ್ರಜಾಸತಾತ್ಮಕವಾಗಿ ಕೆಳಗಿಳಿಸಿದ್ದಾರೆ. ಇಡೀ ಹಿಂದುಳಿದ ವರ್ಗವೇ ಕಾಂಗ್ರೆಸ್ ಸರ್ಕಾರದ ವಿರುದ್ದವಾಗಿದೆ’ ಎಂದು ಆರೋಪಿಸಿದರು.

‘ಸದ್ಯ ಸಚಿವರನ್ನಷ್ಟೇ ಆಯ್ಕೆ ಮಾಡಲಾಗಿದೆ. ಖಾತೆ ಹಂಚಿಕೆ ಮಾಡಿಲ್ಲ. ಖಾತೆ ಹಂಚಿಕೆ ಮಾಡಿದರೆ, ಕಾಂಗ್ರೆಸ್‌ನಲ್ಲಿ ಅಸಮಾಧಾನ ಇನ್ನಷ್ಟು ಬಿಗಡಾಯಿಸಲಿದೆ’ ಎಂದರು.

‘33 ತಂಡಗಳನ್ನು ರಚಿಸಿ, ಬೆಂಗಳೂರಿನಲ್ಲಿ 2,894 ಮಂದಿ ಬಾಂಗ್ಲಾ ವಲಸಿಗರನ್ನು ಪತ್ತೆಹಚ್ಚಿದ್ದಾರೆ. ನಿಜವಾಗಿಯೂ ವಲಸಿಗರನ್ನು ಪತ್ತೆಹಚ್ಚುವ ಉದ್ದೇಶವಿದ್ದರೆ, ರಾಜ್ಯದಾದ್ಯಂತ ಕಾರ್ಯಾಚರಣೆ ಮಾಡಬೇಕಿತ್ತು. ಆಗ ಒಂದು ಲಕ್ಷಕ್ಕಿಂತ ಅಧಿಕ ವಲಸಿಗರು ಸಿಗುತ್ತಿದ್ದರು. ಆದರೆ, ನಾವು ವಲಸಿಗರಿಗೆ ಆಶ್ರಯ ನೀಡಿಲ್ಲ ಎಂದು ತೋರಿಸಿಕೊಳ್ಳಲು ನಾಟಕೀಯವಾಗಿ ದಾಳಿ ಮಾಡಿದ್ದಾರೆ. ಅಕ್ರಮ ವಲಸಿಗರನ್ನು ವಾಪಸ್ ಕಳುಹಿಸುವ ಕೆಲಸ ಮಾಡಬೇಕು’ ಎಂದು ಆಗ್ರಹಿಸಿದರು.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ