ಕೆನಡಾದಲ್ಲಿ ಭಾರತೀಯ ಮಹಿಳೆ ಕೊಲೆ: 7 ತಿಂಗಳ ಬಳಿಕ ಆರೋಪಿ ಬಂಧನ

ಕೆನಡಾದಲ್ಲಿ ಭಾರತೀಯ ಮಹಿಳೆ ಕೊಲೆ: 7 ತಿಂಗಳ ಬಳಿಕ ಆರೋಪಿ ಬಂಧನ

ಕೆನಡಾದಲ್ಲಿ ಭಾರತೀಯ ಮಹಿಳೆ ಕೊಲೆ: 7 ತಿಂಗಳ ಬಳಿಕ ಆರೋಪಿ ಬಂಧನ

ನವದೆಹಲಿ: ಕೆನಡಾದ ಟೊರೊಂಟೊದಲ್ಲಿ ಭಾರತೀಯ ಮೂಲದ ಮಹಿಳೆ ಕೊಲೆಯಾದ ಏಳು ತಿಂಗಳ ಬಳಿಕ, ಆಕೆಯ ಗೆಳೆಯನನ್ನು ಪೊಲೀಸರು ಬಂಧಿಸಿದ್ದಾರೆ.

ಕೊಲೆಯಾದ ಮಹಿಳೆಯನ್ನು 30 ವರ್ಷದ ಹಿಮಾನ್ಶಿ ಖುರಾನಾ ಎಂದು ಗುರುತಿಸಲಾಗಿತ್ತು. ಟೊರೊಂಟೊದ ಮನೆಯೊಂದರಲ್ಲಿ ಹಿಮಾನ್ಶಿ ಮೃತರಾಗಿ ಪತ್ತೆಯಾಗಿದ್ದರು. 2025ರ ಡಿಸೆಂಬರ್ 20 ರಂದು ಈ ಘಟನೆ ನಡೆದಿತ್ತು. 

ಈ ಪ್ರಕರಣದ ಆರೋಪಿಯಾಗಿದ್ದ ಹಿಮಾನ್ಶಿ ಗೆಳೆಯ ಅಬ್ದುಲ್ ಗಫೂರಿ (32)ಯನ್ನು ಟೊರೊಂಟೊ ವಿಮಾನ ನಿಲ್ದಾಣದಲ್ಲಿ ಕೆನಡಾ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.

ಆತ ಯಾವ ದೇಶದಲ್ಲಿದ್ದ ಎಂಬುದನ್ನು ನಿರ್ದಿಷ್ಟವಾಗಿ ತಿಳಿಸದ ಪೊಲೀಸರು ಅಂತರರಾಷ್ಟ್ರೀಯ ಪೊಲೀಸ್ ಸೇವೆಗಳೊಂದಿಗೆ ಸಮನ್ವಯ ಸಾಧಿಸಿ ಗಫೂರಿಯನ್ನು ಕೆನಡಾಕ್ಕೆ ಕರೆತರಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಹಿಮಾನ್ಶಿ ಖುರಾನಾ ಮತ್ತು ಅಬ್ದುಲ್ ಗಫೂರಿ ಮೂರು ವರ್ಷಗಳಿಂದ ಸಹ ಜೀವನ ನಡೆಸುತ್ತಿದ್ದರು. ಹಿಮಾನ್ಶಿ ಕೊಲೆಯಾದ ಬಳಿಕ ಅಬ್ದುಲ್ ಗಫೂರಿ ನಾಪತ್ತೆಯಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. 

ಗಫೂರಿ ಬಂಧನಕ್ಕಾಗಿ ದೇಶವ್ಯಾಪಿ ವಾರೆಂಟ್ ಹೊರಡಿಸಿದ್ದ ಪೊಲೀಸರು, ಆತನ ಫೋಟೊವನ್ನು ಬಿಡುಗಡೆ ಮಾಡಿ ಮಾಹಿತಿ ನೀಡುವಂತೆ ಜನರಿಗೆ ಮನವಿ ಮಾಡಿದ್ದರು.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ