ಉಡುಪಿ: ರೈತಪೀಠ ಪ್ರಶಸ್ತಿ ಇನ್ನು ದಕ್ಷಿಣ ಭಾರತಕ್ಕೆ ವಿಸ್ತರಣೆ

ಉಡುಪಿ: ರೈತಪೀಠ ಪ್ರಶಸ್ತಿ ಇನ್ನು ದಕ್ಷಿಣ ಭಾರತಕ್ಕೆ ವಿಸ್ತರಣೆ

ಉಡುಪಿ: ರೈತಪೀಠ ಪ್ರಶಸ್ತಿ ಇನ್ನು ದಕ್ಷಿಣ ಭಾರತಕ್ಕೆ ವಿಸ್ತರಣೆ

ಹೆಬ್ರಿ: ಸಂಜೀವಿನಿ ಗೋಧಾಮ ನೀಡುವ ರೈತಪೀಠ ಪ್ರಶಸ್ತಿಯು ಇನ್ನು ದಕ್ಷಿಣ ಭಾರತಕ್ಕೆ ವಿಸ್ತರಣೆಯಾಗಲಿದೆ. ಸಂಜೀವಿನಿ ಗೋಧಾಮದ ಸಂಸ್ಥಾಪಕ ಜಿ.ರಾಮಕೃಷ್ಣ ಆಚಾರ್‌ ಈ ವಿಷಯ ಪ್ರಕಟಿಸಿದರು.

ಈಚೆಗೆ ಸಂಜೀವಿನಿ ಗೋಧಾಮದಲ್ಲಿ ನಡೆದ ರೈತಪೀಠ ಪ್ರಶಸ್ತಿ ಆಯ್ಕೆ, ಪ್ರಶಸ್ತಿ ಪ್ರದಾನ ಸಮಾರಂಭ ಹಾಗೂ ಒಂದು ದಿನದ ಕೃಷಿ ಅನುಶೋಧನಾ ವಿಚಾರಗೋಷ್ಠಿಯ ಕುರಿತ ಸಮಾಲೋಚನಾ ಸಭೆಯಲ್ಲಿ ಈ ವಿಷಯ ಚರ್ಚಿಸಲಾಯಿತು.

ಮಹಾರಾಷ್ಟ್ರ, ಕರ್ನಾಟಕ, ತಮಿಳುನಾಡು, ಕೇರಳ, ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳ ಪ್ರಗತಿಪರ ಕೃಷಿಕರನ್ನು ಗುರುತಿಸಿ, ಆರು ರಾಜ್ಯಗಳಿಂದ ಮೂವರು ರೈತರನ್ನು ಪ್ರಶಸ್ತಿಗೆ ಆಯ್ಕೆ ಮಾಡಿ, ತಲಾ ₹1 ಲಕ್ಷ ನಗದು ಬಹುಮಾನ ನೀಡಲಾಗುವುದು. 2027ರ ಜನವರಿಯಲ್ಲಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದೆ ಎಂದು ರಾಮಕೃಷ್ಣ ಆಚಾರ್ ತಿಳಿಸಿದರು.

ರೈತರ ಆಯ್ಕೆಯ ಮಾನದಂಡಗಳು ಹಾಗೂ ಕೃಷಿ ವಿಚಾರಗೋಷ್ಠಿಯ ಕುರಿತು ಚರ್ಚೆ ನಡೆಯಿತು.

ರೈತಪೀಠ ಪ್ರಶಸ್ತಿಯ ಪ್ರಧಾನ ಕಾರ್ಯದರ್ಶಿ ನರೇಂದ್ರ ರೈ ದೇರ್ಲ, ಕೋಶಾಧಿಕಾರಿ ಸವಿತಾ ಆರ್‌ ಆಚಾರ್‌, ಕಾರ್ಯದರ್ಶಿ ದೇವಿಪ್ರಸಾದ್ ಶೆಟ್ಟಿ, ಕಾರ್ಕಳ ಜ್ಞಾನಸುಧಾ ಶಿಕ್ಷಣ ಸಂಸ್ಥೆಯ ಸುಧಾಕರ ಶೆಟ್ಟಿ, ಮೂಡುಬಿದರೆ ಆಳ್ವಾಸ್‌ನ ಡೀನ್ ವಾಸುದೇವ್, ಬ್ರಹ್ಮಾವರದ ಕೃಷಿ ವಿಜ್ಞಾನಿ ಚೈತನ್ಯ ಹಾಗೂ ಪ್ರಗತಿಪರ ಕೃಷಿಕ ಕಜಾನೆ ಎಗ್ರಿಕಲ್ಚರಲ್‌ ಫಾರ್ಮ್‌ ಮುಖ್ಯಸ್ಥ ನಟರಾಜ್ ಹೆಗ್ಡೆ ಹಿರಿಯಡ್ಕ, ಪ್ರಮುಖರಾದ ಸುದರ್ಶನ್‌ ಹೆಬ್ಬಾರ್‌ ಮುನಿಯಾಲು, ಸುಕೇಶ ಹೆಗ್ಡೆ ಕಡ್ತಲ, ಪ್ರಜ್ವಲ್‌ ಆರ್‌ ಆಚಾರ್‌, ಅನುಷಾ ಆಚಾರ್‌, ತೇಜಸ್‌ ಆರ್‌ ಆಚಾರ್‌, ರಕ್ಷಿತ್‌ ಆರ್‌ ಆಚಾರ್‌, ಅಜಿತ್‌, ಸಂಜಯ ಪ್ರಭು, ನಿಯಲ್‌, ಶ್ರೇಯಸ್‌, ಸುಕುಮಾರ್‌ ಮುನಿಯಾಲ್‌ ಉಪಸ್ಥಿತರಿದ್ದರು.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ