ಹುಬ್ಬಳ್ಳಿ| ವೆಲ್ಡಿಂಗ್ ಕಾಮಗಾರಿ; ರೈಲು ಸಂಚಾರ ಭಾಗಶಃ ರದ್ದು
ಹುಬ್ಬಳ್ಳಿ: ಬೀರೂರು–ಅರಸೀಕೆರೆ ಭಾಗದ ನಡುವೆ ಸುರಕ್ಷತಾ ಹಾಗೂ ವೆಲ್ಡಿಂಗ್ ಕಾಮಗಾರಿ ಸಲುವಾಗಿ ಕೆಲವು ರೈಲುಗಳ ಸಂಚಾರದಲ್ಲಿ ಭಾಗಶಃ ರದ್ದತಿ ಮತ್ತು ನಿಯಂತ್ರಣ ಮಾಡಲಾಗಿದೆ.
ಡಿ.7ರಂದು ಹೊರಡುವ ಎಸ್ಎಸ್ಎಸ್ ಹುಬ್ಬಳ್ಳಿ–ಅರಸೀಕೆರೆ ದೈನಂದಿನ ಎಕ್ಸ್ಪ್ರೆಸ್ ರೈಲು (ರೈಲು ಸಂಖ್ಯೆ 16214) ಬೀರೂರು–ಅರಸೀಕೆರೆ ನಡುವೆ ಭಾಗಶಃ ರದ್ದಾಗಲಿದ್ದು, ಬೀರೂರಿನಲ್ಲಿಯೇ ತನ್ನ ಸಂಚಾರ ಕೊನೆಗೊಳಿಸಲಿದೆ.
ಡಿ.8ರಂದು ಹೊರಡುವ ಅರಸೀಕೆರೆ–ಎಸ್ಎಸ್ಎಸ್ ಹುಬ್ಬಳ್ಳಿ ದೈನಂದಿನ ಎಕ್ಸ್ಪ್ರೆಸ್ ರೈಲು (ರೈಲು ಸಂಖ್ಯೆ 16213) ಅರಸೀಕೆರೆ ಬದಲು ಬೀರೂರಿನಿಂದಲೇ ತನ್ನ ನಿಗದಿತ ಸಮಯಕ್ಕೆ ಹೊರಡಲಿದೆ. ಹೀಗಾಗಿ, ಅರಸೀಕೆರೆ ಮತ್ತು ಬೀರೂರು ನಡುವಿನ ಸೇವೆ ರದ್ದಾಗಲಿದೆ. ನ.12, 17, 19, 24, 26, ಡಿ.1, 3, 7ರವರೆಗೆ ತಾಳಗುಪ್ಪ ನಿಲ್ದಾಣದಿಂದ ಹೊರಡುವ ತಾಳಗುಪ್ಪ–ಕೆಎಸ್ಆರ್ ಬೆಂಗಳೂರು ದೈನಂದಿನ ಸೂಪರ್ಫಾಸ್ಟ್ ಎಕ್ಸ್ಪ್ರೆಸ್ ರೈಲನ್ನು (ರೈಲು ಸಂಖ್ಯೆ 20652) ಮಾರ್ಗ ಮಧ್ಯೆ 30 ನಿಮಿಷ ನಿಯಂತ್ರಿಸಲಾಗುವುದು. ಸಂಕವಾಳ ಯಾರ್ಡ್ನಲ್ಲಿ ಜೋಡಿ ಹಳಿ ಯೋಜನೆಗೆ ಸಂಬಂಧಿಸಿದಂತೆ ಹಳಿ ನವೀಕರಣ ಕಾಮಗಾರಿ ನಡೆಯುತ್ತಿರುವುದರಿಂದ ವಾಸ್ಕೊ –ಡ– ಗಾಮಾ–ಕುಲೆಂ ಡೆಮು (ರೈಲು ಸಂಖ್ಯೆ 56964) ಮತ್ತು ಕುಲೆಂ–ವಾಸ್ಕೊ–ಡ– ಗಾಮಾ ಡೆಮು ರೈಲುಗಳ (56963) ಸಂಚಾರವನ್ನು ನ.12ರಿಂದ ನ.30ರವರೆಗೆ ರದ್ದುಗೊಳಿಸಲಾಗಿದೆ.
ಈ ಹಿಂದೆ 2027ರ ಜ.21ರಿಂದ 25ರವರೆಗೆ ಸೂಚಿಸಲಾಗಿದ್ದ ಈ ಎರಡೂ ರೈಲುಗಳ ರದ್ದತಿ ಹಿಂಪಡೆಯಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.