19 ಆಗಸ್ಟ್ 2026: ಈ ದಿನದ ಪ್ರಮುಖ 10 ಸುದ್ದಿಗಳು...

19 ಆಗಸ್ಟ್ 2026: ಈ ದಿನದ ಪ್ರಮುಖ 10 ಸುದ್ದಿಗಳು...

19 ಆಗಸ್ಟ್ 2026: ಈ ದಿನದ ಪ್ರಮುಖ 10 ಸುದ್ದಿಗಳು...

ದೇಶ, ವಿದೇಶ, ಕ್ರೀಡೆ, ವಾಣಿಜ್ಯ ಸೇರಿದಂತೆ ವಿವಿಧ ಕ್ಷೇತ್ರಗಳಿಗೆ ಸಂಬಂಧಿಸಿದ ಪ್ರಮುಖ ಸುದ್ದಿಗಳು ಇಲ್ಲಿವೆ....

ಕೋಲ್ಕತ್ತ| ಹೋಟೆಲ್‌ನಲ್ಲಿ ಭಾರಿ ಅಗ್ನಿ ಅವಘಡ: ಕನಿಷ್ಠ ಒಂಬತ್ತು ಮಂದಿ ಸಾವು

ಕೇಂದ್ರ ಕೋಲ್ಕತ್ತದ ಮಿರ್ಜಾ ಗಾಲಿಬ್ ಬೀದಿಯಲ್ಲಿರುವ ಹೋಟೆಲ್ ಒಂದರಲ್ಲಿ ಬುಧವಾರ(ಆ.19) ನಸುಕಿನಲ್ಲಿ ಸಂಭವಿಸಿದ ಅಗ್ನಿ ಅವಘಡದಲ್ಲಿ ಕನಿಷ್ಠ ಒಂಬತ್ತು ಮಂದಿ ಮೃತಪಟ್ಟಿದ್ದು, ಆರು ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಇರಾನ್ ಜೊತೆಗಿನ ಎಲ್ಲ ವ್ಯಾಪಾರ, ಆರ್ಥಿಕ ವಹಿವಾಟು ಸ್ಥಗಿತಗೊಳಿಸಿದ ಯುಎಇ

ಪಶ್ಚಿಮ ಏಷ್ಯಾದಲ್ಲಿ ಉದ್ಭವಿಸಿರುವ ಪ್ರಾದೇಶಿಕ ಉದ್ವಿಗ್ನತೆಯ ಹಿನ್ನೆಲೆಯಲ್ಲಿ ಇರಾನ್ ಜತೆಗಿನ ಎಲ್ಲ ಆರ್ಥಿಕ ಹಾಗೂ ವ್ಯಾಪಾರ ವಹಿವಾಟುಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ಸ್ಧಗಿತಗೊಳಿಸುವುದಾಗಿ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಘೋಷಿಸಿದೆ.

ಎಸ್‌ಐಆರ್: ಬೆಂಗಳೂರಿನ ಬಿಜೆಪಿಗರ ಕ್ಷೇತ್ರಗಳ 27 ಲಕ್ಷ ಮತ ಹೊರಕ್ಕೆ

ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್‌) ಭಾಗವಾಗಿ ಬೆಂಗಳೂರಿನ 28 ವಿಧಾನಸಭಾ ಕ್ಷೇತ್ರಗಳಲ್ಲಿ ಎಎಸ್‌ಡಿಡಿಒ ಪಟ್ಟಿಗೆ ಸೇರಿಸಲಾಗಿರುವ 46.88 ಲಕ್ಷ ಮತದಾರರ ಪೈಕಿ, 27.69 ಲಕ್ಷ ಮತದಾರರು ಬಿಜೆಪಿ ಶಾಸಕರ ಕ್ಷೇತ್ರದವರಾಗಿದ್ದಾರೆ.

ಆಳ–ಅಗಲ: ಪಿಎಸ್‌ಸಿ ಸುಧಾರಣೆ; ದೇಶದಾದ್ಯಂತ ಹೆಚ್ಚಿದ ಕಿಚ್ಚು

ಕರ್ನಾಟಕದಲ್ಲಿ ಕೆಪಿಎಸ್‌ಸಿ ಅವ್ಯವಹಾರಗಳಿಗೆ ಸಂಬಂಧಿಸಿದಂತೆ ಹಲವು ರೀತಿಯ ಬೆಳವಣಿಗೆಗಳು ನಡೆಯುತ್ತಿವೆ. ಇದೇ ವೇಳೆ, ಜಾರ್ಖಂಡ್ ಸರ್ಕಾರವು ರಾಜ್ಯ ಲೋಕಸೇವಾ ಆಯೋಗ ಮತ್ತು ಸಿಬ್ಬಂದಿ ನೇಮಕಾತಿ ಆಯೋಗ ನಡೆಸಿದ ಪರೀಕ್ಷೆಗಳನ್ನು ರದ್ದುಪಡಿಸುವುದಾಗಿ ಘೋಷಿಸಿದೆ.

ಸಂಪಾದಕೀಯ | ಹನೂರು: ಮೂವರ ಎನ್‌ಕೌಂಟರ್‌, ತನಿಖೆಯೇ ಜವಾಬ್ದಾರಿಯುತ ನಡೆ

ಕಾವೇರಿ ವನ್ಯಜೀವಿಧಾಮದ ವ್ಯಾಪ್ತಿಯಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಮೂವರು ಸಾವಿಗೀಡಾಗಿರುವ ಘಟನೆಯನ್ನು ಕಾನೂನಿನ ಮೂಲಕ ನಿರ್ವಹಿಸಬೇಕೇ ಹೊರತು, ಭಾವುಕ ರಾಜಕಾರಣದ ಮೂಲಕ ಅಲ್ಲ.

ಒಪ್ಪಂದಕ್ಕೆ ಇರಾನ್ ಸಿದ್ಧವಾಗುವವರೆಗೂ ಮಾತುಕತೆ ಇಲ್ಲ: ಟ್ರಂಪ್ ಸೂಚನೆ

ಇರಾನ್ ಒಪ್ಪಂದ ಮಾಡಿಕೊಳ್ಳಲು ಸಿದ್ಧವಾಗುವವರೆಗೂ ಮಾತುಕತೆಯನ್ನು ನಡೆಸದಂತೆ ತಮ್ಮ ಸಂಧಾನಕಾರರ ತಂಡಕ್ಕೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೂಚಿಸಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ. 

ಗೋಡ್ಸೆ RSS ಕಾರ್ಯಕರ್ತ ಎಂದ ಸಾವರ್ಕರ್ ಮೊಮ್ಮಗ: ಸ್ಪಷ್ಟನೆ ಕೋರಿದ ಕಾಂಗ್ರೆಸ್

ಮುಂಬೈ: ಮಹಾತ್ಮ ಗಾಂಧಿಯನ್ನು ಹತ್ಯೆ ಮಾಡಿದ ನಾಥೂರಾಮ್‌ ಗೋಡ್ಸೆ ಅವರು ರಾಷ್ಟ್ರೀಯ ಸ್ವಯಂ ಸೇವಕ ಸಂಘದ(ಆರ್‌ಎಸ್‌ಎಸ್‌) ಸದಸ್ಯರಾಗಿದ್ದರು ಎಂದು ವಿ.ಡಿ. ಸಾವರ್ಕರ್ ಮೊಮ್ಮಗ ಸತ್ಯಕಿ ಸಾವರ್ಕರ್‌ ಹೇಳಿದ್ದಾರೆ.

ಪಿಎಂ-ಕೇರ್ಸ್‌: 2024-25ರಲ್ಲಿ ₹1,162.92 ಕೋಟಿ ದೇಣಿಗೆ; ₹16.47 ಕೋಟಿ ಖರ್ಚು

ವಿವಾದಾತ್ಮಕ ʼಪಿಎಂ-ಕೇರ್ಸ್‌ ನಿಧಿʼಯು 2023-24 ಮತ್ತು 2024-25ರಲ್ಲಿ ದೇಣಿಗೆಯಾಗಿ ₹1,162.92 ಕೋಟಿ ಸಂಗ್ರಹಿಸಿದೆ. ಆದರೆ, ಈ ಅವಧಿಯಲ್ಲಿ ಕೇವಲ ₹16.47 ಕೋಟಿ ಖರ್ಚು ಮಾಡಿದೆ ಎಂದು ಲೆಕ್ಕಪರಿಶೋಧನಾ ವರದಿಗಳು ತಿಳಿಸಿವೆ.

ಕೆಪಿಎಸ್‌ಸಿಯಲ್ಲಿ ಅಕ್ರಮ ಆರೋಪ; ಸಾಹುಕಾರ ‘ಗ್ಯಾಂಗ್’ಗೆ ಇ.ಡಿ ಕುಣಿಕೆ

ಕರ್ನಾಟಕ ಲೋಕಸೇವಾ ಆಯೋಗದ ನೇಮಕಾತಿ ಅಕ್ರಮ ಪ್ರಕರಣದ ಬೆನ್ನುಬಿದ್ದಿರುವ ಜಾರಿ ನಿರ್ದೇಶನಾಲಯವು (ಇ.ಡಿ), ಆಯೋಗದ ಹಿಂದಿನ ಅಧ್ಯಕ್ಷ  ಶಿವಶಂಕರಪ್ಪ ಎಸ್‌.  ಸಾಹುಕಾರ ಮತ್ತು ಮಾಜಿ ಸದಸ್ಯರನ್ನು ತಮ್ಮ ತನಿಖಾ ಕುಣಿಕೆಗೆ ಸಿಲುಕಿಸಿದೆ.

ರದ್ದುಗೊಳಿಸಿದ 44 ನೇಮಕ ಪರೀಕ್ಷೆಗಳ ಪಟ್ಟಿ ಬಿಡುಗಡೆ ಮಾಡಿದ ಜಾರ್ಖಂಡ್ ಸರ್ಕಾರ

ರಾಂಚಿ: ಪರೀಕ್ಷಾ ಅಕ್ರಮಗಳನ್ನು ವಿರೋಧಿಸಿ ವಿದ್ಯಾರ್ಥಿಗಳು ನಡೆಸುತ್ತಿರುವ ತೀವ್ರ ಪ್ರತಿಭಟನೆಯ ಬೆನ್ನಲ್ಲೇ, ಜಾರ್ಖಂಡ್ ಸರ್ಕಾರವು ಪರೀಕ್ಷಾ ಅಕ್ರಮದ ಆರೋಪಕ್ಕೆ ಒಳಗಾಗಿದ್ದ ಒಟ್ಟು 44 ನೇಮಕ ಪರೀಕ್ಷೆಗಳನ್ನು ರದ್ದುಗೊಳಿಸಿ ಮಂಗಳವಾರ ರಾತ್ರಿ ಅಧಿಕೃತ ಆದೇಶ ಬಿಡುಗಡೆ ಮಾಡಿದೆ. 

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ