ಬಾಗೇಪಲ್ಲಿ |ಪಡಿತರ ಚೀಟಿ ತಿದ್ದುಪಡಿಗೆ ಸರ್ವರ್ ಸಮಸ್ಯೆ, ಸಾರ್ವಜನಿಕರ ಪರದಾಟ

ಬಾಗೇಪಲ್ಲಿ |ಪಡಿತರ ಚೀಟಿ ತಿದ್ದುಪಡಿಗೆ ಸರ್ವರ್ ಸಮಸ್ಯೆ, ಸಾರ್ವಜನಿಕರ ಪರದಾಟ

ಬಾಗೇಪಲ್ಲಿ |ಪಡಿತರ ಚೀಟಿ ತಿದ್ದುಪಡಿಗೆ ಸರ್ವರ್ ಸಮಸ್ಯೆ, ಸಾರ್ವಜನಿಕರ ಪರದಾಟ

ಬಾಗೇಪಲ್ಲಿ: ಜಿಲ್ಲೆಯಲ್ಲಿ ಪಡಿತರ ಚೀಟಿ ತಿದ್ದುಪಡಿ, ಪರಿಷ್ಕರಣೆ ಹಾಗೂ ಇ–ಕೆವೈಸಿ ಪ್ರಕ್ರಿಯೆ ಪೂರ್ಣಗೊಳಿಸಲು ಸರ್ವರ್ ಹಾಗೂ ತಾಂತ್ರಿಕ ಸಮಸ್ಯೆಯಿಂದಾಗಿ ಸಾರ್ವಜನಿಕರು ಪರದಾಡುವಂತಾಗಿದೆ.

ತಾಲ್ಲೂಕು ಕಚೇರಿಯ ಆಹಾರ ವಿಭಾಗದ ಮುಂದೆ ಸೋಮವಾರ ಬೆಳಗ್ಗೆಯಿಂದ ಸರತಿಸಾಲಿನಲ್ಲಿ ಗಂಟೆಗಟ್ಟಲೆ ನಿಂತಿದ್ದರೂ ಬಯೋಮೆಟ್ರಿಕ್ ಆಗದೆ ಸಾರ್ವಜನಿಕರು ರಾಜ್ಯ ಸರ್ಕಾರದ ವಿರುದ್ಧ ಹಿಡಿಶಾಪ ಹಾಕುತ್ತಿದ್ದಾರೆ.

ಬೆಳಗ್ಗೆ 8 ರಿಂದ ಸಂಜೆಯವರೆಗೂ ಮಹಿಳೆಯರು, ಮಕ್ಕಳು, ಹಿರಿಯರು ಹಾಗೂ ಕೂಲಿ ಕಾರ್ಮಿಕರು, ವ್ಯಾಪಾರಸ್ಥರು ಕೆಲಸ ಬಿಟ್ಟು ಸರತಿ ಸಾಲಿನಲ್ಲಿ ದಿನವಿಡೀ ಕಾಯುವಂತಾಗಿದೆ.

ಪಡಿತರ ಚೀಟಿಯಲ್ಲಿ ಹೆಸರು ಸೇರ್ಪಡೆ, ತಿದ್ದುಪಡಿ, ವಿಳಾಸ, ಮೊಬೈಲ್ ಸಂಖ್ಯೆ ಬದಲಾವಣೆಗೆ ಆಹಾರ ಶಾಖೆ ಕೊಠಡಿಯಲ್ಲಿ ಜನರು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದಾರೆ. ಪಡಿತರ ತಿದ್ದುಪಡಿಗೆ ಕಚೇರಿ ಹಿಂಭಾಗದಲ್ಲಿ ಕೌಂಟರ್ ಮಾಡಲಾಗಿದೆ. ಅಲ್ಲಿ ನಿಲ್ಲಲು ಸೂಕ್ತ ಜಾಗವಿಲ್ಲದೆ ನಿಂತು ನಿಂತು ಸಾರ್ವಜನಿಕರು ಹೈರಾಣಾಗಿದ್ದಾರೆ.

ತಾಲ್ಲೂಕಿನ ಪಾತಪಾಳ್ಯ, ಚೇಳೂರು, ಗೂಳೂರು, ಮಿಟ್ಟೇಮರಿ, ಕಸಬಾ ಹೋಬಳಿಗಳಿಂದ ಪ್ರತಿದಿನ ನೂರಾರು ಸಂಖ್ಯೆಯಲ್ಲಿ ದೂರದ ಊರುಗಳಿಂದ ಮಕ್ಕಳ ಜೊತೆ ಮಹಿಳೆಯರು, ವೃದ್ಧರು ಪಡಿತರ ಚೀಟಿ ತಿದ್ದುಪಡಿಗೆ ಆಗಮಿಸುತ್ತಾರೆ. ಸರ್ವರ್ ಸಮಸ್ಯೆಯಿಂದಾಗಿ ಒಂದು ಪಡಿತರ ಚೀಟಿ ತಿದ್ದುಪಡಿ ಗಂಟೆಗಟ್ಟಲೇ ಬೇಕಾಗಿದೆ. ಹಾಗಾಗಿ ಜನರು ಅನಿವಾರ್ಯವಾಗಿ ದಿನವಿಡೀ ಕಾಯುವಂತಾಗಿದೆ. ಹಾಗಾಗಿ ಸಂಬಂಧಪಟ್ಟ ಅಧಿಕಾರಿಗಳು ಈ ಸಮಸ್ಯೆ ಸರಿಪಡಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಸರ್ವರ್ ಸಮಸ್ಯೆಯಿಂದಾಗಿ ಪಡಿತರ ಚೀಟಿ ತಿದ್ದುಪಡಿಗೆ ತೊಂದರೆ ಆಗುತ್ತಿದೆ. ತ್ವರಿತವಾಗಿ ಕಾರ್ಯನಿರ್ವಹಿಸುವ ಸರ್ವರ್ ಅಳವಡಿಸಲು ಜಿಲ್ಲಾಧಿಕಾರಿಗೆ ತಿಳಿಸಲಾಗಿದೆ. ಮನೀಷಾ ಎನ್ ಪತ್ರಿ, ತಹಶೀಲ್ದಾರ್

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ