ಮೊದಲ ಬಾರಿಗೆ ಮಗು ಪರಿಚಯಿಸಿದ ಶ್ರೇಯಾ, ಹೆಸರನ್ನೂ ತಿಳಿಸಿದರು

ಮುಂಬೈ: ಖ್ಯಾತ ಹಿನ್ನೆಲೆ ಗಾಯಕಿ ಶ್ರೇಯಾ ಘೋಷಾಲ್ ಇತ್ತೀಚೆಗೆ ಗಂಡು ಮುಗುವಿಗೆ ಜನ್ಮ ನೀಡಿರುವುದು ತಿಳಿದ ವಿಚಾರ. ಇದೀಗ ಮೊದಲ ಬಾರಿಗೆ ತಮ್ಮ ಅಭಿಮಾನಿಗಳಿಗೆ ಮುದ್ದು ಮಗುವನ್ನು ತೋರಿಸಿದ್ದು, ‘ದೇವ್ಯಾನ್’ ಎಂದು ಪರಿಚಯಿಸಿದ್ದಾರೆ. ಅಲ್ಲದೆ ಕನಸಿನಂತೆ ಭಾಸವಾಗುತ್ತಿದೆ, ಬ್ಯೂಟಿಫುಲ್ ಗಿಫ್ಟ್ ಎಂದು ಹೇಳಿಕೊಂಡಿದ್ದಾರೆ.

ಪತಿ ಶಿಲಾದಿತ್ಯ ಹಾಗೂ ತಾವು ಮಗುವನ್ನು ಹಿಡಿದಿರುವ ಫೋಟೋವನ್ನು ಇನ್‍ಸ್ಟಾಗ್ರಾಮ್‍ನಲ್ಲಿ ಹಂಚಿಕೊಂಡಿದ್ದಾರೆ. ಆದರೆ ಚಿತ್ರದಲ್ಲಿ ಮಗುವಿನ ಮುಖವನ್ನು ಮಾತ್ರ ತೋರಿಸಲಾಗಿಲ್ಲ. ಈ ಕುರಿತು ಭಾವನಾತ್ಮಕ ಸಾಲುಗಳನ್ನು ಬರೆದಿರುವ ಶ್ರೇಯಾ, ‘ದೇವ್ಯಾನ್ ಮುಖ್ಯೋಪಾಧ್ಯಾಯ’ನನ್ನು ಪರಿಚಯಿಸುತ್ತಿದ್ದೇನೆ. ಇವನು ಮೇ 22ರಂದು ಜನಿಸಿದ್ದು, ನಮ್ಮ ಜೀವನವನ್ನು ಶಾಶ್ವತವಾಗಿ ಬದಲಾಯಿಸಿದ್ದಾನೆ ಎಂದು ಹೇಳಿದ್ದಾರೆ.

ಅವನು ಹುಟ್ಟಿದ ತಕ್ಷಣ ಮೊದಲ ನೋಟದಲ್ಲೇ ನಮ್ಮ ಹೃದಯವನ್ನು ಪ್ರೀತಿಯಿಂದ ತುಂಬಿದ. ತಂದೆ, ತಾಯಿ ಮಾತ್ರ ಇದನ್ನು ಅನುಭವಿಸಲು ಸಾಧ್ಯ. ಶುದ್ಧ, ನಿಯಂತ್ರಿಸಲಾಗದ ಅಗಾಧ ಪ್ರೀತಿ, ಇನ್ನೂ ನಮಗೆ ಕನಸಿನಂತೆ ಭಾಸವಾಗುತ್ತಿದೆ. ಈ ಸುಂದರವಾದ ಜೀವನದ ಉಡುಗೊರೆಗೆ ನಾನು ಹಾಗೂ ಶಿಲಾದಿತ್ಯ ಕೃತಜ್ಞರಾಗಿದ್ದೇವೆ ಎಂದು ಭಾವನಾತ್ಮಕವಾಗಿ ಬರೆದುಕೊಂಡಿದ್ದಾರೆ.

ಮೇ 22ರಂದು ಶ್ರೇಯಾ ಘೋಷಾಲ್ ಗಂಡು ಮಗುವಿಗೆ ಜನ್ಮ ನೀಡಿದ್ದು, ಈ ಕುರಿತು ಸಹ ಸಾಮಾಜಿಕ ಜಾಲತಾಣಗಳ ಮೂಲಕ ಅಭಿಮಾನಿಗಳಿಗೆ ತಿಳಿಸಿದ್ದರು. ದೇವರು ನಮಗೆ ಗಂಡು ಮಗುವನ್ನು ಆಶೀರ್ವದಿಸಿದ್ದಾನೆ. ಇಂತಹ ಭಾವನೆಯನ್ನು ಹಿಂದೆಂದೂ ಅನುಭವಿಸಿರಲಿಲ್ಲ. ನಮ್ಮ ಕುಟುಂಬಸ್ಥರೂ ಸೇರಿದಂತೆ ಶೀಲಾದಿತ್ಯ ಹಾಗೂ ನಾನು ತುಂಬಾ ಸಂತೋಷಗೊಂಡಿದ್ದೇವೆ. ಬೆಲೆ ಕಟ್ಟಲಾಗದ ನಿಮ್ಮ ಆಶೀರ್ವಾದಕ್ಕೆ ಧನ್ಯವಾದಗಳು ಎಂದು ಶ್ರೇಯಾ ಘೋಷಾಲ್ ಬರೆದುಕೊಂಡಿದ್ದರು. ಮಾರ್ಚ್ 4ರಂದು ಶ್ರೇಯಾ ಪ್ರೆಗ್ನೆನ್ಸಿ ಅನೌನ್ಸ್ ಮಾಡುವ ಮೂಲಕ ಸಿಹಿ ಸುದ್ದಿ ನೀಡಿದ್ದರು.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ