
ಬಾಗೇಪಲ್ಲಿ: ಕೂಲಿ ಕೆಲಸಕ್ಕೆ ತೆರಳಿದ್ದ ಮಹಿಳೆ ಅನುಮಾನಾಸ್ಪದವಾಗಿ ಸಾವು
ಬಾಗೇಪಲ್ಲಿ: ತಾಲ್ಲೂಕಿನ ಚನ್ನರಾಯಪಲ್ಲಿಯಲ್ಲಿ ಶನಿವಾರ ಕೂಲಿ ಕೆಲಸಕ್ಕೆ ಹೋಗಿದ್ದ ಗೂಳೂರು ಹೋಬಳಿ ಚನ್ನರಾಯನಪಲ್ಲಿಯ ಲಕ್ಷ್ಮೀನಾರಾಯಣಮ್ಮ (52) ಅನುಮಾಸ್ಪದವಾಗಿ ಮೃತಪಟ್ಟಿದ್ದಾರೆ.
ಲಕ್ಷ್ಮೀನಾರಾಯಣಮ್ಮ ಚನ್ನರಾಯನಪಲ್ಲಿ ಬಳಿಯ ವೆಂಕಟರೆಡ್ಡಿ ಅವರ ಹೊಲದಲ್ಲಿ ಕೂಲಿ ಕೆಲಸಕ್ಕೆ ತೆರಳಿದ್ದರು. ಮಧ್ಯಾಹ್ನದ ವೇಳೆ ಮೃತದೇಹ ಪತ್ತೆ ಆಗಿದೆ.
ಲಕ್ಷ್ಮೀನಾರಾಯಣಮ್ಮ ಅವರ ಕತ್ತು ಮತ್ತು ಕಾಲುಗಳಲ್ಲಿ ಗಾಯಗಳಾಗಿದ್ದು, ಕೊಲೆ ಮಾಡಲಾಗಿದೆ ಎಂದು ಆರೋಪಿಸಿ ಸಂಬಂಧಿಕರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಕೊಲೆ ಆರೋಪಿಗಳನ್ನು ವಿಚಾರಣೆ ನಡೆಸಿ, ಕಾನೂನುಕ್ರಮ ಜರುಗಿಸಬೇಕು ಎಂದು ಮೃತರ ಕುಟುಂಬಸ್ಥರು ಠಾಣೆ ಮುಂದೆ ಜಮಾಯಿಸಿದರು. ಸಬ್‌ಇನ್‌ಸ್ಪೆಕ್ಟರ್ ಸುನೀಲ್‍ಕುಮಾರ್ ಮತ್ತು ಪೊಲೀಸರು ಮಧ್ಯಪ್ರವೇಶಿಸಿ ಜನರನ್ನು ಚದುರಿಸಿದರು.