
ತುಮಕೂರು: ಕೊಡಿಗೇನಹಳ್ಳಿಯಲ್ಲಿ ವಿದ್ಯುತ್ ತಂತಿ ತಾಗಿ ಕಾರ್ಮಿಕ ಸಾವು
ಕೊಡಿಗೇನಹಳ್ಳಿ: ಮನೆ ನಿರ್ಮಾಣದ ಕಾಮಗಾರಿ ನಡೆಯುತ್ತಿದ್ದ ವೇಳೆ ಕಬ್ಬಿಣದ ಮಟ್ಟಗೋಲು ಆಕಸ್ಮಿಕವಾಗಿ 11 ಕೆ.ವಿ. ವಿದ್ಯುತ್ ತಂತಿಗೆ ತಾಗಿ, ಕಟ್ಟಡ ಕಾರ್ಮಿಕ ಬೂದೇನಹಳ್ಳಿಯ ಅನಿಲ್ ಕುಮಾರ್ (34) ಮೃತಪಟ್ಟಿದ್ದಾರೆ.
ಗ್ರಾಮದ ವಾಸವಿ ಬಡಾವಣೆಯಲ್ಲಿ ಭಾನುವಾರ ಮಧ್ಯಾಹ್ನ ಮನೆ ಕಟ್ಟಡದ ಕೆಲಸ ಮಾಡುವ ವೇಳೆಯಲ್ಲಿ ಕಬ್ಬಿಣದ ಮಟ್ಟಗೋಲನ್ನು ಗಾರೆ ಕೆಲಸಗಾರನಿಗೆ ಅನಿಲ್ ಕುಮಾರ್ ನೀಡಲು ಹೋದಾಗ ವಿದ್ಯುತ್ ತಂತಿಗೆ ತಾಗಿ ವಿದ್ಯುತ್ ಸ್ಪರ್ಶಿಸಿದೆ.
ಕೊಡಿಗೇನಹಳ್ಳಿಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗೆ ಮಧುಗಿರಿಗೆ ಕರೆದೊಯ್ಯುವಾಗ ಮೃತಪಟ್ಟಿದ್ದಾರೆ.