-
ಪತ್ರಿಕಾ ದಿನಾಚರಣೆಯ ಜೂಮ್ ಮೀಟ್ ನಲ್ಲಿ ಸಿಎಂ ಯಡಿಯೂರಪ್ಪ ಭಾಗಿಯಾಗಿ ಮಾತನಾಡುವರು
ಬೆಂಗಳೂರು: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘವು ಜು.1 ರಂದು ಆಯೋಜಿಸಿರುವ ಜೂಮ್ ಮೀಟ್ ಪತ್ರಿಕಾ ದಿನಾಚರಣೆಯಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಪಾಲ್ಗೊಳ್ಳಲಿದ್ದಾರೆ ಎಂದು ಕೆಯುಡಬ್ಲ್ಯುಜೆ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ತಿಳಿಸಿದ್ದಾರೆ.

1843ರ ಜುಲೈ 1 ರಂದು ಪ್ರಕಟವಾದ ‘ಮಂಗಳೂರು ಸಮಾಚಾರ’ ಎನ್ನುವುದು ಕನ್ನಡ ಪತ್ರಿಕೋದ್ಯಮದ ಪ್ರಪ್ರಥಮ ಪತ್ರಿಕೆ. ಈ ಪತ್ರಿಕೆ ಆರಂಭಗೊಂಡ ಇದೇ ದಿನವನ್ನು ಪತ್ರಿಕಾ ದಿನಾಚರಣೆಯಾಗಿ ವಾರ್ತಾ ಇಲಾಖೆ ಸಹಯೋಗದಿಂದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘವು ಆಚರಣೆ ಮಾಡಿಕೊಂಡು ಬರುತ್ತಿದೆ. ಈ ಸಲ ಕೋವಿಡ್ ಹಿನ್ನೆಲೆಯಲ್ಲಿ ಪತ್ರಿಕಾ ದಿನವನ್ನು ಸರಳವಾಗಿ ಆಚರಿಸಲು ಸಂಘ ನಿರ್ಧರಿಸಿದೆ. ಹೀಗಾಗಿ, ಜು.1 ರಂದು ಗುರುವಾರ ಮಧ್ಯಾಹ್ನ 12.30ಕ್ಕೆ ಜೂಮ್ ಮೀಟ್ ಮೂಲಕ ಪತ್ರಕರ್ತರನ್ನು ಉದ್ದೇಶಿಸಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಾತನಾಡಲಿದ್ದಾರೆ ಎಂದು ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು, ಪ್ರಧಾನ ಕಾರ್ಯದರ್ಶಿ ಜಿ.ಸಿ.ಲೋಕೇಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ