ಫ್ರೀ ಫೈರ್ ಗೇಮ್ ಆಡಲು ಅಮ್ಮನ ಬ್ಯಾಂಕ್ ಖಾತೆಯಿಂದ ಮೂರು ಲಕ್ಷ ಹಣ ಎಗರಿಸಿದ ಮಗ

ರಾಂಚಿ: ಮೊಬೈಲ್ ಆನ್ ಲೈನ್ ಗೇಮ್ ಫ್ರೀ ಫೈರ್ ಆಟದ ಹುಚ್ಚು ಬೆಳೆಸಿಕೊಂಡಿದ್ದ 12 ವರ್ಷದ ಬಾಲಕನೊಬ್ಬ ತನ್ನ ತಾಯಿಯ ಬ್ಯಾಂಕ್ ಅಕೌಂಟ್ ನಿಂದ ಬರೋಬರಿ ಮೂರು ಲಕ್ಷ ಇಪ್ಪತ್ತು ಸಾವಿರ ರೂಪಾಯಿ ಎಗರಿಸಿದ್ದಾನೆ.


ಆಟದಲ್ಲಿ ಮೇಲುಗೈ ಸಾಧಿಸುವ ಸಲುವಾಗಿ ಶಸ್ತ್ರಾಸ್ತ್ರ ಖರೀದಿಸಲು ಈ ಹಣ ಬಳಸಿಕೊಂಡಿದ್ದಾನೆ. ಛತ್ತೀಸ್ ಗಢದ ಕಾಂಕರ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ.

ಶಿಕ್ಷಕಿ ಶುಭ್ರಾ ಪಾಲ್ ಅವರು ಈ ಸಂಬಂಧ ಪೊಲೀಸರಿಗೆ ದೂರು ನೀಡಿದ್ದರು. ತನಿಖೆ ನಡೆಸಿದ ಪೊಲೀಸರಿಗೆ ಕಳ್ಳ ಮನೆಯಲ್ಲಿ ಇರುವುದು ತನಿಖೆಯ ವೇಳೆ  ತಿಳಿದು ಬಂತು.


ಇದು ಎಚ್ಚರಿಕೆಯ ಗಂಟೆ. ಎಲ್ಲ ಚಿಕ್ಕ ಮಕ್ಕಳು ಕೂಡ ಮೊಬೈಲ್ ನಲ್ಲಿ ಗೇಮ್‌ ಆಡುತ್ತಾರೆ. ಅವರಿಗೆ ಬ್ಯಾಂಕ್ ಖಾತೆಯ ಮಾಹಿತಿ ನೀಡಬಾರದು ಎಂದು ಪೊಲೀಸರು ಮನವಿ ಮಾಡಿದ್ದಾರೆ.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ