
ತೆಂಕಪೇಟೆಯಲ್ಲಿ 126ನೇ ಭಜನಾ ಸಪ್ತಾಹ ಕಾರ್ಯಕ್ರಮ
ಉಡುಪಿ: ನಗರದ ತೆಂಕಪೇಟೆಯ ಲಕ್ಷ್ಮೀವೆಂಕಟೇಶ ದೇವಳದಲ್ಲಿ ಈಚೆಗೆ126ನೇ ಭಜನಾ ಸಪ್ತಾಹ ಕಾರ್ಯಕ್ರಮ ಜರುಗಿತು.
ವೇದಮೂರ್ತಿ ಬಿಳಗಿ ದಯಾಘನ ಭಟ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಆನುವಂಶೀಯ ಮೋಕ್ತೆಸರ ಯು. ನಾರಾಯಣ ಪ್ರಭು, ಯು.ಕೈಲಾಸನಾಥ ಶೆಣೈ, ಅಶೋಕ ಬಾಳಿಗಾ, ಯು.ದಿನೇಶ್ ಪೈ, ಮೊಕ್ತೇಸರ ಕೆ.ವಿನಾಯಕ ಶೆಣೈ, ಪ್ರಭಾಕರ ಭಟ್, ಯು.ವೆಂಕಟೇಶ ಭಟ್, ಎಚ್.ಮಹೇಶ ಶೆಣೈ, ಸುಭಾಶ್ ಕಾಮತ್, ವೈದಿಕರಾದ ಯು. ವಿನಾಯಕ ಅವಧಾನಿ, ರವೀಂದ್ರ ಭಟ್, ಲಕ್ಷ್ಮಿನಾರಾಯಣ ಭಟ್, ಕೆ. ದೀಪಕ್ ಭಟ್, ಯುವಕ ಮಂಡಳಿ, ಮಹಿಳಾ ಮಂಡಳಿ ಸದಸ್ಯರು ಪಾಲ್ಗೊಂಡಿದ್ದರು.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260821-28-1342997675