ಮಿಲಾಗ್ರಿಸ್ ಕಾಲೇಜಿನಲ್ಲಿ ‘ಪಿಲಿ ಗರ್ದ್’ ಸಾಂಸ್ಕೃತಿಕ ಪ್ರದರ್ಶನ

ಮಿಲಾಗ್ರಿಸ್ ಕಾಲೇಜಿನಲ್ಲಿ ‘ಪಿಲಿ ಗರ್ದ್’ ಸಾಂಸ್ಕೃತಿಕ ಪ್ರದರ್ಶನ

ಮಿಲಾಗ್ರಿಸ್ ಕಾಲೇಜಿನಲ್ಲಿ ‘ಪಿಲಿ ಗರ್ದ್’ ಸಾಂಸ್ಕೃತಿಕ ಪ್ರದರ್ಶನ

ಮಂಗಳೂರು: ಹಂಪನಕಟ್ಟೆಯ ಮಿಲಾಗ್ರಿಸ್ ಕಾಲೇಜಿನಲ್ಲಿ ಸಾಂಸ್ಕೃತಿಕ ಚಟುವಟಿಕೆ ಹಾಗೂ ದಸರಾ ಹಬ್ಬದ ಅಂಗವಾಗಿ ಈಗೆಚೆ ಹಮ್ಮಿಕೊಂಡಿದ್ದ ‘ಮಿಲಾಗ್ರಿಸ್ ಪಿಲಿ ಗರ್ದ್’ ಕಾರ್ಯಕ್ರಮ ಸಾಂಪ್ರದಾಯಿಕ ಹುಲಿವೇಷ ಕುಣಿತ, ಚಂಡೆ ವಾದನ ಸೇರಿದಂತೆ ವಿವಿಧ ಸಾಂಸ್ಕೃತಿಕ ಪ್ರದರ್ಶನಗಳಿಗೆ ವೇದಿಕೆ ಕಲ್ಪಿಸಿತು.

ಶ್ರೀಗುರು ತಂಡದವರ ಚಂಡೆ ಹಾಗೂ ಕೇರಳದ ಆದ್ಯಾ ವಿಜಯನ್ ಅವರಿಂದ ವಯೋಲಿನ್ ಜುಗಲ್‌ಬಂಧಿ ಗಮನ ಸೆಳೆಯಿತು. ಟೀಮ್ ಅಗೋರಿ ತಂಡದಿಂದ ಹುಲಿವೇಶ ಕುಣಿತಕ್ಕೆ ಪ್ರೇಕ್ಷಕರು ಮನಸೋತರು.

ಮಿಲಾಗ್ರಿಸ್ ಶಿಕ್ಷಣ ಸಂಸ್ಥೆಯ ಸಂಚಾಲಕ ಫಾ.ಐವನ್ ಮೈಕಲ್ ರಾಡ್ರಿಗಸ್ ಮಾತನಾಡಿ, ‘ಯಾವುದೇ ಮತ ಧರ್ಮ ಭೇದ ಇಲ್ಲದೆ ಎಲ್ಲರೂ ಸೇರಿ ಆಚರಿಸುವ ದಸರಾ ಹಬ್ಬವು ಭಾವೈಕ್ಯದ ಸಂಕೇತ’ ಎಂದರು. ಕಾಲೇಜಿನ ಪ್ರಾಂಶುಪಾಲ ಅಲ್ವಿನ್ ಸೆರಾವೊ, ಐಕ್ಯೂಎಸಿ ಸಂಯೋಜಕಿ ಚೇತನಾ ಕುಮಾರಿ, ಕಾರ್ಯಕ್ರಮ ಸಂಯೋಜಕ ಆಕಾಶ್ ಶೆಟ್ಟಿ, ಫ್ರೆನ್ಸಿಟಾ ಮೆನೆಜಸ್ ಮತ್ತಿತರರು ಭಾಗವಹಿಸಿದ್ದರು. ಮಮತಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ