ಕ್ಷುಲ್ಲಕ ಕಾರಣಕ್ಕೆ ಯುವಕರ ಜಗಳ: ಮಾಡಿಯಾಳ ಗ್ರಾ.ಪಂ ಪಂಪ್ ಆಪರೇಟರ್ ಕೊಲೆ

ಕ್ಷುಲ್ಲಕ ಕಾರಣಕ್ಕೆ ಯುವಕರ ಜಗಳ: ಮಾಡಿಯಾಳ ಗ್ರಾ.ಪಂ ಪಂಪ್ ಆಪರೇಟರ್ ಕೊಲೆ

ಕ್ಷುಲ್ಲಕ ಕಾರಣಕ್ಕೆ ಯುವಕರ ಜಗಳ: ಮಾಡಿಯಾಳ ಗ್ರಾ.ಪಂ ಪಂಪ್ ಆಪರೇಟರ್ ಕೊಲೆ

ಆಳಂದ (ಕಲಬುರಗಿ ‌ಜಿಲ್ಲೆ): ತಾಲ್ಲೂಕಿನ ಮಾಡಿಯಾಳ ಗ್ರಾಮ ಪಂಚಾಯಿತಿಯ ಪಂಪ್ ಆಪರೇಟರ್ ಸಂತೋಷ ಹಣಮಂತ ನಿಂಬಾಳ (37) ಅವರನ್ನು ಭಾನುವಾರ ಚಾಕುವಿನಿಂದ ಇರಿದು ಕೊಲೆ ಮಾಡಲಾಗಿದೆ.

ಕೊಲೆಯಾದ ವ್ಯಕ್ತಿಗೆ ಪತ್ನಿ, ಇಬ್ಬರು ಪುತ್ರರು, ಪುತ್ರಿಯರು ಇದ್ದಾರೆ.

ಸಹೋದರ ಸಂಬಂಧಿ ಶ್ರೀಧರ ನಿಂಬಾಳ ಅವರೊಂದಿಗೆ ಗ್ರಾಮದ ಮೂವರು ಯುವಕರ ನಡುವೆ ಕೆಲವು ದಿನಗಳ ಹಿಂದೆ ಜಗಳ ನಡೆದಿತ್ತು. ಈ ಸಂಬಂಧ ಯುವಕರ ನಡುವೆ ವೈಷಮ್ಯ ಬೆಳೆದು ಇದಕ್ಕೆ ಸೇಡು ತೀರಿಸಿಕೊಳ್ಳಲು ಮಂಜುನಾಥ, ಕಲ್ಲಪ್ಪ ಮತ್ತಿತರರು ಕಲಬುರಗಿಯಿಂದ ಭೀಮಾಶಂಕರ್, ರಾಜಶೇಖರ ಸೇರಿದಂತೆ 8ಕ್ಕೂ ಹೆಚ್ಚು ಜನರು ಮನೆ ಮುಂದೆ ಬಂದು ಗಲಾಟೆ ಆರಂಭಿಸಿದ್ದಾರೆ. ಈ ಮಧ್ಯ ಮನೆಯಿಂದ ಹೊರ ಬಂದ ಸಂತೋಷ ತಮ್ಮ ಸಹೋದರ ಪರವಾಗಿ ವಿವಾದ ಬಗೆಹರಿಸಲು ಹೋದಾಗ ಗುಂಪಿನಲ್ಲಿ ಇದ್ದ ಯುವಕರು ಚಾಕು ಇರಿದಿದ್ದಾರೆ ಎಂದು ಪೊಲೀಸ್ ಮೂಲಗಳು‌ ತಿಳಿಸಿವೆ.

ನಿಂಬರ್ಗಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪಿಎಸ್ಐ ಸಂಗಮೇಶ ಅವರ ನೇತೃತ್ವದಲ್ಲಿ ಮಾಡಿಯಾಳ ಗ್ರಾಮದ ಐದು ಜನ ಯುವಕರನ್ನು ವಶಕ್ಕೆ ಪಡೆದು ವಿಚಾರಣೆ ಮುಂದುವರಿಸಿದ್ದಾರೆ.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ