ಹೆಚ್ಚುತ್ತಿರುವ ವಿಭಕ್ತ ಕುಟುಂಬಗಳು: ಮುದುಕೇಶ್ವರ ಶಿವಾಚಾರ್ಯ ಸ್ವಾಮೀಜಿ ವಿಷಾದ

ಹೆಚ್ಚುತ್ತಿರುವ ವಿಭಕ್ತ ಕುಟುಂಬಗಳು: ಮುದುಕೇಶ್ವರ ಶಿವಾಚಾರ್ಯ ಸ್ವಾಮೀಜಿ ವಿಷಾದ

ಹೆಚ್ಚುತ್ತಿರುವ ವಿಭಕ್ತ ಕುಟುಂಬಗಳು: ಮುದುಕೇಶ್ವರ ಶಿವಾಚಾರ್ಯ ಸ್ವಾಮೀಜಿ ವಿಷಾದ

ಮುಂಡರಗಿ: ‘ಮಕ್ಕಳು ತಮ್ಮ ತಂದೆ, ತಾಯಿಗಳನ್ನು ಮುಪ್ಪಿನಲ್ಲಿ ತುಂಬಾ ಪ್ರೀತಿ ಹಾಗೂ ಗೌರವದಿಂದ ನೋಡಿಕೊಳ್ಳಬೇಕು. ಈಚೆಗೆ ಕುಟುಂಬಗಳು ಸಂಕುಚಿತಗೊಳ್ಳುತ್ತಿದ್ದು, ಮಕ್ಕಳು ತಮ್ಮ ತಂದೆ ತಾಯಂದಿರನ್ನು ವೃದ್ಧಾಶ್ರಮಕ್ಕೆ ಸೇರಿಸುತ್ತಿರುವುದು ದುರ್ದೈವದ ಸಂಗತಿ' ಎಂದು ಕಲಕೇರಿ-ವಿರುಪಾಪುರದ ಮುದುಕೇಶ್ವರ ಶಿವಾಚಾರ್ಯ ಸ್ವಾಮೀಜಿ ವಿಷಾದಿಸಿದರು.

ತಾಲ್ಲೂಕಿನ ಶಿಂಗಟಾಲೂರ ಗ್ರಾಮದಲ್ಲಿ ವೀರಭದ್ರೇಶ್ವರನ ಉತ್ಸವದ ಅಂಗವಾಗಿ ಶುಕ್ರವಾರ ರಾತ್ರಿ ಹಮ್ಮಿಕೊಂಡಿದ್ದ ಧರ್ಮಸಭೆಯ ಸಾನ್ನಿಧ್ಯ ವಹಿಸಿ‌‌ ಅವರು ಮಾತನಾಡಿದರು.

ತಂದೆ, ತಾಯಿ, ಗುರು, ಹಿರಿಯರ ಸೇವೆ ಮಾಡುವುದು ಭಗವಂತನ ಸೇವೆಗೆ ಸಮಾನವಾಗಿರುತ್ತದೆ. ಹೀಗಾಗಿ ಎಲ್ಲರೂ ಗುರು, ಹಿರಿಯರನ್ನು ಗೌರವಿಸಬೇಕು. ಆ ಮೂಲಕ ಮುಪ್ಪಿನಲ್ಲಿ ಅವರಿಗೆ ಆಸರೆಯಾಗಿರಬೇಕು ಎಂದು ಸಲಹೆ ನೀಡಿದರು.

ಪುರದ ಅಭಿನವ ಸಿದ್ಧವೀರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ದಯೆ, ಕರುಣೆ, ಪರೋಪಕಾರ ಮೊದಲಾದವುಗಳು ನಮಗೆ ಸದಾ ಸತ್ಫಲಗಳನ್ನು ನೀಡುತ್ತವೆ. ಹೀಗಾಗಿ ನಾವು ನಿತ್ಯ‌ ವ್ಯರ್ಥವಾಗಿ ಕಾಲ ಹರಣ ಮಾಡದೆ ಸದಾಚಾರದಲ್ಲಿ ತೊಡಗಿಕೊಳ್ಳಬೇಕು ಎಂದು ತಿಳಿಸಿದರು.

ಅಭಿನವ ಮುದುಕೇಶ್ವರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಮಕ್ಕಳು ಇಂದು ಶಾಲೆಗಳಲ್ಲಿ ಕೇವಲ ಓದು, ಬರಹ ಕಲಿಯುತ್ತಿದ್ದಾರೆ. ಓದು, ಬರಹ ಜೊತೆಗೆ ಮನೆಯಲ್ಲಿ ತಂದೆ, ತಾಯಿಗಳು ಉತ್ತಮ ಸಂಸ್ಕಾರ ನೀಡಬೇಕು. ಆ ಮೂಲಕ ಅವರನ್ನು ದೇಶದ ಉತ್ತಮ ನಾಗರಿಕರನ್ನಾಗಿ ಮಾಡಬೇಕು ಎಂದು ತಿಳಿಸಿದರು.

ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎ.ಬಳಿಗೇರ ಉಪನ್ಯಾಸ ನೀಡಿದರು. ರಾಜೇಂದ್ರ‌ ಶೆಟ್ಟರ ಸರ್ವರನ್ನು ಸ್ವಾಗತಿಸಿದರು. ರುದ್ರಪ್ಪ ಹುಲವತ್ತಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಈಶಪ್ಪ ಶಟ್ಟರ, ಬಸವರಾಜ ಬಿಳಿಮಗ್ಗದ, ಮಂಜುನಾಥ ಮುಂಡವಾಡ, ಸುನೀಲ ನೀರಲಗಿ, ಗುಡದಪ್ಪ ಹೊನ್ನಾಯಕನಹಳ್ಳಿ, ಈರಪ್ಪ ಶಟ್ಟರ, ಗುಡಿದೀರಪ್ಪ ಶಟ್ಟರ, ಸುಭಾಷ ಬಾಗೋಡಿ, ವಿರುಪಾಕ್ಷಿ ಗುಡ್ಲಾನೂರ, ಗುಡದೀರಯ್ಯ‌ ನವಲಿಹಿರೇಮಠ, ವೀರಪ್ಪ ಮುಂಡವಾಡ, ವೀರನಗೌಡ ಪಾಟೀಲ, ವೀರಪ್ಪ ಕೆಲೂರ, ವಿ.ಎಸ್.ಮುಂಡವಾಡ ಭಾಗವಹಿಸಿದ್ದರು.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ