ಭ್ರಷ್ಟ, ಅಭಿವೃದ್ಧಿಶೂನ್ಯ ರಾಜ್ಯ ಸರ್ಕಾರ: ಸಂಜೀವ ಮಠಂದೂರು ಟೀಕೆ

ಭ್ರಷ್ಟ, ಅಭಿವೃದ್ಧಿಶೂನ್ಯ ರಾಜ್ಯ ಸರ್ಕಾರ: ಸಂಜೀವ ಮಠಂದೂರು ಟೀಕೆ

ಭ್ರಷ್ಟ, ಅಭಿವೃದ್ಧಿಶೂನ್ಯ ರಾಜ್ಯ ಸರ್ಕಾರ: ಸಂಜೀವ ಮಠಂದೂರು ಟೀಕೆ

ಉಪ್ಪಿನಂಗಡಿ: ‘ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ, ಅಭಿವೃದ್ಧಿ ಪರವಾದ ಎನ್‌ಡಿಎ ಸರ್ಕಾರ ಇದೆ. ಕಾಂಗ್ರೆಸ್‌ ನೇತೃತ್ವದ ರಾಜ್ಯ ಸರ್ಕಾರ ಭ್ರಷ್ಟ, ಅಭಿವೃದ್ಧಿಶೂನ್ಯವಾಗಿದ್ದು, ಆರ್ಥಿಕವಾಗಿ ದಿವಾಳಿಯಾಗಿದೆ’ ಎಂದು ಮುಖಂಡ ಸಂಜೀವ ಮಠಂದೂರು ಹೇಳಿದರು.

ಇಲ್ಲಿ ಶುಕ್ರವಾರ ಬಿಜೆಪಿ ವತಿಯಿಂದ ನಡೆದ ‘ನಮ್ಮ ಹಕ್ಕಿಗಾಗಿ ನಮ್ಮ ನಡಿಗೆ’ ಹಕ್ಕೊತ್ತಾಯ ಸಭೆಯಲ್ಲಿ ಅವರು ಮಾತನಾಡಿದರು.

ಕಾಂಗ್ರೆಸ್‌ನ ರೈತ ವಿರೋಧಿ, ಜನವಿರೋಧಿ ನೀತಿಯಿಂದ ಜನ ಬೇಸತ್ತು ಹೋಗಿದ್ದಾರೆ. ನಾನು ಶಾಸಕನಾಗಿದ್ದ ಎರಡು ವರ್ಷದಲ್ಲಿ ಮಾಡಿದ ಅಭಿವೃದ್ಧಿಯನ್ನು ತೋರಿಸುತ್ತೇವೆ. ನಾಲ್ಕು ವರ್ಷದ ಅವಧಿಯಲ್ಲಿ ಶಾಸಕ ಅಶೋಕ್‌ ಕುಮಾರ್‌ ರೈ ಅವರು ಮಾಡಿದ ಅಭಿವೃದ್ಧಿಯನ್ನು ತೋರಿಸಲಿ ಎಂದು ಸವಾಲು ಹಾಕಿದರು.

ಉಪ್ಪಿನಂಗಡಿ ಮಹಾ ಶಕ್ತಿಕೇಂದ್ರದ ಅಧ್ಯಕ್ಷ ಸುರೇಶ್ ಅತ್ರೆಮಜಲು ಮಾತನಾಡಿ, ಸಂಜೀವ ಮಠಂದೂರು ಶಾಸಕರಾಗಿದ್ದ ಅವಧಿಯಲ್ಲಿ ಪೆರ್ನೆ, ನಾಲಾಯದ ಗುಂಡಿ ಎಂಬಲ್ಲಿ ಅಣೆಕಟ್ಟುಗಳು ನಿರ್ಮಾಣವಾಗಿವೆ. ಉಪ್ಪಿನಂಗಡಿಯಲ್ಲಿ ಕೃಷಿ ಇಲಾಖೆ ಕಚೇರಿ, ನಾಡ ಕಚೇರಿ, ಅರಣ್ಯ ಇಲಾಖಾ ಕಚೇರಿ ಸೇರಿದಂತೆ ಹಲವು ಅಭಿವೃದ್ಧಿ ಕಾಮಗಾರಿ ನಡೆದಿವೆ. ದೇವಸ್ಥಾನದ ಬಳಿ ಅಭಿವೃದ್ಧಿಗೆ ₹352 ಕೋಟಿ ವೆಚ್ಚದ ಯೋಜನೆ ಹಾಕಿಕೊಳ್ಳಲಾಗಿದೆ ಎಂದು ಶಾಸಕ ಅಶೋಕ್‌ ಕುಮಾರ್ ರೈ ಘೋಷಿಸಿದ್ದರು. ಆದರೆ ಆ ಭರವಸೆಯೇ ಈಗ ಸುಳ್ಳಾಗಿದೆ ಎಂದರು.

ಪಾದಯಾತ್ರೆ: ಗಾಂಧಿಪಾರ್ಕ್‌ನಿಂದ ಪಾದಯಾತ್ರೆ ಮೂಲಕ ಉಪ್ಪಿನಂಗಡಿ ಬಸ್‌ ನಿಲ್ದಾಣದ ಬಳಿ ಬಂದು ಹಕ್ಕೊತ್ತಾಯ ಸಭೆ ನಡೆಸಲಾಯಿತು. ಮೆರವಣಿಗೆಗೆ ಗ್ರಾ.ಪಂ. ಮಾಜಿ ಅಧ್ಯಕ್ಷ ಚೆನ್ನಯ ಚಾಲನೆ ನೀಡಿದರು.

ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ದಯಾನಂದ ಶೆಟ್ಟಿ ಉಜಿರೆಮಾರ್ ಮಾತನಾಡಿದರು. ಬಿಜೆಪಿ ನಗರ ಅಧ್ಯಕ್ಷ ಶಿವಕುಮಾರ್ ಕಲ್ಲಿಮಾರ್, ಗ್ರಾಮಾಂತರ ಮಂಡಲದ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ದಡ್ಡು, ಉಪಾಧ್ಯಕ್ಷರಾದ ವಿದ್ಯಾಧರ ಜೈನ್, ನಾಗೇಶ್ ಪಿ.ಎಸ್, ಪಕ್ಷದ ಮುಖಂಡರಾದ ಅಪ್ಪಯ್ಯ ಮಣಿಯಾಣಿ, ಪ್ರಸಾದ್ ಭಂಡಾರಿ, ಮೋಹನ್ ಪಕ್ಕಳ, ವಿದ್ಯಾಧರ ಜೈನ್, ಲಕ್ಷ್ಮಣ ಬೆಳ್ಳಿಪ್ಪಾಡಿ, ಪುರುಷೋತ್ತಮ ಮುಂಗ್ಲಿಮನೆ, ಗೌರಿ ಬನ್ನೂರು, ರಾಮಚಂದ್ರ ಮಣಿಯಾಣಿ, ಮುಕುಂದ ಗೌಡ ಬಜತ್ತೂರು, ನವೀನ್ ಪದೆಬರಿ, ಗಂಗಾಧರ ಗೌಡ ಬಜತ್ತೂರು, ಶೌಕತ್ ಅಲಿ, ಉಷಾ ಮುಳಿಯ, ದಯಾನಂದ ಸರೋಳಿ, ಜಯಂತ ಪೊರೋಳಿ ಭಾಗವಹಿಸಿದ್ದರು. ಚಂದ್ರಶೇಖರ ಮಡಿವಾಳ ವಂದಿಸಿದರು. ಲೊಕೇಶ್ ಬೆತ್ತೋಡಿ ನಿರೂಪಿಸಿದರು.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ