Weekly Horoscope: ಈ ವಾರ ಯಾವ ರಾಶಿಯವರಿಗೆ ಅದೃಷ್ಟ? ಹಣ, ಸಂಪತ್ತು, ಉದ್ಯೋಗದಲ್ಲಿ ಯಾರಿಗೆ ಲಾಭ-ನಷ್ಟ!

Weekly Horoscope: ಈ ವಾರ ಯಾವ ರಾಶಿಯವರಿಗೆ ಅದೃಷ್ಟ? ಹಣ, ಸಂಪತ್ತು, ಉದ್ಯೋಗದಲ್ಲಿ ಯಾರಿಗೆ ಲಾಭ-ನಷ್ಟ!

Weekly Horoscope: ಈ ವಾರ ಯಾವ ರಾಶಿಯವರಿಗೆ ಅದೃಷ್ಟ? ಹಣ, ಸಂಪತ್ತು, ಉದ್ಯೋಗದಲ್ಲಿ ಯಾರಿಗೆ ಲಾಭ-ನಷ್ಟ!

Weekly Horoscope 5 To 11 October 2026: ಈ ವಾರದ ಅವಧಿ ಅಕ್ಟೋಬರ್ 5 ರಿಂದ 11, 2026 ರವರೆಗೆ ಇರುತ್ತದೆ. ಈ ವಾರ ಕೆಲವರಿಗೆ ವರವಾಗಿದ್ದರೆ, ಇನ್ನು ಕೆಲವರಿಗೆ ಸವಾಲಿನಿಂದ ಕೂಡಿರುವುದು. ಈ ವಾರ ಯಾವ ರಾಶಿಯವರ ಜೀವನದಲ್ಲಿ ಯಾವ ರೀತಿಯ ಬದಲಾವಣೆಯಾಗುವುದು ಎನ್ನುವುದನ್ನು ವಾರ ಭವಿಷ್ಯದಲ್ಲಿ ನೋಡೋಣ.

ಈ ವಾರ, ಕೆಲಸದಲ್ಲಿ ನಿಮ್ಮ ಪ್ರಯತ್ನಗಳಿಗೆ ಉತ್ತಮ ಪ್ರತಿಕ್ರಿಯೆ ಸಿಗುವುದು. ಹೊಸ ಜವಾಬ್ದಾರಿ, ಕೆಲಸದಲ್ಲಿ ಪ್ರಮುಖ ಅವಕಾಶ ಸಿಗಬಹುದು. ಆದಾಯ ಹೆಚ್ಚಾಗುವ ಲಕ್ಷಣಗಳಿವೆ. ಆದರೂ ಅನಗತ್ಯ ಖರ್ಚು ನಿಯಂತ್ರಿಸಿ. ಸಂಬಂಧಗಳಲ್ಲಿನ ತಪ್ಪು ತಿಳುವಳಿಕೆ ಕಡಿಮೆಯಾಗುವುದು. ನಿದ್ರೆ ಮತ್ತು ಆಹಾರದ ಬಗ್ಗೆ ವಿಶೇಷ ಗಮನ ಕೊಡಿ.

ಈ ವಾರ ವೃಷಭ ರಾಶಿಯವರಿಗೆ ಆರ್ಥಿಕವಾಗಿ ಮಹತ್ವದ್ದಾಗಿರಬಹುದು. ಬಾಕಿ ಉಳಿದಿರುವ ಕೆಲವು ಕೆಲಸಗಳು ಪೂರ್ಣವಾಗುವುದು. ವ್ಯವಹಾರದಲ್ಲಿ ಹೊಸ ಗ್ರಾಹಕರು ಸಿಗುವರು. ಹಣ ಹೂಡಿಕೆ ಮಾಡುವಾಗ ಎಚ್ಚರ ಇರಲಿ. ಆತುರದ ನಿರ್ಧಾರ ತೆಗೆದುಕೊಳ್ಳಬೇಡಿ. ಸಂಗಾತಿಯೊಂದಿಗೆ ಸಂತೋಷದ ಕ್ಷಣ ಕಳೆಯುವಿರಿ. ಕುಟುಂಬದಲ್ಲಿ ಸಂತೋಷದ ವಾತಾವರಣ ಇರುವುದು.

ಈ ವಾರ ನಿಮ್ಮ ಮಾತಿನಲ್ಲಿ ವಿಶೇಷ ತೂಕವಿರುವುದು. ಮೇಲಧಿಕಾರಿಗಳು ನಿಮ್ಮ ಕೆಲಸವನ್ನು ಮೆಚ್ಚುವರು. ವ್ಯವಹಾರದಲ್ಲಿ ಹೊಸ ಆಲೋಚನೆಗಳಿಂದ ಲಾಭವಾಗುವುದು. ನಿಮಗೆ ವಹಿಸಿರುವ ಕೆಲಸ ಸರಿಯಾದ ಸಮಯಕ್ಕೆ ಮುಗಿಯುವುದು. ಈ ವಾರ ಖರ್ಚು ಹೆಚ್ಚಾಗುವುದು. ಮಾನಸಿಕ ಒತ್ತಡ ಕಡಿಮೆಯಾಗುವುದು.

ಕರ್ಕಾಟಕ ರಾಶಿ (Cancer)

ಈ ವಾರ ಕೆಲಸದಲ್ಲಿ ಬಡ್ತಿ ಸಿಗುವುದು. ಉದ್ಯೋಗ ಅಥವಾ ವ್ಯವಹಾರದಲ್ಲಿ ಪ್ರಭಾವಿ ವ್ಯಕ್ತಿಗಳಿಂದ ಸಹಾಯ ಸಿಗಬಹುದು. ಆರ್ಥಿಕ ಸ್ಥಿತಿಯಲ್ಲಿ ಸುಧಾರಣೆಯಾಗುವುದು. ಹಣದ ಸಮಸ್ಯೆ ಬಗೆಹರಿಯುವುದು. ಕುಟುಂಬದೊಂದಿಗೆ ಧಾರ್ಮಿಕ ಸ್ಥಳಗಳಿಗೆ ಪ್ರವಾಸ ಹೋಗುವ ಸ್ಥಾನವಿದೆ. ಸಂಗಾತಿಯಿಂದ ಉತ್ತಮ ಬೆಂಬಲ ಸಿಗುವುದು. ಆರೋಗ್ಯ ಸಮಸ್ಯೆ ಎದುರಾಗುವುದು.

ಈ ವಾರ ಸಿಂಹ ರಾಶಿಯವರ ಆತ್ಮವಿಶ್ವಾಸ ಹೆಚ್ಚಾಗುವುದು. ಹೊಸ ಜವಾಬ್ದಾರಿ ಸಿಗುವುದು. ಬಡ್ತಿಯ ಅವಕಾಶವೂ ಇದೆ. ಆರ್ಥಿಕ ಲಾಭದ ಸಾಧ್ಯತೆಯೂ ಇದೆ. ಹಠಾತ್ ಲಾಭವಾಗುವುದು. ತೆಗೆದುಕೊಳ್ಳುವ ಕೆಲವು ನಿರ್ಧಾರಗಳು ಪ್ರಯೋಜನಕಾರಿಯಾಗಬಹುದು. ಕುಟುಂಬ ಅಥವಾ ಪ್ರೇಮ ಸಂಬಂಧಗಳಲ್ಲಿನ ಸಮಸ್ಯೆ ಶಾಂತಿಯುತವಾಗಿ ಪರಿಹಾರವಾಗುವುದು.

ಕನ್ಯಾ ರಾಶಿಯವರಿಗೆ ಈ ವಾರ ಪ್ರಗತಿಯ ವಾರವಾಗಿರುವುದು. ಹೊಸ ಆರ್ಥಿಕ ಅವಕಾಶ ಸಿಗುವುದು. ನಿಮ್ಮ ಖರ್ಚು ನಿಯಂತ್ರಣದಲ್ಲಿ ಇಟ್ಟುಕೊಳ್ಳಿ. ಉಳಿತಾಯಕ್ಕಾಗಿ ಹೂಡಿಕೆ ಮಾಡುವುದನ್ನು ಮರೆಯಬೇಡಿ. ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗುವುದು. ಕುಟುಂಬ ಸದಸ್ಯರ ಬೆಂಬಲದಿಂದ ಸಂತೋಷ ಹೆಚ್ಚಾಗಬಹುದು.

ಹೊಸ ವಾರವು ವೃತ್ತಿಜೀವನದ ದೃಷ್ಟಿಯಿಂದ ಮುಖ್ಯ. ಉತ್ತಮ ಅವಕಾಶ ಒದಗಿ ಬರುವುದು. ಆರ್ಥಿಕ ಪರಿಸ್ಥಿತಿ ಸುಧಾರಿಸುವುದು. ಸಂಬಂಧಗಳಲ್ಲಿನ ಮನಸ್ತಾಪ ಸರಿ ಹೋಗುವುದು. ಕೌಟುಂಬಿಕ ಸಂತೋಷ ಹೆಚ್ಚಾಗುವುದು. ಈ ವಾರ ನಿರ್ಧಾರ ತೆಗೆದುಕೊಳ್ಳುವಾಗ ಎರಡು ಬಾರಿ ಯೋಚಿಸುವುದು ಒಳ್ಳೆಯದು.

ವೃಶ್ಚಿಕ ರಾಶಿ (Scorpio)

ಅಕ್ಟೋಬರ್ ಹೊಸ ವಾರ ಕೆಲಸದಲ್ಲಿ ಪ್ರಗತಿಗೆ ಅನುಕೂಲಕರ ವಾತಾವರಣ ನಿರ್ಮಾಣ ಮಾಡುವುದು. ಪ್ರಮುಖ ವ್ಯಕ್ತಿಯ ಪರಿಚಯದಿಂದ ಹೊಸ ಅವಕಾಶಗಳು ಸಿಗುವುದು. ದೂರದ ಊರಿಗೆ ಪ್ರಯಾಣ ಬೆಳೆಸುವ ಸಾಧ್ಯತೆ ಇದೆ. ಮಾತನಾಡುವಾಗ ಪದಗಳ ಬಗ್ಗೆ ಎಚ್ಚರ ಇರಲಿ. ಅನಗತ್ಯ ವಾದಗಳಲ್ಲಿ ಭಾಗಿಯಾಗಬೇಡಿ. ಹಣಕಾಸಿನ ವಹಿವಾಟು ನಡೆಸುವಾಗ ಎಚ್ಚರ ಇರಲಿ.

ಧನು ರಾಶಿ (Sagittarius)

ಪ್ರಯಾಣದೊಂದಿಗೆ ಹೊಸ ವಾರ ಆರಂಭವಾಗುವುದು. ವ್ಯವಹಾರ ವಿಸ್ತರಣೆಗೆ ಅವಕಾಶ ಸಿಗುವುದು. ಹೊಸ ಕೆಲಸಕ್ಕೆ ಸೇರಬಹುದು. ಆರ್ಥಿಕ ಸ್ಥಿತಿ ಉತ್ತಮವಾಗಿರುವುದು. ಪ್ರಯಾಣ ಅಥವಾ ಇತರ ಕಾರಣಗಳಿಂದ ಖರ್ಚು ಹೆಚ್ಚಾಗಬಹುದು. ಕುಟುಂಬ ಸದಸ್ಯರು ನಿಮ್ಮ ನಿರ್ಧಾರ ಬೆಂಬಲಿಸುತ್ತಾರೆ. ಮನಸ್ಸಿನ ಹಳೆಯ ಆಸೆ ಈಡೇರುವುದು.

ಹೊಸ ವಾರ ಕಠಿಣ ಪರಿಶ್ರಮದ ಫಲ ಸಿಗುವುದು. ಕೆಲಸದ ಒತ್ತಡ ಕಡಿಮೆಯಾಗುವುದು. ಆದಾಯ ಹೆಚ್ಚಾಗುವುದು. ಕೆಲವು ಪ್ರಮುಖ ಆರ್ಥಿಕ ನಿರ್ಧಾರ ತೆಗೆದುಕೊಳ್ಳಬಹುದು. ದೂರ ಪ್ರಯಾಣವನ್ನು ಯೋಜಿಸಬಹುದು. ಕೆಲಸ ಬದಲಾಯಿಸುವ ಬಗ್ಗೆ ಯೋಚಿಸಬಹುದು. ಪ್ರಮುಖ ನಿರ್ಧಾರ ತೆಗೆದುಕೊಳ್ಳುವ ಬಗ್ಗೆ ಆತುರ ಬೇಡ.

ನಿಂತು ಹೋಗಿದ್ದ ಕೆಲಸ ಪೂರ್ವಾವಾಗುವುದು. ಈ ವಾರ ಅನುಕೂಲಕರವಾಗಿರುವುದು. ಕೆಲಸದಲ್ಲಿ ಸ್ಥಿರತೆ ಇರುವುದು. ಕೈಯ್ಯಲ್ಲಿ ಹಣ ಉಳಿಯುವುದು. ಆದರೂ ಅನಗತ್ಯ ಖರ್ಚು ಮಾಡದಿರುವುದೇ ಒಳ್ಳೆಯದು. ಸ್ನೇಹಿತ ಅಥವಾ ಸಹೋದ್ಯೋಗಿಯ ಸಹಾಯದಿಂದ ಕೆಲಸದಲ್ಲಿ ಸಮಸ್ಯೆ ಬಗೆಹರಿಯುವುದು. ಕುಟುಂಬ ವಾತಾವರಣ ಸಾಮಾನ್ಯವಾಗಿರುವುದು.

ಕೆಲಸದಲ್ಲಿನ ಅಡೆತಡೆ ನಿವಾರಣೆಯಾಗುವುದು. ಹಣಕಾಸಿನ ಸ್ಥಿತಿ ಸುಧಾರಣೆಯಾಗುವ ಸಾಧ್ಯತೆ ಇದೆ. ಸಂಗಾತಿಯೊಂದಿಗಿನ ಮನಸ್ತಾಪವನ್ನು ಮಾತುಕತೆ ಮೂಲಕ ಬಗೆಹರಿಸಿಕೊಳ್ಳಬಹುದು. ನಿಮ್ಮ ಮಾತನ್ನು ಕೇಳಲೇ ಬೇಕು ಎನ್ನುವ ಒತ್ತಡವನ್ನು ಯಾರ ಮೇಲೂ ಹೇರಬೇಡಿ.

horoscope ಭವಿಷ್ಯ ರಾಶಿ ಭವಿಷ್ಯ

horoscope ಭವಿಷ್ಯ ರಾಶಿ ಭವಿಷ್ಯ

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ