ಹುಬ್ಬಳ್ಳಿಯಲ್ಲಿ ಲಕ್ಷ್ಮಿ ಪೂಜೆ ಸಡಗರ; ಪಟಾಕಿ ಅಬ್ಬರ

ಹುಬ್ಬಳ್ಳಿಯಲ್ಲಿ ಲಕ್ಷ್ಮಿ ಪೂಜೆ ಸಡಗರ; ಪಟಾಕಿ ಅಬ್ಬರ

ಹುಬ್ಬಳ್ಳಿಯಲ್ಲಿ ಲಕ್ಷ್ಮಿ ಪೂಜೆ ಸಡಗರ; ಪಟಾಕಿ ಅಬ್ಬರ

ಹುಬ್ಬಳ್ಳಿ: ದೀಪಾವಳಿ ಹಬ್ಬದ ಎರಡನೇ ದಿನವಾದ ಸೋಮವಾರವೂ ನಗರದಲ್ಲಿ ಸಡಗರ, ಸಂಭ್ರಮ ಮನೆಮಾಡಿತ್ತು.

ಭಾನುವಾರ ಮತ್ತು ಸೋಮವಾರ ಎರಡೂ ದಿನ ಅಮಾವಾಸ್ಯೆ ಇದ್ದ ಕಾರಣ ಕೆಲವರು ಭಾನುವಾರ ಸಂಜೆಯೇ ಕಚೇರಿ, ಮನೆ, ಅಂಗಡಿಗಳಲ್ಲಿ ಲಕ್ಷ್ಮಿ ಪೂಜೆ ಹಾಗೂ ವಾಹನಗಳ ಪೂಜೆ ಮಾಡಿದ್ದರು. ಇನ್ನೂ ಕೆಲವರು ಸೋಮವಾರ ಬೆಳಿಗ್ಗೆ ಪೂಜೆ ನೆರವೇರಿಸಿದರು. ವಿವಿಧ ದೇವಸ್ಥಾನಗಳಲ್ಲೂ ವಿಶೇಷ ಪೂಜೆ, ಅಲಂಕಾರ ನಡೆದವು. ಮಂಗಳವಾರ ಪಾಡ್ಯ ಪೂಜೆ ನಡೆಯಲಿದೆ.

ನಗರದ ದುರ್ಗದಬೈಲ್, ಜನತಾ ಬಜಾರ್, ಹಳೇ ಹುಬ್ಬಳ್ಳಿ ಮಾರುಕಟ್ಟೆ, ಎಂ.ಜಿ. ಮಾರುಕಟ್ಟೆ, ಗೋಕುಲ ರಸ್ತೆ, ರಾಣಿ ಚನ್ನಮ್ಮ ವೃತ್ತದ ಸೇರಿ ವಿವಿಧ ಕಡೆಗಳಲ್ಲಿ ಹೂವು, ಹಣ್ಣು, ಕಬ್ಬು, ಬಾಳೆ ದಿಂಡು, ಮಾವಿನ ತೋರಣಗಳ ಮಾರಾಟ ಜೋರಾಗಿತ್ತು.

ಮನೆಗಳ ಮುಂದೆ ಬಣ್ಣ‌ಬಣ್ಣದ ರಂಗೋಲಿ ಬಿಡಿಸಲಾಗಿತ್ತು. ಬಗೆಬಗೆಯ ಆಕಾಶಬುಟ್ಟಿಗಳು, ಝಗಮಗಿಸುವ ವಿದ್ಯುತ್ ದೀಪಗಳ ಸರಮಾಲೆ ಕಟ್ಟಿದ್ದರಿಂದ ಸಂಜೆಯು ಬೆಳಕಿನಿಂದ ಕಂಗೊಳಿಸುತ್ತಿತ್ತು.

ಭಾರಿ ‍ಪ್ರಮಾಣದಲ್ಲಿ ಸದ್ದು ಮಾಡುತ್ತ ಹೊಗೆ ಸೂಸುವ ಸಾಮಾನ್ಯ ಪಟಾಕಿಗಳನ್ನು ಈ ಬಾರಿ ನಿಷೇಧಿಸಿದ್ದರಿಂದ ನಗರದೆಲ್ಲೆಡೆ ಪರಿಸರ ಸ್ನೇಹಿ ಹಸಿರು ಪಟಾಕಿಗಳ ಅಬ್ಬರ ಹೆಚ್ಚಿತ್ತು. ನೆಹರೂ ಮೈದಾನದಲ್ಲಿ ತೆರೆಯಲಾದ ಪಟಾಕಿ ಅಂಗಡಿಗಳಲ್ಲೂ ಜನರ ಗದ್ದಲ ಹೆಚ್ಚಾಗಿಯೇ ಇತ್ತು.

ಸಂಜೆಯಾಗುತ್ತಿದ್ದಂತೆ ವರ್ಣರಂಜಿತ ಪಟಾಕಿಗಳು, ರಾಕೆಟ್‌ಗಳು ಮುಗಿಲೆತ್ತರಕ್ಕೆ ಚಿಮ್ಮುತ್ತ ಆಗಸದಲ್ಲಿ ಚಿತ್ತಾರ ಮೂಡಿಸಿದವು. ತಡ ರಾತ್ರಿವರೆಗೂ ಪಟಾಕಿಗಳ ಸದ್ದು ಕಡಿಮೆ ಆಗಲಿಲ್ಲ. ಕೆಲವು ಮನೆಗಳಲ್ಲಿ ವಾಯುಮಾಲಿನ್ಯಕ್ಕೆ ಕೊಡುಗೆ ನೀಡಬಾರದು ಎಂಬ ಸದುದ್ದೇಶದಿಂದ ಹಣತೆಗಳನ್ನು ಬೆಳಗಿ ಸಂಭ್ರಮಿಸಿದರು.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ