ಹುಬ್ಬಳ್ಳಿ: ಶೇಂಗಾ; ಆವಕ, ಗುಣಮಟ್ಟ ಕುಸಿತ

ಹುಬ್ಬಳ್ಳಿ: ಶೇಂಗಾ; ಆವಕ, ಗುಣಮಟ್ಟ ಕುಸಿತ

ಹುಬ್ಬಳ್ಳಿ: ಶೇಂಗಾ; ಆವಕ, ಗುಣಮಟ್ಟ ಕುಸಿತ

ಹುಬ್ಬಳ್ಳಿ: ಮುಂಗಾರು ಹಂಗಾಮಿನಲ್ಲಿ ಧಾರವಾಡ ಜಿಲ್ಲೆಯಾದ್ಯಂತ ವಾಡಿಕೆಗಿಂತ ಕಡಿಮೆ ಮಳೆ ಆಗಿದೆ. ಆದರೂ ಜಿಲ್ಲೆಯ ಕೆಲವೆಡೆ ನೀರಾವರಿ ಮತ್ತು ಮಳೆಯಾಶ್ರಿತ ಜಮೀನುಗಳಲ್ಲಿ ಬೆಳೆದ ಶೇಂಗಾವನ್ನು ರೈತರು ಇಲ್ಲಿನ ಅಮರಗೋಳದ ಕೃಷಿ ಉತ್ಪನ್ನ ಮಾರುಕಟ್ಟೆಗೆ (ಎಪಿಎಂಸಿ) ತರುತ್ತಿದ್ದಾರೆ.

ಇಲ್ಲಿಯ ಎಪಿಎಂಸಿ ಆವರಣದ ಕಾಳುಕಡಿ ವಿಭಾಗದ ರಸ್ತೆಯಲ್ಲಿ ರೈತರು ತಂದ ಶೇಂಗಾ ರಾಶಿ ಹಾಕಲಾಗಿದೆ. ಶೇಂಗಾ ಗುಣಮಟ್ಟ ಹಾಗೂ ಸ್ವಚ್ಛತೆ ಆಧಾರದ ಮೇಲೆ ವ್ಯಾಪಾರಸ್ಥರು ಬೆಲೆ ನಿಗದಿ ಮಾಡುತ್ತಿದ್ದಾರೆ. ಶೇಂಗಾ ಗುಣಮಟ್ಟದ ಆಧಾರದ ಮೇಲೆ ಕ್ವಿಂಟಲ್‌ಗೆ ಕನಿಷ್ಟ ₹1,500 ದರದಿಂದ ಗರಿಷ್ಟ ₹10,000 ವರೆಗೂ ವ್ಯಾಪಾರಸ್ಥರು ಖರೀದಿಸುತ್ತಾರೆ.

ಧಾರವಾಡ ತಾಲ್ಲೂಕು ಸೇರಿ ಹುಬ್ಬಳ್ಳಿ ತಾಲ್ಲೂಕಿನ ಶಿವಳ್ಳಿ, ಹೆಬ್ಬಳ್ಳಿ, ನವಲಗುಂದ, ಅಣ್ಣಿಗೇರಿ, ಕಲಘಟಗಿ, ಉಣಕಲ್‌, ಕುಂದಗೋಳ, ನರಗುಂದ, ಬಂಡಿವಾಡ ಸೇರಿದಂತೆ ಸುತ್ತಲಿನ ಗ್ರಾಮಗಳ ರೈತರು ಟ್ಯಾಕ್ಟರ್‌ಗಳಲ್ಲಿ ಶೇಂಗಾ ಚೀಲಗಳನ್ನು ತುಂಬಿಕೊಂಡು ಇಲ್ಲಿನ ಅಮರಗೋಳದ ಎಪಿಎಂಸಿಗೆ ಬರುತ್ತಾರೆ.

ಶೇಂಗಾ ಗುಣಮಟ್ಟ ಕುಸಿತ: ‘ಮುಂಗಾರಿನಲ್ಲಿ ನಿರೀಕ್ಷಿತ ಮಳೆ ಬಾರದ ಕಾರಣ ಜಿಲ್ಲೆಯಲ್ಲಿ ಶೇಂಗಾ ಇಳುವರಿ ಕುಸಿದಿದೆ. ಗುಣಮಟ್ಟದ ಕುಸಿತದಿಂದ ನಿರೀಕ್ಷಿತ ಬೆಲೆಗೆ ಶೇಂಗಾ ಮಾರಾಟ ಆಗುತ್ತಿಲ್ಲ. ಕಳೆದ ವರ್ಷ ಶೇಂಗಾ ಕ್ಷಿಂಟಲ್‌ಗೆ ಗರಿಷ್ಠ ₹6 ಸಾವಿರದವರೆಗೆ ಮಾರಾಟವಾಗಿತ್ತು. ಈ ವರ್ಷ ಬೆಲೆ ಅಧಿಕವಾಗಿದ್ದು, ಗುಣಮಟ್ಟದಲ್ಲಿ ಕುಸಿದಿದೆ’ ಎಂದು ಎಪಿಎಂಸಿ ಕಾರ್ಯದರ್ಶಿ ಕೆ.ಎಚ್‌.ಗುರುಪ್ರಸಾದ್‌ ತಿಳಿಸಿದರು.

ಪ್ರಸ್ತುತ ಮಾರುಕಟ್ಟೆಯಲ್ಲಿ ಶೇಂಗಾ ಆವಕ 3.786 ಕ್ವಿಂಟಲ್‌ ಇದ್ದು, ಗುಣಮಟ್ಟದ ಆಧಾರದ ಮೇಲೆ ಕನಿಷ್ಠ ₹1 ಸಾವಿರದಿಂದ ಗರಿಷ್ಠ ₹10 ಸಾವಿರದವರೆಗೆ ಬೆಲೆ ನಿಗದಿಪಡಿಸಲಾಗುತ್ತಿದೆ. ಸ್ವಚ್ಛತೆ ಮತ್ತು ತೇವಾಂಶದ ಆಧಾರದ ಮೇಲೆ ಶೇಂಗಾ ಖರೀದಿಸಲಾಗುತ್ತಿದೆ ಎಂದು ತಿಳಿಸಿದರು.

‘ಬಿತ್ತನೆ ಖರ್ಚೂ ಸಿಗುತ್ತಿಲ್ಲ’

‘ಒಂದು ಎಕರೆಯಲ್ಲಿ ಶೇಂಗಾ ಬೆಳೆಯಲು ಬಿತ್ತನೆ ಬೀಜ, ಆಳುಗಳ ಕೂಲಿ, ಔಷಧ, ಒಕ್ಕಣೆ ಸೇರಿದಂತೆ ಅಂದಾಜು ₹30 ಸಾವಿರವರೆಗೂ ಖರ್ಚಾಗುತ್ತದೆ. ಈ ವರ್ಷ ಪ್ರತಿ ಎಕರೆಗೆ ಅಂದಾಜು 5ರಿಂದ 6 ಕ್ವಿಂಟಲ್‌ ಶೇಂಗಾ ಬಂದಿದ್ದು, ಗುಣಮಟ್ಟದ ಕೊರತೆಯಿಂದ ಕ್ವಿಂಟಲ್‌ಗೆ ₹3 ಸಾವಿರದಿಂದ ₹4 ಸಾವಿರ ವರೆಗೆ ಮಾತ್ರ ಮಾರಾಟವಾಗುತ್ತಿದೆ. ಸಾಲ ಪಡೆದು ಶೇಂಗಾ ಬಿತ್ತನೆ ಮಾಡಿದ್ದೆ. ಆದರೆ, ಬಿತ್ತನೆ ಮಾಡಿದ ಖರ್ಚು ಕೂಡ ಕೈಗೆ ಸಿಗುತ್ತಿಲ್ಲ. ಸಾಲ ಹೇಗೆ ತೀರಿಸಲಿ ಎಂಬ ಚಿಂತೆ ಕಾಡುತ್ತಿದೆ’ ಎಂದು ರೈತ ಮಹಾರುದ್ರಪ್ಪ ಬೇಟಗೇರಿ ಅವಲತ್ತುಕೊಂಡರು.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ