KSET ಹಾಲ್ ಟಿಕೆಟ್ ಬಿಡುಗಡೆ, ನೇರ ಲಿಂಕ್ ಮೂಲಕ ಹೀಗೆ ಡೌನ್ಲೋಡ್ ಮಾಡಿ..
ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (KEA) ಕರ್ನಾಟಕ ರಾಜ್ಯ ಅರ್ಹತಾ ಪರೀಕ್ಷೆ (KSET) 2026ರ ಹಾಲ್ಟಿಕೆಟ್ ಅನ್ನು ಬಿಡುಗಡೆ ಮಾಡಿದೆ. ಅಭ್ಯರ್ಥಿಗಳು ಅಧಿಕೃತ ವೆಬ್ಸೈಟ್ cetonline.karnataka.gov.in ಮೂಲಕ ಪ್ರವೇಶ ಪತ್ರವನ್ನು ಡೌನ್ಲೋಡ್ ಮಾಡಿಕೊಳ್ಳಬಹುದು.
ಅಕ್ಟೋಬರ್ 11ರಂದು ಪರೀಕ್ಷೆ
ಅಕ್ಟೋಬರ್ 11ರಂದು ರಾಜ್ಯದ ವಿವಿಧ ಪರೀಕ್ಷಾ ಕೇಂದ್ರಗಳಲ್ಲಿ KSET–2026ರ ಪರೀಕ್ಷೆ ನಡೆಯಲಿದೆ. ಆಫ್ಲೈನ್ (OMR) ಮಾದರಿಯಲ್ಲಿ ಬೆಳಿಗ್ಗೆ 10ರಿಂದ ಮಧ್ಯಾಹ್ನ 1ರವರೆಗೆ ಒಂದೇ ಅವಧಿಯಲ್ಲಿ ಎರಡೂ ಪತ್ರಿಕೆಗಳ ಪರೀಕ್ಷೆ ನಡೆಯಲಿದೆ. ಒಟ್ಟು 37 ವಿಷಯಗಳಿಗೆ ಪರೀಕ್ಷೆ ನಡೆಯಲಿದೆ.
KSET ಹಾಲ್ ಟಿಕೆಟ್ ಡೌನ್ಲೋಡ್ ಮಾಡುವುದು ಹೇಗೆ?
ಅಧಿಕೃತ KEA ವೆಬ್ಸೈಟ್ cetonline.karnataka.gov.in ತೆರೆಯಿರಿ.
KSET 2026 ಹಾಲ್ ಟಿಕೆಟ್/ಅಡ್ಮಿಟ್ ಕಾರ್ಡ್ ಲಿಂಕ್ ಆಯ್ಕೆ ಮಾಡಿ.
ಅಭ್ಯರ್ಥಿ ಲಾಗಿನ್ ಪುಟದಲ್ಲಿ ಅಗತ್ಯವಿರುವ ವಿವರಗಳನ್ನು ನಮೂದಿಸಿ.
ಲಾಗಿನ್ ಮಾಡಿದ ಬಳಿಕ KSET ಹಾಲ್ಟಿಕೆಟ್ ಸ್ಕ್ರೀನ್ ಮೇಲೆ ಕಾಣಿಸುತ್ತದೆ.
ವಿವರಗಳನ್ನು ಪರಿಶೀಲಿಸಿ PDF ಡೌನ್ಲೋಡ್ ಮಾಡಿಕೊಳ್ಳಿ.
ಹಾಲ್ಟಿಕೆಟ್ನ ಪ್ರಿಂಟ್ ಔಟ್ ತೆಗೆದುಕೊಂಡು ಸುರಕ್ಷಿತವಾಗಿ ಇಟ್ಟುಕೊಳ್ಳಿ.

ಹಾಲ್ಟಿಕೆಟ್ನಲ್ಲಿ ಏನಿರುತ್ತದೆ?
ಪ್ರವೇಶ ಪತ್ರದಲ್ಲಿ ಅಭ್ಯರ್ಥಿಯ ಹೆಸರು, ರೋಲ್ ಸಂಖ್ಯೆ, ಫೋಟೊ, ಸಹಿ, ಪರೀಕ್ಷಾ ದಿನಾಂಕ, ಸಮಯ, ಪರೀಕ್ಷಾ ಕೇಂದ್ರದ ಹೆಸರು ಮತ್ತು ವಿಳಾಸ ಸೇರಿದಂತೆ ಪ್ರಮುಖ ಮಾಹಿತಿಗಳು ಇರುತ್ತದೆ. ಯಾವುದೇ ತಪ್ಪು ಕಂಡುಬಂದರೆ ಪರೀಕ್ಷಾ ಪ್ರಾಧಿಕಾರದ ಗಮನಕ್ಕೆ ತಕ್ಷಣ ತರಬೇಕು.
ಪರೀಕ್ಷೆಗೆ ತೆರಳುವಾಗ ಗಮನಿಸಬೇಕಾದ ಅಂಶ
ಅಭ್ಯರ್ಥಿಗಳು ಹಾಲ್ಟಿಕೆಟ್ ಹಾಗೂ ಸರ್ಕಾರವು ಮಾನ್ಯ ಮಾಡಿದ ಗುರುತಿನ ಚೀಟಿಯನ್ನು ಕಡ್ಡಾಯವಾಗಿ ತೆಗೆದುಕೊಂಡು ಹೋಗಬೇಕು. ಮೊಬೈಲ್ ಫೋನ್, ಸ್ಮಾರ್ಟ್ವಾಚ್, ಬ್ಲೂಟೂತ್ ಸೇರಿದಂತೆ ಎಲೆಕ್ಟ್ರಾನಿಕ್ ಸಾಧನಗಳನ್ನು ಪರೀಕ್ಷಾ ಕೇಂದ್ರಕ್ಕೆ ತೆಗೆದುಕೊಂಡು ಹೋಗುವಂತಿಲ್ಲ. ಪರೀಕ್ಷಾ ಕೇಂದ್ರಕ್ಕೆ ಪರೀಕ್ಷೆ ಆರಂಭಕ್ಕೆ ಮುಂಚಿತವಾಗಿ ತಲುಪುವುದು ಸೂಕ್ತ.
ಅಧಿಕೃತ ವೆಬ್ಸೈಟ್: cetonline.karnataka.gov.in