ಹೊಂಗೆ ಮರ ಎಂದಾಕ್ಷಣಾ ಅದರಿಂದ ಹೊರ ಸೂಸುವ ತಣ್ಣನೆಯ ಗಾಳಿ ನೆನಪಾಗುತ್ತದೆ. ಹಳ್ಳಿಗಳಲ್ಲಿ ಬಿರು ಬೇಸಿಗೆ ಶುರುವಾದ್ರೆ ಹೊಂಗೆ ಮರದ ನೆರಳಲ್ಲಿ ಕೂತು ಆ ಬೇಸಿಗೆಯನ್ನೇ ಮರೆಯುವಷ್ಟು ತಣ್ಣನೆಯ ಗಾಳಿಯನ್ನ ಸೇವಿಸುತ್ತಾರೆ. ಹೊಂಗೆ ಮರದಿಂದ ತಂಪಾದ ಗಾಳಿ, ಹೊಂಗೆ ಬೀಜದಿಂದ ಎಣ್ಣೆ ಇದಿಷ್ಟೇ ನಮಗೆ ಅದರ ಉಪಯೋಗ ಗೊತ್ತಿರೋದು. ಆದ್ರೆ ಹೊಂಗೆ ಮರದಿಂದ ನಮ್ಮದೇಹದ ಹಲವು ಕಾಯಿಲೆಗಳಿಗೂ ಮದ್ದಿದೆ.
ಹೊಂಗೆಯ ನೆರಳು ದಣಿವನ್ನು ಪರಿಹರಿಸುವುದಷ್ಟೇ ಅಲ್ಲದೆ ಮನಸ್ಸಿನ ದುಗುಡವನ್ನು ಕಳೆದು ಮನಸ್ಸಿನ ಶಾಂತಿಯನ್ನು ಕಾಪಾಡುತ್ತದೆ.
ಮಧುಮೇಹಕ್ಕೂ ಇದರಿಂದ ಔಷಧ ತಯಾರಿಸಬಹುದು
ಒಂದು ಹಿಡಿ ಹಸಿ ಅಥವಾ ಒಣಗಿದ ಹೊಂಗೆ ಎಲೆಗಳನ್ನು ತಂದು ಸಮ ಭಾಗ ಒಣಗಿದ ಹಾಗಲಕಾಯಿ ಮತ್ತು ನೇರಳೆ ಬೀಜಗಳನ್ನು ಕೂಡಿಸಿ ನುಣ್ಣಗೆ ಚೂರ್ಣ ಮಾಡಿ ಕದಡಿ ಸೇವಿಸುವುದು.
ಹೇನು ಕೆರೆ, ಮೀಸೆ, ಗಡ್ಡ ಮತ್ತು ತಲೆಯಲ್ಲಿ ಕೂದಲು ಉದುರುತ್ತಿದ್ದರೆ ಅದಕ್ಕೂ ಹೊಂಗೆ ಪರಿಹಾರ. ಒಣಗಿದ ಹೊಂಗೆ ಬೀಜಗಳನ್ನು ನೀರಿನಲ್ಲಿ ತೇದು ಗಂಧವನ್ನು ಕೂದಲು ಉದುರುವ ಕಡೆ ಹಚ್ಚುವುದರಿಂದ ಕೂದಲುದುರುವಿಕೆ ನಿಲ್ಲುತ್ತದೆ.
ಅರ್ಧ ತಲೆ ನೋವು ಅನುಭವಿಸುತ್ತಿದ್ದರೆ ಒಂದೆರೆಡು ಹೊಂಗೆ ಬೀಜಗಳನ್ನು ಸ್ವಲ್ಪ ನೀರು ಸೇರಿಸಿ ನುಣ್ಣಗೆ ಅರೆದು, ತೆಳು ಬಟ್ಟೆಯಲ್ಲಿ ಹಾಕಿ 2 ,3 ತೊಟ್ಟು ರಸವನ್ನು ಮೂಗಿನ ಹೊಳ್ಳೆಗಳಿಗೆ ಬಿಡುವುದು.
ತಲೆಯಲ್ಲಿ ಹೇನು ಮತ್ತು ಸೀರುಗಳಿದ್ದರೆ ರಾತ್ರಿ ಮಲಗುವಾಗ ಹೊಂಗೆ ಎಣ್ಣೆಯನ್ನು ಕೂದಲಿಗೆ ಹಚ್ಚಿ ಬಟ್ಟೆ ಕಟ್ಟಿ ಮಲಗುವುದು. ಬೆಳಿಗ್ಗೆ ಎದ್ದು ಸೀಗೇ ಪುಡಿ ಹಾಕಿಕೊಂಡು ಬಿಸಿನೀರಿನಲ್ಲಿ ಸ್ನಾನ ಮಾಡುವುದರಿಂದ ತಲೆಯಲ್ಲಿ ಹೇನು ಇರುವುದಿಲ್ಲ.
ಜೇನು ಹುಳುಗಳ ಕಡಿತಕ್ಕೆ ಒಳಗಾದವರು ಹುಳು ಕಡಿದಿರುವ ಕಡೆ ಹೊಂಗೆ ಎಣ್ಣೆಯನ್ನು ಹಚ್ಚುವುದರಿಂದ ಉರಿ, ನವೆ ಕಡಿಮೆಯಾಗುತ್ತದೆ.
ಒಂದು ದೊಡ್ಡ ಚಮಚ ಎಣ್ಣೆಯನ್ನು ಪಾತ್ರೆಯಲ್ಲಿ ಹಾಕಿ ಮಂದಾಗ್ನಿಯಿಂದ ಕಾಯಿಸುವುದು. ಎಣ್ಣೆ ಬಿಸಿಯಾದ ಮೇಲೆ ಕೆಳಗಿಳಿಸುವಾಗ 5 ಗ್ರಾಂ ಆರತಿ ಕರ್ಪೂರವನ್ನು ಹಾಕುವುದು. ತೈಲವು ತಣ್ಣಗಾದ ನಂತರ ನೋವಿರುವ ಕಡೆ ಹಚ್ಚುವುದರಿಂದ ಕೀಲು ನೋವು ಶಮನವಾಗುತ್ತದೆ.
