ಈ ಮಧ್ಯೆ ಜ್ಯೂಸನ್ನ ಕುಡಿದು ಸಿಪ್ಪೆಯನ್ನ ತಿಪ್ಪೆಗೆ ಹಾಕ್ತೀವಿ. ಕಸದಿಂದ ರಸ ಮಾಡಿ ಅನ್ನೋ ಮಾತಿದೆ. ಅಂದ್ರೆ ಕಸ ಅಂತ ಎಸೆಯೋದರಲ್ಲೂ ಒಂದಷ್ಟು ಉಪಯೋಗಗಳಿವೆ ಅನ್ನೋದು. ಅದರಂತೆ ಉಪಯೋಗವಿಲ್ಲ ಅಂತ ಎಸೆಯೋ ಕಲ್ಲಂಗಡಿ ಸಿಪ್ಪೆಯಲ್ಲೂ ಸಾಕಷ್ಟೂ ಪೋಷ್ಠಿಕಾಂಶ ಅಡಗಿದೆ.
ಕಲ್ಲಂಗಡಿ ಹಣ್ಣಿನಲ್ಲಿ ಸಾಕಷ್ಟು ನೀರಿನಂಶ ಇದೆ. ದೇಹದ ತಾಪಮಾನವನ್ನ ತಗ್ಗಿಸುತ್ತದೆ. ಆದ್ರೆ ಸಿಪ್ಪೆ ತಿನ್ಬೇಕು ಅಂದುಕೊಂಡ್ರು ಹೇಗಪ್ಪಾ ತಿನ್ನೋದು, ಆ ಸಿಪ್ಪೆ ಅಷ್ಟೊಂದು ದಪ್ಪ ಇರುತ್ತಲ್ಲ ಅನ್ನೋ ಚಿಂತೆ ಇರುತ್ತೆ. ಆದ್ರೆ ಅದರಿಂದ ಆಗೋ ಉಪಯೋಗ ಹೇಳಿದ್ರೆ ಖಂಡಿತ ಸಿಪ್ಪೆ ದಪ್ಪ ಆದ್ರೂ ತಿಂತೀರಾ.
ಕಲ್ಲಂಗಡಿ ಸಿಪ್ಪೆಗಳು ಕಡಿಮೆ ಕ್ಯಾಲೊರಿ ಹೊಂದಿರುತ್ತೆ. ಸಿಪ್ಪೆಯ ಪಲ್ಯ ತಯಾರಿಸಿ ಅದನ್ನು ತಿನ್ನುವುದರಿಂದ ಹೆಚ್ಚುತ್ತಿರುವ ತೂಕವನ್ನು ನಿಯಂತ್ರಿಸಬಹುದು.
• ಲೈಫ್ ಸ್ಟೈಲ್ ತುಂಬಾ ಬದಲಾಗಿರೋ ಕಾರಣ ಜೀವನದಲ್ಲಿ ನೆಮ್ಮದಿಗಿಂತ ಚಿಂತೆಯೇ ಹೆಚ್ಚು. ಒತ್ತಡ ನಡುವೆ ಜೀವನ ಸಾಗಿಸುವ ಜನರಿಗೆ ನಿದ್ರಾಹೀನತೆಯೂ ಅಷ್ಟೆ ಕ್ಲೋಸಾಗಿ ಕಾಡುತ್ತೆ. ಆ ನಿದ್ರಾಹೀನತೆಯಿಂದ ನೆಮ್ಮದಿ ಬೇಕಾಗಿದ್ರೆ ಕಲ್ಲಂಗಡಿ ಸಿಪ್ಪೆ ತಿನ್ನಬಹುದು.
• ಕಲ್ಲಂಗಡಿ ಸಿಪ್ಪೆಯನ್ನು ಪಲ್ಯ ಮಾಡಿ ಅಥವಾ ಮಿಕ್ಸಿಯಲ್ಲಿ ರುಬ್ಬಿ ಅದರ ರಸವನ್ನು ಕುಡಿಯಿರಿ. ಇದರಲ್ಲಿ ಮೆಗ್ನೀಸಿಯಮ್ ಅಧಿಕವಾಗಿರುತ್ತದೆ. ಮೆಗ್ನೀಸಿಯಮ್ ಚೆನ್ನಾಗಿ ನಿದ್ರೆ ಮಾಡಲು ಸಹಾಯ ಮಾಡುತ್ತದೆ.• ಅಧಿಕ ರಕ್ತದೊತ್ತಡ ಸಮಸ್ಯೆ ನಿವಾರಣೆಗೆ
ಕಲ್ಲಂಗಡಿ ಹೆಚ್ಚು ಫೈಬರ್ ಹೊಂದಿದ್ದು, ಇದು ಮಲಬದ್ಧತೆಯನ್ನು ತಡೆಯುವುದಲ್ಲದೆ, ಅಧಿಕ ರಕ್ತದೊತ್ತಡದ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ. ಹೊಟ್ಟೆಯ ಸಮಸ್ಯೆಯನ್ನು ತಪ್ಪಿಸಲು ಕಲ್ಲಂಗಡಿ ಮತ್ತು ಅದರ ಸಿಪ್ಪೆಗಳು ಪ್ರಯೋಜನಕಾರಿ.

