ಲಕ್ಷ್ಮೇಶ್ವರ ಪುರಸಭೆ: ಶಿಥಿಲಗೊಂಡ ಉಮಾ ವಿದ್ಯಾಲಯ ಕಟ್ಟಡ

ಲಕ್ಷ್ಮೇಶ್ವರ ಪುರಸಭೆ: ಶಿಥಿಲಗೊಂಡ ಉಮಾ ವಿದ್ಯಾಲಯ ಕಟ್ಟಡ

ಲಕ್ಷ್ಮೇಶ್ವರ ಪುರಸಭೆ: ಶಿಥಿಲಗೊಂಡ ಉಮಾ ವಿದ್ಯಾಲಯ ಕಟ್ಟಡ

ಲಕ್ಷ್ಮೇಶ್ವರ: ಶತಮಾನೋತ್ಸವದ ಸಂಭ್ರಮದಲ್ಲಿರುವ ಪಟ್ಟಣದ ಪುರಸಭೆ ಉಮಾ ವಿದ್ಯಾಲಯ ಪ್ರೌಢಶಾಲೆಯ ಕಟ್ಟಡ ಶಿಥಿಲಗೊಂಡಿದೆ.

ಕಟ್ಟಡದ ಗೋಡೆಗಳು ಸುಣ್ಣಬಣ್ಣ ಕಂಡಿಲ್ಲ. ತರಗತಿಗಳು ಗಬ್ಬು ನಾರುತ್ತಿವೆ. ಕಿಟಕಿ ಬಾಗಿಲುಗಳು ಮುರಿದು ಹೋಗಿವೆ. ಚಾವಣಿ ಅಲ್ಲಲ್ಲಿ ಕಿತ್ತು ಬೀಳುತ್ತಿದೆ. ಆದರೂ ಸಂಬಂಧಿಸಿದ ಅಧಿಕಾರಿಗಳು ಶಾಲೆಯ ದುರಸ್ತಿಗೆ ಮುಂದಾಗದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

1925ರಲ್ಲಿ ಆರಂಭಗೊಂಡ ಶಾಲೆ ಇದುವರೆಗೆ ಸಾವಿರಾರು ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಿದೆ. ಪ್ರೌಢಶಾಲೆ ಹಾಗೂ ಪುರಸಭೆ ಪದವಿಪೂರ್ವ ಕಾಲೇಜು ಒಂದೇ ಕಟ್ಟಡದಲ್ಲಿ ನಡೆಯುತ್ತವೆ. ಶಾಲೆಯ ಕಚೇರಿ ಎದುರಿನ ಚಾವಣಿ ಹಾಗೂ ಪಿಯು ತರಗತಿ ಮೇಲ್ಭಾಗದ ಸಿಮೆಂಟ್ ಮುರಿದು ಬೀಳುತ್ತಲೇ ಇದೆ. ಇದರಿಂದ ವಿದ್ಯಾರ್ಥಿಗಳಿಗೆ ಅಪಾಯ ತಪ್ಪಿದ್ದಲ್ಲ. ಇನ್ನಾದರೂ ಅಧಿಕಾರಿಗಳು ಕ್ರಮ ವಹಿಸಬೇಕು ಎಂದು ಹಳೇ ವಿದ್ಯಾರ್ಥಿಗಳಾದ ಮಾಬಳೇಶ ಮೆಡ್ಲೇರಿ, ಈರಣ್ಣ ಯರ್ಲಗಟ್ಟಿ ಆಕ್ರೋಶ ವ್ಯಕ್ತಪಡಿಸಿದರು.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ