​ಸಕಾಲ ಸೇವೆ ವಿಳಂಬಕ್ಕೆ ಅಧಿಕಾರಿಗಳಿಗೆ ದಂಡ; ಹುಸಿ ದೂರು ನೀಡುವವರ ವಿರುದ್ಧ ಕ್ರಮ

​ಸಕಾಲ ಸೇವೆ ವಿಳಂಬಕ್ಕೆ ಅಧಿಕಾರಿಗಳಿಗೆ ದಂಡ; ಹುಸಿ ದೂರು ನೀಡುವವರ ವಿರುದ್ಧ ಕ್ರಮ

​ಸಕಾಲ ಸೇವೆ ವಿಳಂಬಕ್ಕೆ ಅಧಿಕಾರಿಗಳಿಗೆ ದಂಡ; ಹುಸಿ ದೂರು ನೀಡುವವರ ವಿರುದ್ಧ ಕ್ರಮ

​ಬೆಂಗಳೂರು: ರಾಜ್ಯದಲ್ಲಿ ನಾಗರಿಕರಿಗೆ ಸಕಾಲದಲ್ಲಿ ಸರ್ಕಾರಿ ಸೇವೆಗಳನ್ನು ತಲುಪಿಸುವ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರವು ಮಹತ್ವದ ಹೆಜ್ಜೆ ಇರಿಸಿದೆ. ʼಕರ್ನಾಟಕ ಸಕಾಲ ಸೇವೆಗಳ (ತಿದ್ದುಪಡಿ) ಅಧಿನಿಯಮ, 2026ʼ ಕಾಯ್ದೆಯಡಿ, ಸೇವೆಗಳನ್ನು ವಿಳಂಬಗೊಳಿಸುವ ಅಧಿಕಾರಿಗಳಿಗೆ ವಿಧಿಸುವ ಪರಿಹಾರ ವೆಚ್ಚ ಹಾಗೂ ದುರುದ್ದೇಶಪೂರಿತ ದೂರು ಸಲ್ಲಿಸುವ ನಾಗರಿಕರಿಗೆ ವಿಧಿಸುವ ದಂಡದ ಮೊತ್ತವನ್ನು ಪರಿಷ್ಕರಿಸಿ ಸರ್ಕಾರ ಅಧಿಸೂಚನೆ ಹೊರಡಿಸಿದೆ. ಈ ನೂತನ ಪರಿಷ್ಕೃತ ದರಗಳು ತಕ್ಷಣದಿಂದಲೇ ಜಾರಿಗೆ ಬಂದಿವೆ.

​ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ₹1,500 ವರೆಗೆ ದಂಡ

ಸಾರ್ವಜನಿಕರಿಗೆ ನಿಗದಿತ ಸಮಯದೊಳಗೆ ಸೇವೆಗಳನ್ನು ಒದಗಿಸಲು ಅಥವಾ ಮೇಲ್ಮನವಿಗಳನ್ನು ವಿಲೇವಾರಿ ಮಾಡಲು ವಿಫಲರಾಗುವ ಸಕ್ಷಮ ಪ್ರಾಧಿಕಾರಿ, ಹೆಸರಿಸಲಾದ ಅಧಿಕಾರಿ ಅಥವಾ ಮೇಲ್ಮನವಿ ಪ್ರಾಧಿಕಾರದ ಅಧಿಕಾರಿಗಳಿಂದ ಈ ಪರಿಹಾರ ವೆಚ್ಚವನ್ನು ವಸೂಲಿ ಮಾಡಲಾಗುತ್ತದೆ.

ವಿಳಂಬದ ಅವಧಿಗೆ ಅನುಗುಣವಾಗಿ ದಂಡದ ದರಗಳ ಪರಿಷ್ಕರಣೆ

​ಮೊದಲ 1 ರಿಂದ 5 ದಿನಗಳ ವಿಳಂಬಕ್ಕೆ ದಿನಕ್ಕೆ ₹ 20ರಂತೆ ಗರಿಷ್ಠ ₹100 ಪರಿಹಾರ.

​6 ರಿಂದ 10 ದಿನಗಳ ವಿಳಂಬಕ್ಕೆ ದಿನಕ್ಕೆ ₹ 40ರಂತೆ ಗರಿಷ್ಠ ₹300 ಪರಿಹಾರ.

​11 ರಿಂದ 15 ದಿನಗಳ ವಿಳಂಬಕ್ಕೆ ದಿನಕ್ಕೆ ₹ 60ರಂತೆ ಗರಿಷ್ಠ ₹ 600 ಪರಿಹಾರ.

​16 ರಿಂದ 20 ದಿನಗಳ ವಿಳಂಬಕ್ಕೆ ದಿನಕ್ಕೆ ₹ 80ರಂತೆ ಗರಿಷ್ಠ ₹ 1,000 ಪರಿಹಾರ.

​21 ರಿಂದ 25 ದಿನಗಳ ವಿಳಂಬಕ್ಕೆ ದಿನಕ್ಕೆ ₹100ರಂತೆ ಒಟ್ಟಾರೆಯಾಗಿ ಗರಿಷ್ಠ ₹1,500 ಪರಿಹಾರ ವೆಚ್ಚವನ್ನು ನಿಗದಿಪಡಿಸಲಾಗಿದೆ.

​ಅಲ್ಲದೆ, ಸೇವೆಗಳನ್ನು ಸರಿಯಾಗಿ ನೀಡದೆ ಲೋಪದೋಷಗಳಿದ್ದರೆ ಅಥವಾ ಅರ್ಜಿಗಳನ್ನು ಸೂಕ್ತ ಕಾರಣವಿಲ್ಲದೆ ತಪ್ಪಾಗಿ ತಿರಸ್ಕರಿಸಿದ್ದರೆ (Deficient Services/Wrongful Rejections), ನಾಗರಿಕರಿಗೆ ಗರಿಷ್ಠ ₹ 1,500 ಪರಿಹಾರವನ್ನು ಸಂಬಂಧಪಟ್ಟ ಅಧಿಕಾರಿಯಿಂದ ವಸೂಲಿ ಮಾಡಿ ನೀಡಲಾಗುತ್ತದೆ.

​ಹುಸಿ ಹಾಗೂ ಕಿರುಕುಳಕಾರಿ ದೂರು ನೀಡುವ ನಾಗರಿಕರಿಗೆ ದಂಡ

ಸರ್ಕಾರಿ ನೌಕರರಿಗೆ ಕೇಡು ಉಂಟುಮಾಡುವ, ಕಿರುಕುಳ ನೀಡುವ, ಬೆದರಿಸುವ ಅಥವಾ ದುರುದ್ದೇಶದಿಂದ ಸುಳ್ಳು ಕುಂದುಕೊರತೆ ದೂರುಗಳನ್ನು ಸಲ್ಲಿಸುವ ನಾಗರಿಕರ ವಿರುದ್ಧವೂ ಕಠಿಣ ಕ್ರಮ ಕೈಗೊಳ್ಳಲು ಕಾಯ್ದೆಯಲ್ಲಿ ಅವಕಾಶ ಕಲ್ಪಿಸಲಾಗಿದೆ.

​ತನಿಖೆಯಲ್ಲಿ ದೂರು ದುರುದ್ದೇಶಪೂರಿತ ಎಂದು ಸಾಬೀತಾದರೆ, ಅಂತಹ ನಾಗರಿಕರಿಗೆ ಪ್ರತಿ ಅರ್ಜಿಗೆ ₹ 1,500 ದಂಡ ವಿಧಿಸಲಾಗುತ್ತದೆ. ಇದೇ ತಪ್ಪನ್ನು ಪುನರಾವರ್ತಿಸಿದಲ್ಲಿ ಮತ್ತೆ ಪ್ರತಿ ಅರ್ಜಿಗೆ ₹ 1,500 ದಂಡ ವಿಧಿಸಲಾಗುತ್ತದೆ. ನಾಗರಿಕರಿಗೆ ತಮ್ಮ ಅಹವಾಲು ಹೇಳಿಕೊಳ್ಳಲು ಸೂಕ್ತ ಅವಕಾಶ ನೀಡಿದ ನಂತರವೇ ಈ ಆದೇಶ ಹೊರಡಿಸಲಾಗುತ್ತದೆ ಹಾಗೂ ಈ ದಂಡದ ಮೊತ್ತವನ್ನು ಭೂ ಕಂದಾಯ ಹಿಂಬಾಕಿಯಂತೆ ವಸೂಲಿ ಮಾಡಲಾಗುತ್ತದೆ.

ಸಾರ್ವಜನಿಕ ಸೇವೆಗಳ ವಿಲೇವಾರಿಯಲ್ಲಿ ಪಾರದರ್ಶಕತೆ ಮತ್ತು ಜವಾಬ್ದಾರಿಯನ್ನು ಹೆಚ್ಚಿಸುವುದು ಈ ತಿದ್ದುಪಡಿಯ ಮುಖ್ಯ ಉದ್ದೇಶವಾಗಿದೆ ಎಂದು ​ಸರ್ಕಾರದ ಪ್ರಧಾನ ಕಾರ್ಯದರ್ಶಿ ಹರ್ಷ ಗುಪ್ತಾ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ