ಹುಬ್ಬಳ್ಳಿ: ರೈಲ್ವೆ ಕಾರ್ಮಿಕನ ಹೆಸರಲ್ಲಿ ಚಿನ್ನ ದೋಚಿ ಪರಾರಿ

ಹುಬ್ಬಳ್ಳಿ: ರೈಲ್ವೆ ಕಾರ್ಮಿಕನ ಹೆಸರಲ್ಲಿ ಚಿನ್ನ ದೋಚಿ ಪರಾರಿ

ಹುಬ್ಬಳ್ಳಿ: ರೈಲ್ವೆ ಕಾರ್ಮಿಕನ ಹೆಸರಲ್ಲಿ ಚಿನ್ನ ದೋಚಿ ಪರಾರಿ

ಹುಬ್ಬಳ್ಳಿ: ಮುಂಬೈನಿಂದ ಹುಬ್ಬಳ್ಳಿಗೆ ಬರುತ್ತಿದ್ದ ದಾದಾರ್‌ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಮುಂಬೈ ನಿವಾಸಿ ಸರಸ್ವತಿ ಗುಂಡಾಳ ಅವರ ಬ್ಯಾಗ್‌ನಲ್ಲಿದ್ದ ₹2.05 ಲಕ್ಷ ಮೌಲ್ಯದ ಚಿನ್ನಾಭರಣ ಕದ್ದು ಪರಾರಿಯಾದ ವ್ಯಕ್ತಿಯ ವಿರುದ್ಧ ಹಳೇಹುಬ್ಬಳ್ಳಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರೈಲು ಧಾರವಾಡದಿಂದ ಹುಬ್ಬಳ್ಳಿಗೆ ಬರುತ್ತಿದ್ದಾಗ ರೈಲ್ವೆ ಬೋಗಿ ಶುಚಿಗೊಳಿಸುವ ಕಾರ್ಮಿಕನ ಹೆಸರಿನಲ್ಲಿ ಬಂದ ವ್ಯಕ್ತಿಯೊಬ್ಬ, ‘ಹುಬ್ಬಳ್ಳಿ ನಿಲ್ದಾಣ ಸಮೀಪ ಬರುತ್ತಿದ್ದು, ಬೋಗಿ ಶುಚಿಗೊಳಿಸಬೇಕು’ ಎಂದು ಸರಸ್ವತಿ ಅವರ ಟ್ರಾಲಿ ಬ್ಯಾಗ್‌ ತೆಗೆದುಕೊಂಡು ಬಾಗಿಲು ಬಳಿ ತೆರಳಿದ್ದ. ನಂತರ ಟ್ರಾಲಿ ಬ್ಯಾಗ್‌ ತೆರೆದು ಅದರಲ್ಲಿದ್ದ 40 ಗ್ರಾಂ ತೂಕದ ಚಿನ್ನಾಭರಣ ಕದ್ದು ಪರಾರಿಯಾಗಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಆನ್‌ಲೈನ್‌ ವಂಚನೆ: ಇಲ್ಲಿಯ ನಾಗಶೆಟ್ಟಿಕೊಪ್ಪದ ಫಯಾಜ್‌ಅಹ್ಮದ್‌ ಕೆ. ಅವರ ಮೊಬೈಲ್‌ ಫೋನ್‌ ಹ್ಯಾಕ್‌ ಮಾಡಿದ ವ್ಯಕ್ತಿ, ಅವರ ಬ್ಯಾಂಕ್‌ ಖಾತೆಯಲ್ಲಿದ್ದ ₹3.34 ಲಕ್ಷ ವರ್ಗಾಯಿಸಿಕೊಂಡು ವಂಚಿಸಿದ್ದಾನೆ. ಹುಬ್ಬಳ್ಳಿ ಸೈಬರ್‌ ಕ್ರೈಂ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಳವು: ಇಲ್ಲಿಯ ಗೋಕುಲ ರಸ್ತೆಯ ಡೆನಿಸನ್ಸ್‌ ಹೋಟೆಲ್‌ ಬಳಿಯ ವಸತಿ ಸಂಕೀರ್ಣದ ವಿಜಯ ಪಾಟೀಲ ಅವರ ಮನೆ ಬಾಗಿಲಿನ ಬೀಗ ಮುರಿದು, ₹2.58 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ ₹65 ಸಾವಿರ ನಗದು ಕಳವು ಮಾಡಲಾಗಿದೆ. ಗೋಕುಲ ರಸ್ತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಂಚನೆ: ಡಾಟಾ ಎಂಟ್ರಿ ಉದ್ಯೋಗ ನೀಡುವುದಾಗಿ ನಗರದ ಐಶ್ವರ್ಯಾ ಅವರ ವಾಟ್ಸ್‌ಆ್ಯಪ್‌ ನಂಬರ್‌ಗೆ ಸಂದೇಶ ಕಳುಹಿಸಿದ ವ್ಯಕ್ತಿ, ಉದ್ಯೋಗದ ಒಪ್ಪಂದ ಹೆಸರಲ್ಲಿ ₹1.03 ಲಕ್ಷ ವರ್ಗಾಯಿಸಿಕೊಂಡು ವಂಚಿಸಿದ್ದಾನೆ. ಸೈಬರ್‌ ಕ್ರೈಂ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ