ದಾವಣಗೆರೆ| ವೈದ್ಯರ ಸಲಹೆ ಇಲ್ಲದೇ ಆ್ಯಂಟಿಬಯಾಟಿಕ್ ಬಳಸಬೇಡಿ: ಖಾಲಿದ್ ಅಹಮದ್ ಖಾನ್

ದಾವಣಗೆರೆ| ವೈದ್ಯರ ಸಲಹೆ ಇಲ್ಲದೇ ಆ್ಯಂಟಿಬಯಾಟಿಕ್ ಬಳಸಬೇಡಿ: ಖಾಲಿದ್ ಅಹಮದ್ ಖಾನ್

ದಾವಣಗೆರೆ| ವೈದ್ಯರ ಸಲಹೆ ಇಲ್ಲದೇ ಆ್ಯಂಟಿಬಯಾಟಿಕ್ ಬಳಸಬೇಡಿ: ಖಾಲಿದ್ ಅಹಮದ್ ಖಾನ್

ದಾವಣಗೆರೆ: ಆ್ಯಂಟಿಬಯಾಟಿಕ್‌ ಹೆಚ್ಚಾಗಿ ಬಳಸುವುದರಿಂದ ದೇಹದಲ್ಲಿ ರೋಗಾಣುಗಳು ಔಷಧಗಳಿಗೆ ಪ್ರತಿರೋಧಕ ಶಕ್ತಿಯನ್ನು ಬೆಳೆಸಿಕೊಳ್ಳುತ್ತವೆ. ಹೀಗಾಗಿ, ವೈದ್ಯರ ಸಲಹೆ ಇಲ್ಲದೇ ಆ್ಯಂಟಿಬಯಾಟಿಕ್‌ಗಳನ್ನು ಬಳಸಬೇಡಿ ಎಂದು ಉಪ ಔಷಧ ನಿಯಂತ್ರಕ ಡಾ.ಖಾಲಿದ್ ಅಹಮದ್ ಖಾನ್ ಸಲಹೆ ನೀಡಿದರು.

ನಗರದಲ್ಲಿ ರಾಷ್ಟ್ರೀಯ ಔಷಧ ವಿಜ್ಞಾನ ಸಪ್ತಾಹದ ಅಂಗವಾಗಿ ಜಿ.ಎಂ. ಇನ್‌ಸ್ಟಿಟ್ಯೂಟ್ ಆಫ್ ಫಾರ್ಮಾಸ್ಯುಟಿಕಲ್ ಸೈನ್ಸಸ್ ಅಂಡ್ ರಿಸರ್ಚ್, ಜಿಲ್ಲಾ ಔಷಧ ನಿಯಂತ್ರಣ ಇಲಾಖೆ ಹಾಗೂ ಔಷಧ ತಜ್ಞರ ಸಂಘದ ಸಹಯೋಗದೊಂದಿಗೆ ಬುಧವಾರ ಹಮ್ಮಿಕೊಂಡಿದ್ದ ಬೃಹತ್ ಜಾಗೃತಿ ಜಾಥಾದಲ್ಲಿ ಅವರು ಮಾತನಾಡಿದರು.

‘ರೋಗಾಣುಗಳು ಪ್ರತಿರೋಧಕ ಶಕ್ತಿಯನ್ನು ಬೆಳೆಸಿಕೊಂಡರೆ ಮುಂದಿನ ದಿನಗಳಲ್ಲಿ ಯಾವುದೇ ಔಷಧಗಳು ಕೆಲಸ ಮಾಡದಂತೆ ಆಗಬಹುದು. ಇದರಿಂದ ಗಂಭೀರ ಪರಿಸ್ಥಿತಿ ಎದುರಾಗಬಹುದು’ ಎಂದು ಕಳವಳ ವ್ಯಕ್ತಪಡಿಸಿದರು.

‘ಸಣ್ಣಪುಟ್ಟ ಕಾಯಿಲೆಗಳಿಗೆ ಸ್ವಯಂ ಚಿಕಿತ್ಸೆ ಮಾಡಿಕೊಳ್ಳುವ ಪ್ರವೃತ್ತಿ ಸಾರ್ವಜನಿಕರಲ್ಲಿದೆ. ವೈದ್ಯರ ಅಧಿಕೃತ ಚೀಟಿ ಇಲ್ಲದೆ ಯಾವುದೇ ಕಾರಣಕ್ಕೂ ಆ್ಯಂಟಿಬಯಾಟಿಕ್‌ ಔಷಧಗಳನ್ನು ಸೇವಿಸಬಾರದು’ ಎಂದು ಪ್ರಾಂಶುಪಾಲ ಗಿರೀಶ್‌ ಬೋಳಕಟ್ಟಿ ಮನವಿ ಮಾಡಿದರು.

ಜಿ.ಎಂ. ಫಾರ್ಮಸಿ ಕಾಲೇಜು ಉಪಪ್ರಾಂಶುಪಾಲ ಜೆ. ತಿಮ್ಮಾಶೆಟ್ಟಿ, ಸಹಾಯಕ ಪ್ರಾಧ್ಯಾಪಕ ಕೇಶವ ಕೆ.ಎಸ್., ಮೊಹಮ್ಮದ್ ಯಾಸೀನ್, ಮೊಹಮ್ಮದ್ ಯೂಸುಫ್ ಮಲಿಕ್ ದಮಾನಿ, ಸಹಾಯಕ ಔಷಧ ನಿಯಂತ್ರಕರಾದ ಪ್ರಸನ್ನ, ಗೀತಾ, ಜಿಲ್ಲಾ ಕೆಮಿಸ್ಟ್ ಸಂಘದ ಅಧ್ಯಕ್ಷ ಪ್ರಕಾಶ್, ಕಾರ್ಯದರ್ಶಿ ಪ್ರಸನ್ನ ಕುಮಾರ್ ಹಾಜರಿದ್ದರು.

ಆ್ಯಂಟಿ ಬಯಾಟಿಕ್‌: ಜಾಗೃತಿ ಜಾಥಾ

‘ಆ್ಯಂಟಿಬಯಾಟಿಕ್‌ ಔಷಧಿಗಳ ದುರ್ಬಳಕೆ ಮತ್ತು ಉಂಟಾಗುವ ದುಷ್ಪರಿಣಾಮಗಳ’ ಕುರಿತು ಹಮ್ಮಿಕೊಂಡಿದ್ದ ಜಾಗೃತಿ ಜಾಥಾ ನಗರದಲ್ಲಿ ಬುಧವಾರ ನಡೆಯಿತು.

ನಗರದ ಡಾ.ಎಂ.ಸಿ.ಮೋದಿ (ಗುಂಡಿ ಮಹಾದೇವಪ್ಪ) ವೃತ್ತದಿಂದ ಆರಂಭವಾದ ಜಾಥಾ ಚಿಗಟೇರಿ ಜಿಲ್ಲಾ ಆಸ್ಪತ್ರೆ ರಸ್ತೆ, ವಿದ್ಯಾರ್ಥಿ ಭವನ, ಅಂಬೇಡ್ಕರ್‌ ವೃತ್ತದ ಮೂಲಕ ಜಯದೇವ ವೃತ್ತದಲ್ಲಿ ಕೊನೆಗೊಂಡಿತು. ‘ವೈದ್ಯರ ಸಲಹೆ ಇಲ್ಲದೇ ಆ್ಯಂಟಿಬಯಾಟಿಕ್‌ ಬೇಡ’ ಎಂಬ ಘೋಷಣೆಗಳನ್ನು ವಿದ್ಯಾರ್ಥಿಗಳು ಮೊಳಗಿಸಿದರು. ನಗರದ ವಿವಿಧ ಫಾರ್ಮಸಿ ಕಾಲೇಜಿನ 500ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಫಾರ್ಮಾಸಿಸ್ಟ್‌ಗಳು ಪಾಲ್ಗೊಂಡಿದ್ದರು.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ