
ಮೂಡಿಗೆರೆ: ಮುಖ್ಯ ಚುನಾವಣಾಧಿಕಾರಿ ವಜಾಗೊಳಿಸುವಂತೆ ಬಹುಜನ ಸಮಾಜ ಪಕ್ಷ ಒತ್ತಾಯ
ಮೂಡಿಗೆರೆ: ಎಸ್ಐಆರ್ ಪ್ರಕ್ರಿಯೆಯಲ್ಲಿ ಅಕ್ರಮ ನಡೆಸಲಾಗಿದ್ದು, ಕೂಡಲೇ ಕೇಂದ್ರ ಮುಖ್ಯ ಚುನಾವಣಾಧಿಕಾರಿಯನ್ನು ವಜಾಗೊಳಿಸ ಬೇಕು ಎಂದು ಬಹುಜನ ಸಮಾಜ ಪಕ್ಷದ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಝಾಕೀರ್ ಹುಸೈನ್ ಒತ್ತಾಯಿಸಿದರು.
ಎಸ್ಐಆರ್ ಪ್ರಕ್ರಿಯೆಯನ್ನು ರದ್ದುಪಡಿಸಿ, ಮುಖ್ಯ ಚುನಾವಣಾಧಿಕಾರಿ ಜ್ಞಾನೇಶ್ ಕುಮಾರ್ ಅವರನ್ನು ವಜಾಗೊಳಿಸಬೇಕು ಎಂದು ಒತ್ತಾಯಿಸಿ ಜಿಲ್ಲಾ ಮತ್ತು ವಲಯ ಎಸ್‌ಕೆಎಸ್ಎಸ್ಎಫ್ ನಿಂದ ತಾಲ್ಲೂಕು ಕಚೇರಿ ಆವರಣದಲ್ಲಿ ಶುಕ್ರವಾರ ನಡೆದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.
ಮತದಾರರ ಪಟ್ಟಿಯಿಂದ ಮುಸ್ಲಿಮರ ಮತಗಳನ್ನು ಕೈಬಿಡಲು ಎಸ್ಐಆರ್ ಪ್ರಕ್ರಿಯೆಯಲ್ಲಿ ಅಕ್ರಮ ನಡೆಸಲಾಗಿದೆ. ಇದರಿಂದ ಅನೇಕ ರೀತಿಯ ಗೊಂದಲಗಳು ನಡೆದಿವೆ. ಒಂದು ಸಮುದಾಯವನ್ನು ಗುರಿಯಾಗಿ ಸಿಕೊಂಡು ಮತಪಟ್ಟಿ ತಯಾರಿಸಲು ಹೊರಟಿರುವ ಮುಖ್ಯ ಚುನಾವಣಾಧಿಕಾರಿಯನ್ನು ಕೇಂದ್ರ ಸರ್ಕಾರವು ಕೂಡಲೇ ವಜಾಗೊಳಿಸಬೇಕು. ಅಲ್ಲಲ್ಲಿ ಕೆಲವರಿಂದ ಫಾರಂ ನಂ 7ರಲ್ಲಿ ಅರ್ಜಿ ಪಡೆದು ಮತಪಟ್ಟಿಯಿಂದ ಮುಸ್ಲಿಮರ ಹೆಸರನ್ನು ಕೈಬಿಡಲು ಹುನ್ನಾರ ನಡೆಸಿದೆ. ಇದಕ್ಕೆ ಕಡಿವಾಣ ಹಾಕಬೇಕಾಗಿದ್ದ ಕೇಂದ್ರ ಸರ್ಕಾರ ಕೈಚೆಲ್ಲಿ ಕುಳಿತಿದೆ. ಜ್ಞಾನೇಶ್ ಕುಮಾರ್ ಅವರು ದೇಶದಲ್ಲಿ ಒಂದು ಸಮುದಾಯವನ್ನು 2ನೇ ದರ್ಜೆ ಪ್ರಜೆಯನ್ನಾಗಿ ಮಾಡಲು ಇಂತಹ ಸಂಚು ರೂಪಿಸಿದ್ದಾರೆ. ಅವರನ್ನು ರಾಷ್ಟ್ರಪತಿ ವಜಾಗೊಳಿಸಬೇಕು ಎಂದು ಒತ್ತಾಯಿಸಿದರು.
ಎಸ್‌ಕೆಎಸ್ಎಸ್ಎಫ್ ಜಿಲ್ಲಾ ಘಟ ಕದ ಪ್ರಧಾನ ಕಾರ್ಯದರ್ಶಿ ಝೈದ್ ಫೈಝಿ ಮಾತನಾಡಿ, ಎಸ್ಐಆರ್ ಪ್ರಕ್ರಿ ಯೆಯಲ್ಲಿ ನಡೆಯುತ್ತಿರುವ ಅಕ್ರಮ, ಲೋಪಗಳ ಕುರಿತು ಸಮಗ್ರ ತನಿಖೆ ನಡೆಸಬೇಕು. ಅರ್ಹ ಮತದಾರರ ಹೆಸರನ್ನು ಪಟ್ಟಿಯಿಂದ ಕೈಬಿ ಡಬಾರದು. ಮತದಾರರ ಹಕ್ಕುಗಳಿಗೆ ಧಕ್ಕೆಯಾಗದಂತೆ ಪಾರದರ್ಶಕವಾಗಿ ಎಸ್ಐಆರ್ ಪ್ರಕ್ರಿಯೆ ನಡೆಸಬೇಕು. ಆಗಿರುವ ಲೋಪಗಳಿಗೆ ಹೊಣೆಗಾರರಾಗಿರುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ಚುನಾವಣಾ ಪ್ರಕ್ರಿಯೆ ಪಾರದರ್ಶಕ ದೃಷ್ಟಿಯಿಂದ ಮುಖ್ಯ ಚುನಾವಣಾಧಿಕಾರಿಯನ್ನು ವಜಾ ಗೊಳಿಸಬೇಕು ಎಂದು ಒತ್ತಾಯಿಸಿದರು.
ಎದ್ದೇಳು ಕರ್ನಾಟಕ ಸಂಘಟನೆ ಯ ರಾಜ್ಯ ಸಂಚಾಲಕ ಗೌಸ್ ಮೊಹಿಯುದ್ದೀನ್ ಮಾತನಾಡಿ, ರಾಜ್ಯದಲ್ಲಿ ಸುಮಾರು 1 ಕೋಟಿ ಮತದಾರರನ್ನು ಮತಪಟ್ಟಿಯಿಂದ ಕೈಬಿಡಲಾಗಿದೆ. ಮತಪಟ್ಟಿಯಿಂದ ಹೊರಹಾಕಲಾದವರು ಸರ್ಕಾರದ ಯಾವುದೇ ಯೋಜನೆಯನ್ನು ಪಡೆಯಲು ಅನರ್ಹರಾಗಿರುತ್ತಾರೆ ಎಂದು ಮುಖ್ಯಮಂತ್ರಿ ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ದುರುದ್ದೇ ಶದಿಂದ ದುರ್ಬಲ ವರ್ಗದವರನ್ನು ಹೊರಹಾಕಲಾಗಿದೆ. ಇದು ಪ್ರಜಾಪ್ರಭುತ್ವ ವಿರೋಧಿ ಧೋರಣೆಯಾಗಿದೆ. ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದರು.
ತಹಶೀಲ್ದಾರ್ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಿದರು. ಬದ್ರಿಯಾ ಜುಮಾ ಮಸೀದಿ ಅಧ್ಯಕ್ಷ ಎ.ಎಂ.ಷರೀಫ್, ಎಸ್‌ಕೆಎಸ್ಎಸ್ಎಫ್ ವಲಯ ಅಧ್ಯಕ್ಷ ಷರೀಫ್ ಬಿಳಗುಳ, ಕಾರ್ಯದರ್ಶಿ ನಿಯಾಜ್, ಮುಖಂಡರಾದ ಅಬ್ದುಲ್ಲಾ, ಅಕ್ರಮ್, ಸಿನಾನ್ ಪೈಝಿ, ಮಜೀದ್ ಚಕಮಕ್ಕಿ, ಹೈದರ್ ಜಿಯಾ, ವಾಹಿದ್, ಇಬ್ರಾಹಿಂ ಯಾದ್ಗಾರ್, ಹಸನ್, ಪಿ.ಕೆ.ಹಮೀದ್, ಅಬ್ದುಲ್ ರಹಿಮಾನ್ ಬಿಳಗುಳ, ಪಿ.ಕೆ.ಹನೀಫ್, ಮಹಮ್ಮದ್ ಹನೀಫ್ ಹೈದ್ರೋಸ್, ಫಿಶ್ ಮೋಣು, ಆಶಿಕ್ ಬೀಜುವಳ್ಳಿ, ರಹೀಂ, ನದೀಮ್ ಇದ್ದರು.