
ಶನಿವಾರಸಂತೆ: ಕಾಡಾನೆ ದಾಳಿಗೆ ಸಿಲುಕಿ ಭತ್ತದ ಬೆಳೆ ನಾಶ, ರೈತನಿಗೆ ಅಪಾರ ನಷ್ಟ
ಶನಿವಾರಸಂತೆ: ಇಲ್ಲಿಗೆ ಸಮೀಪದ ನಿಡ್ತ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೆಟ್ಟದಳ್ಳಿ ಗ್ರಾಮದ ಸುತ್ತಮುತ್ತ ಕಾಡಾನೆ ದಾಳಿಗೆ ಸಿಲುಕಿ ಗದ್ದೆಯಲ್ಲಿ ನಾಟಿ ಮಾಡಿದ್ದ ಭತ್ತ ನಾಶವಾಗಿದೆ.
ಬೆಟ್ಟದಳ್ಳಿ ಗ್ರಾಮದ ಗದ್ದೆಮನೆ ಲಕ್ಷ್ಮಣ ಶೆಟ್ಟಿ ಅವರಿಗೆ ಸೇರಿದ ಗದ್ದೆಗೆ ನುಸುಳಿದ 3 ಕಾಡಾನೆಗಳ ಹಿಂಡು ತಿಂಗಳ ಹಿಂದೆ ಗದ್ದೆಯಲ್ಲಿ ನಾಟಿ ಮಾಡಿದ ಭತ್ತ ಬೆಳೆಯನ್ನು ತುಳಿದು ಧ್ವಂಸಗೊಳಿಸಿದ್ದು, ಇದರಿಂದ ಅಪಾರ ಪ್ರಮಾಣದಲ್ಲಿ ನಷ್ಟವುಂಟಾಗಿದೆ ಎಂದು ಲಕ್ಷ್ಮಣ ಶೆಟ್ಟಿ ಅರಣ್ಯ ಇಲಾಖೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.