
52ನೇ ಜೂನಿಯರ್ ರಾಷ್ಟ್ರೀಯ ಈಜು ಚಾಂಪಿಯನ್‌ಷಿಪ್‌ನಲ್ಲಿ ಕರ್ನಾಟಕ ಪ್ರಾಬಲ್ಯ
ಬೆಂಗಳೂರು: ಕರ್ನಾಟಕದ ಈಜುಪಟು ಗಳು ಭುವನೇಶ್ವರದಲ್ಲಿ ಮಂಗಳವಾರ ಆರಂಭವಾದ 52ನೇ ಜೂನಿಯರ್ ರಾಷ್ಟ್ರೀಯ ಈಜು ಚಾಂಪಿಯನ್‌ಷಿಪ್‌ನ ಮೊದಲ ದಿನ ಪ್ರಾಬಲ್ಯ ಮೆರೆದರು. ಏಳು ಚಿನ್ನ ಸೇರಿದಂತೆ 16 ಪದಕಗಳಿಗೆ ಕೊರಳೊಡ್ಡಿದರು.
ರಾಜ್ಯದ ಶ್ರೀಚರಣಿ ತುಮು ಅವರು ಅವಳಿ ಚಿನ್ನದ ಪದಕಗಳ ಸಾಧನೆ ಮಾಡಿದರು. ಬಾಲಕಿಯರ 200 ಮೀಟರ್ ಫ್ರೀಸ್ಟೈಲ್ (ಗುಂಪು 1ಎ) ಮತ್ತು 1500 ಮೀ. ಫ್ರೀಸ್ಟೈಲ್‌ನಲ್ಲಿ ಅವರು ಮಿಂಚು ಹರಿಸಿದರು.
200 ಮೀ. ಫ್ರೀಸ್ಟೈಲ್ (ಗುಂಪು 1ಬಿ) ಸ್ಪರ್ಧೆಯಲ್ಲಿ ಚಿನ್ನ ಒಲಿಂಪಿಯನ್ ದಿನಿಧಿ ದೇಸಿಂಗು ಪಾಲಾಯಿತು. 50 ಮೀ. ಬಟರ್‌ಫ್ಲೈ (ಗುಂಪು 1ಬಿ) ಸ್ಪರ್ಧೆಯಲ್ಲಿ ತನಿಶಿ ಗುಪ್ತಾ ಸ್ವರ್ಣ ಪದಕಕ್ಕೆ ಕೊರಳೊಡ್ಡಿದರು.
ಫಲಿತಾಂಶ (ಕರ್ನಾಟಕದವರು ಮಾತ್ರ): ಬಾಲಕರು: ಗುಂಪು 1ಎ: 200 ಮೀ. ಫ್ರೀಸ್ಟೈಲ್: ಮೋನಿಷ್ ಪಿ.ವಿ. (ಕಾಲ: 1:52.70)–1; 100 ಮೀ. ಬ್ರೆಸ್ಟ್‌ಸ್ಟ್ರೋಕ್: ವಿಶಾಖನ್ ಸರವಣನ್ (1:06.39)–2, ಡೇನಿಯಲ್ ಪಾಲ್ ಜೆ. (1:06.89)–3.
ಗುಂಪು 1ಬಿ: 200 ಮೀ. ಫ್ರೀಸ್ಟೈಲ್: ಶರಣ್ ಎಸ್. (1:54.19)–1; 100 ಮೀ. ಬ್ರೆಸ್ಟ್‌ಸ್ಟ್ರೋಕ್: ಯಶ್ ಎಚ್.ಪಾಲ್ (1:06.14)–2; 4x100 ಫ್ರೀಸ್ಟೈಲ್ ರಿಲೆ: ಕರ್ನಾಟಕ (3:37.77) (ಸಮರ್ಥ್ ಗೌಡ ಬಿ.ಎಸ್, ಧ್ರುಪದ್ ರಾಮಕೃಷ್ಣ, ವೇದಾಂತ್ ಮೆಹ್ರಾ, ಶರಣ್ ಶ್ರೀಧರ)–1
ಬಾಲಕಿಯರು: ಗುಂಪು 1ಎ: 200 ಮೀ. ಫ್ರೀಸ್ಟೈಲ್: ಶ್ರೀಚರಣಿ ತುಮು (2:07.14)–1, ವಿಹಿತಾ ನಯನಾ ಲೋಕನಾಥನ್ (2:12.09)–2; 50 ಮೀ. ಬಟರ್‌ಫ್ಲೈ: ಮಾನವಿ ವರ್ಮಾ (28.67)–2; 100 ಮೀ. ಬ್ರೆಸ್ಟ್‌ಸ್ಟ್ರೋಕ್: ಮಾನವಿ ವರ್ಮಾ (1:16.18)– 3; 1500 ಮೀ. ಫ್ರೀಸ್ಟೈಲ್: ಶ್ರೀಚರಣಿ ತುಮು (17:45.76)–1, ಆಸ್ರಾ ಸುಧೀರ್ (19:39.40)–3
ಗುಂಪು 1ಬಿ: 200 ಮೀ. ಫ್ರೀಸ್ಟೈಲ್: ದಿನಿಧಿ ದೇಸಿಂಗು (2:03.26)–1; 50 ಮೀ. ಬಟರ್‌ಫ್ಲೈ: ತನಿಶಿ ಗುಪ್ತಾ (27.41)–1, ಚರಿತಾ ಫಣೀಂದ್ರನಾಥ್ (27.72)–2; 4x200 ಮೀ. ಫ್ರೀಸ್ಟೈಲ್ ರಿಲೆ: (8:46.32) (ತಿಸ್ಯಾ ಸೋನಾರ್, ಅದಿತಿ ವಿನಾಯಕ್, ಮಿಹಿಕಾ ದತ್ತಾ, ದಿನಿಧಿ ದೇಸಿಂಗು)–2.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260819-44-1548702096