ಬೆಂಗಳೂರು: ಒಡಿಶಾದಿಂದ ಬೃಹತ್ ಪ್ರಮಾಣದಲ್ಲಿ ಅಕ್ರಮವಾಗಿ ಗಾಂಜಾ ರಾಜ್ಯಕ್ಕೆ ಹರಿದುಬರುತ್ತಿದೆ ಎಂದು ವರದಿಯಾಗಿದೆ. ಕೊಕೇನ್ ಸೇರಿದಂತೆ ಹಲವು ಮಾದಕ ದ್ರವ್ಯಗಳು ದುಬಾರಿಯಾಗಿದ್ದರೆ ಗಾಂಜಾ ಅಗ್ಗವಾಗಿದೆ.
ಒಡಿಶಾದಿಂದ ಪಾರ್ಸೆಲ್ ಗಳ ಮೂಲಕ ಬೆಂಗಳೂರಿಗೆ ತಲುಪುವ ಗಾಂಜಾ, ಆ ಬಳಿಕ ರಾಜ್ಯದ ಇತರ ಜಿಲ್ಲೆಗಳಿಗೆ ಕೂಡ ಪೂರೈಕೆಯಾಗುತ್ತಿದೆ.
ಮಂಗಳೂರಿನಲ್ಲಿ ಗಾಂಜಾ ಪ್ರಕರಣಕ್ಕೆ ಸಂಬಂಧಿಸಿದಂತೆ ಬೀದರ್ ಮೂಲದ ವೈದ್ಯಕೀಯ ವಿದ್ಯಾರ್ಥಿ ಸೇರಿದಂತೆ ಎಂಟು ಮಂದಿಯನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ.
ಮಂಗಳೂರಿನಿಂದ ಗಾಂಜಾ ಹತ್ತಿರದ ಕಾಸರಗೋಡಿಗೆ ಪೂರೈಕೆಯಾಗುತ್ತಿದೆ. ಲಾಕ್ ಡೌನ್ ನಿಂದ ಕೆಲಸ ಕಳೆದುಕೊಂಡಿರುವ ಕೆಲವು ಯುವಕರು ಕೂಡ ದಿಢೀರ್ ಹಣ ಸಂಪಾದಿಸಲು ಈ ಅಡ್ಡ ದಾರಿ ಹಿಡಿದಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
