ದೀಪಾವಳಿಯಿಂದ ಈ ರಾಶಿಯವರಿಗೆ ಧನಲಕ್ಷ್ಮೀ ಯೋಗ : ಸಂಪತ್ತಿನ ಸುರಿ ಮಳೆ ಅದೃಷ್ಟವೋ ಅದೃಷ್ಟ

ದೀಪಾವಳಿಯಿಂದ ಈ ರಾಶಿಯವರಿಗೆ ಧನಲಕ್ಷ್ಮೀ ಯೋಗ : ಸಂಪತ್ತಿನ ಸುರಿ ಮಳೆ ಅದೃಷ್ಟವೋ ಅದೃಷ್ಟ

ದೀಪಾವಳಿಯಿಂದ ಈ ರಾಶಿಯವರಿಗೆ ಧನಲಕ್ಷ್ಮೀ ಯೋಗ : ಸಂಪತ್ತಿನ ಸುರಿ ಮಳೆ ಅದೃಷ್ಟವೋ ಅದೃಷ್ಟ

Deepavali Horoscope : ದೀಪಾವಳಿ ಹಬ್ಬದ ಕೆಲವೇ ದಿನಗಳಲ್ಲಿ ಅಂದರೆ ನವೆಂಬರ್ 13 ರ ರಾತ್ರಿ 9.22ಕ್ಕೆ ಬುಧ ತುಲಾ ರಾಶಿಯಲ್ಲಿ ತನ್ನ ಸಂಚಾರ ಪೂರ್ಣಗೊಳಿಸುತ್ತದೆ. ಅಲ್ಲಿವರೆಗೆ ಹಿಮ್ಮುಖ ಚಲನೆಯಲ್ಲಿರುವ ಬುಧ ಮತ್ತೆ ತನ್ನ ನೇರ ಸಂಚಾರ ಪ್ರಾರಂಭಿಸುತ್ತದೆ. ಅಕ್ಟೋಬರ್ 24 ರಿಂದ ಹಿಮ್ಮುಖನಾಗಿರುವ ಬುಧ ಈ ಹೊತ್ತಿನಲ್ಲಿ ನೇರ ಚಲನೆಗೆ ಮರಳುತ್ತಾನೆ. ಈ ಮೂಲಕ ತುಂಬಾ ಕೆಲಸ ಮತ್ತೆ ಚುರುಕು ಪಡೆಯುವುದು. ವ್ಯಾಪಾರದಲ್ಲಿ ಅಭಿವೃದ್ದಿಯಾಗುವುದು. ಈ ಬದಲಾವಣೆಯು ಎಂಟು ನಿರ್ದಿಷ್ಟ ರಾಶಿಯವರಿಗೆ ಅದೃಷ್ಟ ತರುವುದು. ಕೈ ತುಂಬಾ ಹಣ ಬರುವುದು. ವೃತ್ತಿಯಲ್ಲಿ ಪ್ರಗತಿಯಾಗುವುದು.

ದೀಪಾವಳಿ ನಂತರ ಈ ರಾಶಿಯವರಿಗೆ ಅದೃಷ್ಟ :

ಮೇಷ ರಾಶಿಯವರಿಗೆ ಈ ಅವಧಿ ಅದೃಷ್ಟದಿಂದ ಕೂಡಿರುವುದು. ಕಚೇರಿಯಲ್ಲಿ ನಿಮ್ಮ ಸಾಮರ್ಥ್ಯ ಸಾಬೀತು ಮಾಡುವುದಕ್ಕೆ ಇದು ಉತ್ತಮ ಸಮಯ. ಕೆಲಸದಲ್ಲಿ ಹೊಸ ಜವಾಬ್ದಾರಿ ಸಿಗಲಿದೆ. ಉದ್ಯಮಿಗಳಿಗೆ ಕೂಡಾ ಈ ಸಮಯ ಲಾಭದಾಯಕವಾಗಿರುವುದು. ತಮ್ಮ ಸಂಪರ್ಕಗಳ ಮೂಲಕ ಹೊಸ ಒಪ್ಪಂದಗಳಿಗೆ ಸಹಿ ಹಾಕುವ ಸಾಧ್ಯತೆ ಇದೆ.

ವೃಷಭ ರಾಶಿಯವರು, ಮಾಡಬೇಕೆಂದಿರುವ ಕೆಲಸವನ್ನು ಯಶಸ್ವಿಯಾಗಿ ಮಾಡಿ ಮುಗಿಸುವಿರಿ. ಮೇಲಧಿಕಾರಿಯೊಂದಿಗಿನ ಮಾತುಕತೆಯಿಂದ ಲಾಭವಾಗುವುದು. ನಿಮ್ಮ ಮಾತೇ ನಿಮಗೆ ವರವಾಗುವುದು. ನಿಮ್ಮ ಮಾತಿಗೆ ವಿಶೇಷ ಮನ್ನಣೆ ಸಿಗುವುದು. ಆದಾಯ ಮತ್ತು ಖರ್ಚಿನ ನಡುವೆ ಸಮತೋಲನ ಕಾಪಾಡಿಕೊಳ್ಳುವುದು ಬಹಳ ಮುಖ್ಯ.

ಬುಧ ಮಿಥುನ ರಾಶಿಯ ಅಧಿಪತಿ. ಹಾಗಾಗಿ ಈ ಗ್ರಹದ ನೇರ ಚಲನೆ ನಿಮಗೆ ಉತ್ತಮ ಫಲಿತಾಂಶ ನೀಡುವುದು. ನಿಮ್ಮ ಆಲೋಚನೆಯನ್ನು ಸ್ಪಷ್ಟವಾಗಿ ವ್ಯಕ್ತಪಡಿಸುವ ಮೂಲಕ ಎಲ್ಲರ ಗಮನ ಸೆಳೆಯುವಿರಿ. ಮಾಧ್ಯಮ ಮತ್ತು ಮಾರ್ಕೆಟಿಂಗ್ ಕ್ಷೇತ್ರದಲ್ಲಿ ಇರುವವರಿಗೆ ಈ ಅವಧಿ ಪ್ರಯೋಜನಕಾರಿಯಾಗಿರುವುದು.

ಕನ್ಯಾರಾಶಿಯವರ ಕೆಲಸದಲ್ಲಿ ಸುಧಾರಣೆ ಇರುವುದು. ಬಾಕಿ ಉಳಿದಿರುವ ಕೆಲಸ ಪೂರ್ಣವಾಗುವುದು. ಹಣದ ಸಮಸ್ಯೆ ನಿವಾರಣೆಯಾಗುವುದು. ಕೈ ಹಾಕಿದ ಕೆಲಸದಲ್ಲಿ ಯಶಸ್ಸು ಸಿಗುವುದು. ವ್ಯವಹಾರ ವಿಸ್ತರಿಸುವ ಅವಕಾಶ ಸಿಗುವುದು. ಹೊಸ ಗ್ರಾಹಕರನ್ನು ಆಕರ್ಷಿಸುವುದು ಸಾಧ್ಯವಾಗುತ್ತದೆ. ನಿಮ್ಮ ಪಾಲಿನ ಅತ್ಯಂತ ಅದೃಷ್ಟದ ಸಮಯ ಇದು.

ಜನರು ತಮ್ಮ ಕೌಶಲ್ಯ ಮತ್ತು ಕಠಿಣ ಪರಿಶ್ರಮಕ್ಕೆ ತಕ್ಕ ಫಲ ಪಡೆಯುವರು. ಇದು ವೃತ್ತಿಪರ (career) ಬೆಳವಣಿಗೆಗೆ ಕಾರಣವಾಗುತ್ತದೆ. ಉದ್ಯಮಿಗಳಿಗೂ ಈ ಸಮಯ ಅನುಕೂಲಕರವಾಗಿ ಇರುವುದು. ವ್ಯಾಪಾರ ವ್ಯವಹಾರದಲ್ಲಿ ಲಾಭವಾಗುವುದು. ಹೊಸ ಹೊಸ ಗ್ರಾಹಕರು ಹುಟ್ಟಿಕೊಳ್ಳುವರು.

ತುಲಾ ರಾಶಿಯಲ್ಲಿ ಬುಧ ತನ್ನ ನೇರ ಚಲನೆಯನ್ನು ಪ್ರಾರಂಭಿಸುತ್ತಿದ್ದಂತೆ, ನಿಮ್ಮ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯ ಸುಧಾರಿಸುತ್ತದೆ. ನಿಂತು ಹೋಗಿದ್ದ ಕೆಲಸ ಮತ್ತೆ ಚುರುಕು ಪಡೆಯುವುದು. ಎಲ್ಲಾ ಕೆಲಸಗಳಲ್ಲಿ ಯಶಸ್ಸು ಸಿಗುವುದು. ಹಣದ ಸಮಸ್ಯೆ ನಿವಾರಣೆಯಾಗುವುದು. ಕೈ ತುಂಬಾ ಹಣ ನಿಲ್ಲುವುದು. ಹೊಸ ಉದ್ಯೋಗಾವಕಾಶ ಸಿಗುವುದು.

ಮಕರ ರಾಶಿ (Capricorn):

ಮಕರ ರಾಶಿಯವರಿಗೆ ಕಚೇರಿಯಲ್ಲಿ ಸಹೋದ್ಯೋಗಿಗಳಿಂದ ಸಂಪೂರ್ಣ ಬೆಂಬಲ ಸಿಗುವುದು. ಎಲ್ಲಾ ಕೆಲಸ ಸುಗಮವಾಗಿ ನಡೆಯುತ್ತದೆ. ವ್ಯವಹಾರದಲ್ಲಿ ದೊಡ್ಡ ಮಟ್ಟದ ಲಾಭವಾಗುವುದು. ಹಳೆಯ ಗ್ರಾಹಕರೊಂದಿಗೆ ಸಂಬಂಧ ಮತ್ತೆ ಚೇತರಿಸಿಕೊಳ್ಳುವುದು.

ಕುಂಭ ರಾಶಿ (Aquarius):

ಹೊಸ ಕೆಲಸ ಶುರು ಮಾಡುವುದಕ್ಕೆ ಸಮಯ ಸೂಕ್ತವಾಗಿದೆ. ವೃತ್ತಿಪರ ಸಂಪರ್ಕಗಳನ್ನು ವಿಸ್ತರಿಸಲು ಇದು ಉತ್ತಮ ಸಮಯ. ಉದ್ಯೋಗ ಬದಲಾವಣೆ ಮಾಡಬೇಕು ಅಂದುಕೊಂಡವರಿಗೆ ಸಮಯ ಅನುಕೂಲಕರವಾಗಿ ಇರುವುದು. ಒಳ್ಳೆಯ ಸುದ್ದಿ ಸಿಗುವ ಸಾಧ್ಯತೆಯಿದೆ. ಮಾರುಕಟ್ಟೆ ಪರಿಸ್ಥಿತಿ ಅರಿತು ಹೂಡಿಕೆ ಮಾಡಿದರೆ ಉತ್ತಮ ಲಾಭವಾಗುವುದು.

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಬುಧ ನೇರ ಸಂಚಾರಕ್ಕೆ ಮರಳುತ್ತಿದ್ದಂತೆ ಎಲ್ಲಾ ಸಮಸ್ಯೆಗಳೂ ಒಂದೊಂದಾಗಿಯೇ ಪರಿಹಾರವಾಗುವುದು. ಸಂವಹನ ಸಮಸ್ಯೆ, ತಾಂತ್ರಿಕ ತೊಂದರೆ, ತಪ್ಪುಗ್ರಹಿಕೆಗೆ ಪರಿಹಾರ ಸಿಗುವುದು. ಹಣಕಾಸಿನ ಹೂಡಿಕೆಗೆ ಬ್ಯಾಂಕಿಂಗ್ (banking) ವಹಿವಾಟು ಸುಧಾರಿಸಲು ಮತ್ತು ಪ್ರಮುಖ ಒಪ್ಪಂದಗಳಿಗೆ ಸಹಿ ಹಾಕಲು ಇದು ಅತ್ಯುತ್ತಮ ಸಮಯ. ವಿದ್ಯಾರ್ಥಿಗಳಿಗೆ ಈ ಅವಧಿ ಹೆಚ್ಚು ಅನುಕೂಲಕರವಾಗಿ ಇರುವುದು. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉತ್ತಮ ಸಾಧನೆ ಮಾಡುವ ಅವಕಾಶ ಸಿಗುವುದು. ವೃತ್ತಿ ಅಥವಾ ವ್ಯವಹಾರ ಕ್ಷೇತ್ರದಲ್ಲಿ ಲಾಭವಾಗುವುದು. ಈ ಹಿಂದೆ ಎದುರಿಸಿದ್ದ ಎಲ್ಲಾ ಆರ್ಥಿಕ ಸಮಸ್ಯೆಗಳು ಒಂದೊಂದಾಗಿಯೇ ಪರಿಹಾರವಾಗುವುದು. ನಿರಂತರ ಯಶಸ್ಸು ಇರುತ್ತದೆ.

deepavali festival zodiac sign luck

deepavali festival zodiac sign luck

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ