Live: ಎಸ್‌ಐಆರ್ ಬೃಹತ್ ಪ್ರತಿಭಟನೆ: ಜನತಾ ನ್ಯಾಯಾಲಯಕ್ಕೆ ಸಾವಿರಾರು ಜನ

Live: ಎಸ್‌ಐಆರ್ ಬೃಹತ್ ಪ್ರತಿಭಟನೆ: ಜನತಾ ನ್ಯಾಯಾಲಯಕ್ಕೆ ಸಾವಿರಾರು ಜನ

Live: ಎಸ್‌ಐಆರ್ ಬೃಹತ್ ಪ್ರತಿಭಟನೆ: ಜನತಾ ನ್ಯಾಯಾಲಯಕ್ಕೆ ಸಾವಿರಾರು ಜನ

ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯಡಿ ಸಂತ್ರಸ್ತರಾದವರಿಗಾಗಿ ಸ್ವಾತಂತ್ರ್ಯ ಉದ್ಯಾನದಲ್ಲಿ ಇಂದು (ಅಕ್ಟೋಬರ್ 8, ಗುರುವಾರ) ಜನತಾ ನ್ಯಾಯಾಲಯ ಹಾಗೂ ಬೃಹತ್ ಪ್ರತಿಭಟನೆ ನಡೆಯುತ್ತಿದೆ.

ಎಸ್‌ಐಆರ್ ವಿರೋಧಿ ಜಾತ್ಯತೀತ ಪಕ್ಷಗಳು ಮತ್ತು ಜನಪರ ಸಂಘಟನೆಗಳ ಒಕ್ಕೂಟವು ಆಯೋಜಿಸಿರುವ ರಾಜ್ಯಮಟ್ಟದ ಜನತಾ ನ್ಯಾಯಾಲಯದಲ್ಲಿ ಸುಪ್ರೀಂ ಕೋರ್ಟ್‌ನ ಮೂವರು ನಿವೃತ್ತ ನ್ಯಾಯಮೂರ್ತಿಗಳು ಸಂತ್ರಸ್ತರ ಸಮಸ್ಯೆಯನ್ನು ಆಲಿಸಲಿದ್ದಾರೆ.

ಸಾಹಿತಿ ದೇವನೂರ ಮಹಾದೇವ, ನಟ ಪ್ರಕಾಶ್‌ ರಾಜ್, ಕಾಕ್ರೋಚ್‌ ಜನತಾ ಪಾರ್ಟಿ(ಸಿಜೆಪಿ) ಮುಖಂಡರಾದ ಅಭಿಜಿತ್‌ ದೀಪ್ಕೆ, ಸೌರವ್ ದಾಸ್‌, ಅಶುತೋಷ್‌ ರಾಂಕಾ, ಯೂಟ್ಯೂಬರ್‌ ಧ್ರುವ ರಾಠಿ, ಆರ್ಥಿಕ ತಜ್ಞ ಪರಕಾಲ ಪ್ರಭಾಕರ್‌ ಸೇರಿ ಹಲವು ಚಿಂತಕರು, ಕಲಾವಿದರು, ಸಾಹಿತಿಗಳು ಪಾಲ್ಗೊಳ್ಳಲಿದ್ದಾರೆ.

ಮೊಳಗಿದ ಪ್ರತಿಭಟನೆಯ ಹಾಡುಗಳು: ಜನತಾ ನ್ಯಾಯಾಲಯಕ್ಕೆ ಸಾವಿರಾರು ಜನ

ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ವಿರೋಧಿ ಜಾತ್ಯತೀತ ಪಕ್ಷಗಳು ಮತ್ತು ಜನಪರ ಸಂಘಟನೆಗಳ ಒಕ್ಕೂಟವು ಸ್ವಾತಂತ್ರ್ಯ ಉದ್ಯಾನದಲ್ಲಿ ಆಯೋಜಿಸಿರುವ ರಾಜ್ಯಮಟ್ಟದ ಜನತಾ ನ್ಯಾಯಾಲಯ ಮತ್ತು ಪ್ರತಿಭಟನೆ ವೇದಿಕೆಯಲ್ಲಿ ಪ್ರತಿಭಟನಾ ಗೀತೆಗಳು ಮೊಳಗುತ್ತಿವೆ.

ಎಸ್‌ಐಆರ್ ಪ್ರಕ್ರಿಯೆಯಡಿ ಸಂತ್ರಸ್ತರಾದವರಿಗಾಗಿ ಜನತಾ ನ್ಯಾಯಾಲಯ ಮತ್ತು ಪ್ರತಿಭಟನೆ ನಡೆಯುತ್ತಿದೆ.

ಒಕ್ಕೂಟದ ಮುಖಂಡರು ವೇದಿಕೆ ಏರುತ್ತಿದ್ದಾರೆ. ರಾಜ್ಯದ ಎಲ್ಲ ಕಡೆಗಳಿಂದಲೂ ಕಾರ್ಯಕರ್ತರು ಬರುತ್ತಿದ್ದು, ಸಭಾಂಗಣ ಬಹುತೇಕ ಭರ್ತಿಯಾಗಿದೆ.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ