ವಾಲಿಬಾಲ್ ಪಂದ್ಯಾವಳಿ; ವಿಜೇತ ತಂಡಗಳಿಗೆ ಬಹುಮಾನ ವಿತರಣೆ

ವಾಲಿಬಾಲ್ ಪಂದ್ಯಾವಳಿ; ವಿಜೇತ ತಂಡಗಳಿಗೆ ಬಹುಮಾನ ವಿತರಣೆ

ವಾಲಿಬಾಲ್ ಪಂದ್ಯಾವಳಿ; ವಿಜೇತ ತಂಡಗಳಿಗೆ ಬಹುಮಾನ ವಿತರಣೆ

ಬೇತಮಂಗಲ: ವೆಂಗಸಂದ್ರ ಗ್ರಾ.ಪಂ.ವ್ಯಾಪ್ತಿಯ ಗೋಪೇನಹಳ್ಳಿ ಗ್ರಾಮದಲ್ಲಿ ದಿ.ಅನಂತ್ ಅವರ ಸ್ಮರಣಾರ್ಥ ಈಚೆಗೆ ವಾಲಿಬಾಲ್ ಪಂದ್ಯಾವಳಿ ನಡೆಯಿತು

ಎರಡು ದಿನ ನಡೆದ ಪಂದ್ಯಾವಳಿಯಲ್ಲಿ ಕೆಜಿಎಫ್ ತಾಲ್ಲೂಕಿನ ಸುತ್ತಮುತ್ತಲಿನ ಗ್ರಾಮದ ಬಾಲಕರು ಹಾಗೂ ಬಾಲಕಿಯರ 14 ತಂಡಗಳು ಭಾಗವಹಿಸಿದ್ದವು.

ಪಂದ್ಯಾವಳಿಯ ಸಮಾರೋಪ ಸಮಾರಂಭದಲ್ಲಿ ವಿಜೇತ ತಂಡಗಳಿಗೆ ಬಹುಮಾನ ಹಾಗೂ ಪ್ರಶಸ್ತಿ ಪತ್ರ ವಿತರಿಸಲಾಯಿತು. ಬಾಲಕಿಯರ ವಿಭಾಗದಲ್ಲಿ ಬೇತಮಂಗಲದ ಆರ್‌ಎಚ್‌ಎಸ್ ತಂಡ ಪ್ರಥಮ ಬಹುಮಾನ ಪಡೆದರೆ, ಗೋಪೇನಹಳ್ಳಿ ಬಾಲಕಿಯರ ತಂಡ ದ್ವಿತೀಯ ಬಹುಮಾನ ಪಡೆಯಿತು.

ಬಾಲಕರ ವಿಭಾಗದಲ್ಲಿ ಕ್ಯಾಸಂಬಳ್ಳಿ ತಂಡ ಪ್ರಥಮ ಸ್ಥಾನ ಗಳಿಸಿದರೆ, ಕೊಡಿಗೇನಹಳ್ಳಿ ಯುವಕರ ತಂಡ ದ್ವಿತೀಯ ಸ್ಥಾನ ಪಡೆಯಿತು.

ಪಂದ್ಯಾವಳಿಯ ಆಯೋಜಕ ಕಿರಣ್ ಹಾಗೂ ಅವರ ತಾಯಿ ಸುಜಾತಮ್ಮ, ಶಿಕ್ಷಕರಾದ ಶಂಕರ್, ರಂಗಪ್ಪ, ಅಪೋಜಿಗೌಡ, ಶ್ರೀನಿವಾಸ್, ಫಯಾಜ್, ಪ್ರಭಾಕರ್ ಸೇರಿದಂತೆ ಗ್ರಾಮಸ್ಥರು ಹಾಗೂ ಕ್ರೀಡಾ ಅಭಿಮಾನಿಗಳು ಭಾಗವಹಿಸಿದ್ದರು.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ