ಶಿಕ್ಷಕರ ನೇಮಕ: ಪದೇ ಪದೇ ಕೇಳುವ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ..

ಶಿಕ್ಷಕರ ನೇಮಕ: ಪದೇ ಪದೇ ಕೇಳುವ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ..

ಶಿಕ್ಷಕರ ನೇಮಕ: ಪದೇ ಪದೇ ಕೇಳುವ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ..

ರಾಜ್ಯ ಸರ್ಕಾರದ ಶಾಲಾ ಶಿಕ್ಷಣ ಇಲಾಖೆಯು 2026-27ನೇ ಸಾಲಿನ ವಿವಿಧ ಶಿಕ್ಷಕರ ಹುದ್ದೆಗಳ ನೇಮಕ ಪ್ರಕ್ರಿಯೆ ಪ್ರಾರಂಭಿಸಿದೆ. ಈ ನಡುವೆ ಅಭ್ಯರ್ಥಿಗಳಲ್ಲಿ ಮೂಡಬಹುದಾದ ಸಾಮಾನ್ಯ ಸಂಶಯಗಳನ್ನು ಪರಿಹರಿಸಲು 'ಪದೇ ಪದೇ ಕೇಳಲಾಗುವ ಪ್ರಶ್ನೆಗಳು' (FAQ) ಮತ್ತು ಅವುಗಳಿಗೆ ಸಂಬಂಧಿಸಿದ ಉತ್ತರಗಳನ್ನು ಕೇಂದ್ರೀಕೃತ ದಾಖಲಾತಿ ಘಟಕ ಬಿಡುಗಡೆ ಮಾಡಿದೆ.

ಅರ್ಜಿ ಸಲ್ಲಿಸಲು ಪ್ರಮುಖ ದಿನಾಂಕಗಳು:

ಆನ್‌ಲೈನ್ ಅರ್ಜಿ ಸಲ್ಲಿಕೆ ಪ್ರಾರಂಭ: ಆಗಸ್ಟ್ 18

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಸೆಪ್ಟೆಂಬರ್ 15

ಅಪ್‌ಲೋಡ್ ಮಾಡಬೇಕಾದ ದಾಖಲೆಗಳು:

ಜಾತಿ ಮತ್ತು ಆದಾಯ ಪ್ರಮಾಣ ಪತ್ರ ನಾನ್‌ಕ್ರಮೀ ಲೇಯರ್, 371ಜೆ ಮೀಸಲಾತಿ ಪ್ರಮಾಣ ಪತ್ರ ಹೊರತುಪಡಿಸಿ, ಉಳಿದಂತೆ ಸಮತಲ ಮಿಸಲಾತಿಗೆ ಸಂಬಂಧಿಸಿದ ಎಲ್ಲಾ ಪ್ರಮಾಣ ಪತ್ರಗಳನ್ನು ಅಪ್ಲೋಡ್ ಮಾಡಬೇಕು.

ಜಾತಿ ಮತ್ತು ಆದಾಯ ಪ್ರಮಾಣ ಪತ್ರದ ನಿಯಮಗಳು

ವ್ಯಾಸಂಗಕ್ಕಾಗಿ ನೀಡಿದ ಪ್ರಮಾಣ ಪತ್ರ:

ನಿಮ್ಮ ಜಾತಿ ಮತ್ತು ಆದಾಯ ಪ್ರಮಾಣ ಪತ್ರದಲ್ಲಿ 'ವ್ಯಾಸಂಗಕ್ಕಾಗಿ' ಎಂದು ನಮೂದಿಸಿದ್ದರೆ, ಅದನ್ನು ನೇಮಕಾತಿಗೆ ಪರಿಗಣಿಸಲಾಗುವುದಿಲ್ಲ. ಅಭ್ಯರ್ಥಿಗಳು 'ಉದ್ಯೋಗಕ್ಕಾಗಿ' ಎಂದು ನಮೂದಿಸಿದ ಪ್ರಮಾಣ ಪತ್ರ ಅಥವಾ ಸಿಂಧುತ್ವ ಪ್ರಮಾಣ ಪತ್ರವನ್ನು ಸಲ್ಲಿಸುವುದು ಕಡ್ಡಾಯವಾಗಿದೆ.

ಸಾಮಾನ್ಯ ವರ್ಗಕ್ಕೆ (GM) ಆಯ್ಕೆಯಾದರೆ: ಮೀಸಲಾತಿ ಕೋರಿ ಅರ್ಜಿ ಸಲ್ಲಿಸಿ, ಅಂತಿಮವಾಗಿ ಸಾಮಾನ್ಯ ವರ್ಗದಲ್ಲಿ (GM) ಆಯ್ಕೆಯಾದರೂ ಸಹ, ಅರ್ಜಿಯಲ್ಲಿ ನಮೂದಿಸಿದ ಜಾತಿ ಮತ್ತು ಆದಾಯ ಪ್ರಮಾಣ ಪತ್ರವನ್ನು ಕಡ್ಡಾಯವಾಗಿ ಸಲ್ಲಿಸಬೇಕು. ಒಂದು ವೇಳೆ ಈ ಪ್ರಮಾಣ ಪತ್ರಗಳು ಅಸಿಂಧುವಾದರೆ, ಉತ್ತಮ ಮೆರಿಟ್ ಇದ್ದರೂ ನೇಮಕಾತಿ ರದ್ದಾಗುತ್ತದೆ.

ಕಲ್ಯಾಣ ಕರ್ನಾಟಕ (371ಜೆ) ಮೀಸಲಾತಿ

ಕಲ್ಯಾಣ ಕರ್ನಾಟಕ ಭಾಗದ ಅಭ್ಯರ್ಥಿಗಳು ಸಕ್ಷಮ ಪ್ರಾಧಿಕಾರದಿಂದ ಪಡೆದ RD ನಂಬರ್ ಹೊಂದಿರುವ 371ಜೆ ಮೀಸಲಾತಿ ಪ್ರಮಾಣ ಪತ್ರವನ್ನು ಸಲ್ಲಿಸುವುದು ಕಡ್ಡಾಯ.

ವಿವಾಹಿತ ಮಹಿಳೆಯರು: ಕಲ್ಯಾಣ ಕರ್ನಾಟಕ ಭಾಗದ ನಿವಾಸಿಯಾಗಿದ್ದು, ನಾನ್-ಎಚ್‌ಕೆ (Non-HK) ಜಿಲ್ಲೆಯ ವ್ಯಕ್ತಿಯನ್ನು ವಿವಾಹವಾಗಿದ್ದರೂ ಸಹ ಸಕ್ಷಮ ಪ್ರಾಧಿಕಾರದಿಂದ ಪಡೆದ 371ಜೆ ಮೀಸಲಾತಿ ಪ್ರಮಾಣ ಪತ್ರವನ್ನು ಸಲ್ಲಿಸಿ ಮೀಸಲಾತಿ ಪಡೆಯಬಹುದು.

ಅರ್ಜಿ ಸಲ್ಲಿಸುವ ವ್ಯಾಪ್ತಿ: ಕಲ್ಯಾಣ ಕರ್ನಾಟಕ ಭಾಗದ (KK) ಅಭ್ಯರ್ಥಿಗಳು ರಾಜ್ಯದ ಉಳಿದ 26 ಜಿಲ್ಲೆಗಳ (RPC) ಹುದ್ದೆಗಳಿಗೂ ಅರ್ಜಿ ಸಲ್ಲಿಸಬಹುದು. ಆದರೆ, Non-KK ಅಭ್ಯರ್ಥಿಗಳು ಕಲ್ಯಾಣ ಕರ್ನಾಟಕದ ಮಿಕ್ಕುಳಿದ ವೃಂದದ ಶೇ.20 ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅವಕಾಶವಿರುವುದಿಲ್ಲ (ಕೆಲವು ವಿನಾಯಿತಿಗಳನ್ನು ಹೊರತುಪಡಿಸಿ).

ಗ್ರಾಮೀಣ ಮೀಸಲಾತಿ ಮತ್ತು ಕೆನೆಪದರ ನೀತಿ

ಕೆನೆ ಪದರ ನೀತಿ (Creamy Layer policy): ಸಾಮಾನ್ಯ ವರ್ಗದ (GM) ಅಭ್ಯರ್ಥಿಗಳು ಗ್ರಾಮೀಣ ಮೀಸಲಾತಿ ಕೋರಲು ಅವರ ಕುಟುಂಬದ ವಾರ್ಷಿಕ ಆದಾಯ ₹8 ಲಕ್ಷಕ್ಕಿಂತ ಕಡಿಮೆ ಇರಬೇಕು. ಅದಕ್ಕಿಂತ ಹೆಚ್ಚಿದ್ದರೆ ಗ್ರಾಮೀಣ ಮೀಸಲಾತಿ ಸಿಗುವುದಿಲ್ಲ.

ಹಿಂದುಳಿದ ವರ್ಗಗಳು: 2A, 2B, 3A, 3B ವರ್ಗದ ಅಭ್ಯರ್ಥಿಗಳಿಗೂ ಗ್ರಾಮೀಣ ಮೀಸಲಾತಿಗೆ ಕೆನೆ ಪದರ ನೀತಿ ಅನ್ವಯಿಸುತ್ತದೆ. ಆದಾಯ ಮಿತಿ ಮೀರಿದಲ್ಲಿ ಗ್ರಾಮೀಣ ಮೀಸಲಾತಿ ಪಡೆಯಲು ಸಾಧ್ಯವಾಗುವುದಿಲ್ಲ.

ಪರಿಶಿಷ್ಟ ಜಾತಿ/ಪಂಗಡ: ಎಸ್‌ಸಿ/ ಎಸ್‌ಟಿ ಮತ್ತು ಪ್ರವರ್ಗ-1ರ ಅಭ್ಯರ್ಥಿಗಳಿಗೆ ಆದಾಯದ ಮಿತಿ ಇಲ್ಲದಿರುವುದರಿಂದ ಗ್ರಾಮೀಣ ಮೀಸಲಾತಿ ಕೋರಿದ ಅಭ್ಯರ್ಥಿಗಳಿಗೆ ಕೆನೆಪದರ ನೀತಿ ಅನ್ವಯಿಸುವುದಿಲ್ಲ.

ಶೈಕ್ಷಣಿಕ ಅರ್ಹತೆ ಮತ್ತು TET/CTET

ಪ್ರಾಥಮಿಕ ಶಾಲಾ ಶಿಕ್ಷಕರು (1 ರಿಂದ 5ನೇ ತರಗತಿ): TET ಪತ್ರಿಕೆ-1 ಕಡ್ಡಾಯ.

ಪದವೀಧರ ಪ್ರಾಥಮಿಕ ಶಿಕ್ಷಕರು (6 ರಿಂದ 8ನೇ ತರಗತಿ): TET ಪತ್ರಿಕೆ-2 ಕಡ್ಡಾಯ.

ಅಂಕಗಳ ಪ್ರಮಾಣ: ಸಾಮಾನ್ಯ ವರ್ಗದ ಅಭ್ಯರ್ಥಿಗಳು TET/CTET ಪರೀಕ್ಷೆಯಲ್ಲಿ ಕನಿಷ್ಠ ಶೇ.60 ರಷ್ಟು ಅಂಕಗಳನ್ನು ಮತ್ತು SC/ST/C-I/PH ಅಭ್ಯರ್ಥಿಗಳು ಕನಿಷ್ಠ ಶೇ.55 ರಷ್ಟು ಅಂಕಗಳನ್ನು ಗಳಿಸಿರಬೇಕು.

ಪ್ರಾಥಮಿಕ ಶಾಲಾ PET-Grade-II (1 ರಿಂದ 8ನೇ ತರಗತಿ) ಮತ್ತು ಪ್ರೌಢಶಾಲಾ ದೈಹಿಕ ಶಿಕ್ಷಣ ಶಿಕ್ಷಕ ಹುದ್ದೆಗಳಿಗೆ TET/CTET ಅಗತ್ಯವಿರುವುದಿಲ್ಲ.

ಪ್ರಾಥಮಿಕ ಶಾಲಾ ಶಿಕ್ಷಕ (PST), ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕ (GPT ಮತ್ತು ಪ್ರೌಢಶಾಲಾ ಸಹಶಿಕ್ಷಕ (AM) ಈ ಮೂರೂ ವೃಂದಗಳಿಗೆ ವಿದ್ಯಾರ್ಹತೆಯನ್ನು ಹೊಂದಿರುವ ಅಭ್ಯರ್ಥಿಯು ತಾನು ಇಚ್ಚಿಸಿದಂತೆ ಬೇರೆ ಬೇರೆ ವಂದಕ್ಕೆ, ಬೇರೆ ಬೇರೆ ಜಿಲ್ಲೆಯಲ್ಲಿ ಅರ್ಜಿ ಸಲ್ಲಿಸಬಹುದು. ಆದರೆ ಒಂದು ವೃಂದಕ್ಕೆ ಒಂದೇ ಜಿಲ್ಲೆಯನ್ನು ಆಯ್ಕೆ ಮಾಡಿಕೊಳ್ಳಬೇಕು.

ಇಂಗ್ಲಿಷ್ ಭಾಷೆಯ ಅಗತ್ಯತೆ

ಇಂಗ್ಲಿಷ್ ಭಾಷೆಯನ್ನು ಪದವಿಯಲ್ಲಿ ಒಂದು ಭಾಷೆಯನ್ನಾಗಿ ಅಧ್ಯಯನ ಮಾಡಿರಬೇಕು ಅಥವಾ ಎಸ್‌ಎಸ್‌ಎಲ್‌ಸಿಯಲ್ಲಿ ಆಂಗ್ಲಭಾಷೆಯನ್ನು ಪ್ರಥಮ ಅಥವಾ ದ್ವಿತೀಯ ಭಾಷೆಯನ್ನಾಗಿ ಅಧ್ಯಯನ ಮಾಡಿರಬೇಕು. ಯು.ಜಿ.ಸಿ ಮಾನ್ಯತೆ ಹೊಂದಿರುವ ವಿಶ್ವವಿದ್ಯಾಲಯದಿಂದ ಇಂಗ್ಲಿಷ್ ಭಾಷೆಯ ಡಿಪ್ಲೊಮಾ ಪದವಿಯನ್ನಾದರೂ ಪಡೆದಿರಬೇಕು.

  • ಸೇವಾನಿರತ ಅಭ್ಯರ್ಥಿಯು ಆಯ್ಕೆಯಾದಲ್ಲಿ ಪರಿಶೀಲನಾ ವೇಳೆಯಲ್ಲಿ ಸಕ್ರಮ ಪ್ರಾಧಿಕಾರದಿಂದ NOC ಪಡೆದು ಸಲ್ಲಿಸುವುದು ಕಡ್ಡಾಯ.

  • ಶಾಲಾ ಶಿಕ್ಷಣ ಇಲಾಖೆಯಲ್ಲಿ ಈಗಾಗಲೇ GPT ಶಿಕ್ಷಕಿಯಾಗಿ/ಶಿಕ್ಷಕನಾಗಿ ಕರ್ತವ್ಯ ನಿರ್ವಹಿಸುತ್ತಿದ್ದು, 2026ನೇ ಸಾಲಿನಲ್ಲಿ ಮತ್ತೊಮ್ಮೆ GPT ಹುದ್ದೆಗೆ ಅರ್ಜಿ ಸಲ್ಲಿಸಲು ಅವಕಾಶ ಇರುವುದಿಲ್ಲ.

  • ಶಾಲಾ ಶಿಕ್ಷಣ ಇಲಾಖೆಯಲ್ಲಿ GPT ಶಿಕ್ಷಕಿಯಾಗಿ/ಶಿಕ್ಷಕನಾಗಿ ಕರ್ತವ್ಯ ನಿರ್ವಹಿಸುತ್ತಿದ್ದರೆ, 2026ನೇ ಸಾಲಿನಲ್ಲಿ ಮತ್ತೊಮ್ಮೆ ಪ್ರೌಢಶಾಲಾ ಸಹಶಿಕ್ಷಕರ ಹುದ್ದೆಗೆ ಅರ್ಜಿ ಸಲ್ಲಿಸಲು ಅವಕಾಶವಿದೆ

  • ಅನುದಾನಿತ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವವರು ಸರ್ಕಾರಿ ಪ್ರೌಢಶಾಲಾ ಶಿಕ್ಷಕ ಹುದ್ದೆಗೆ ಅರ್ಜಿ ಸಲ್ಲಿಸಬಹುದು.

ಸೇವಾನಿರತ ಅಭ್ಯರ್ಥಿಯು ಆಯ್ಕೆಯಾದಲ್ಲಿ ಪರಿಶೀಲನಾ ವೇಳೆಯಲ್ಲಿ ಸಕ್ರಮ ಪ್ರಾಧಿಕಾರದಿಂದ NOC ಪಡೆದು ಸಲ್ಲಿಸುವುದು ಕಡ್ಡಾಯ.

ಶಾಲಾ ಶಿಕ್ಷಣ ಇಲಾಖೆಯಲ್ಲಿ ಈಗಾಗಲೇ GPT ಶಿಕ್ಷಕಿಯಾಗಿ/ಶಿಕ್ಷಕನಾಗಿ ಕರ್ತವ್ಯ ನಿರ್ವಹಿಸುತ್ತಿದ್ದು, 2026ನೇ ಸಾಲಿನಲ್ಲಿ ಮತ್ತೊಮ್ಮೆ GPT ಹುದ್ದೆಗೆ ಅರ್ಜಿ ಸಲ್ಲಿಸಲು ಅವಕಾಶ ಇರುವುದಿಲ್ಲ.

ಶಾಲಾ ಶಿಕ್ಷಣ ಇಲಾಖೆಯಲ್ಲಿ GPT ಶಿಕ್ಷಕಿಯಾಗಿ/ಶಿಕ್ಷಕನಾಗಿ ಕರ್ತವ್ಯ ನಿರ್ವಹಿಸುತ್ತಿದ್ದರೆ, 2026ನೇ ಸಾಲಿನಲ್ಲಿ ಮತ್ತೊಮ್ಮೆ ಪ್ರೌಢಶಾಲಾ ಸಹಶಿಕ್ಷಕರ ಹುದ್ದೆಗೆ ಅರ್ಜಿ ಸಲ್ಲಿಸಲು ಅವಕಾಶವಿದೆ

ಅನುದಾನಿತ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವವರು ಸರ್ಕಾರಿ ಪ್ರೌಢಶಾಲಾ ಶಿಕ್ಷಕ ಹುದ್ದೆಗೆ ಅರ್ಜಿ ಸಲ್ಲಿಸಬಹುದು.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ